ರಾಮನಾಥಪುರದಲ್ಲಿ ನಡೆದ ತಂಬಾಕು ವಹಿವಾಟು ೧೮೪. ೬೭ ಕೋಟಿಗೆ ಮಾರುಕಟ್ಟೆ ಮುಕ್ತಾಯ.

 ರಾಮನಾಥಪುರದ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ೧೨೬ ದಿವಸಗಳಲ್ಲಿ ನಡೆದ ತಂಬಾಕು ವಹಿವಾಟಿನ ಮುಕ್ತಾಯದ ಹರಾಜು ಮಾಹಿತಿಯನ್ನು ತಂಬಾಕು ಮಂಡಳಿ ಹರಾಜು ಮಾರುಕಟ್ಟೆಯ ಪ್ಲಾಟ್ ಪಾರಂ ೭ರ ಅಧೀಕ್ಷಕ ದೇವಾನಂದ್  ಹಾಗೂ ೬೩ರ ಹರಾಜು ಅಧೀಕ್ಷಕ ಸಿದ್ದರಾಮ್ ಡಾಂಗೆ ಅವರು ತಿಳಿಸಿದರು.

ಇಲ್ಲಿಯ ಸುಬ್ರಹ್ಮಣ್ಯನಗರದಲ್ಲಿರುವ ಪಾಟ್ಲ್ ಪಾರಂ ಹಾಗೂ ೬೩ರ ಎರಡು ತಂಬಾಕು ಹರಾಜು ಮಾರುಕಟ್ಟೆಗೆ ಪ್ರತಿನಿತ್ಯ ರೈತರು ಹೊಗೆಸೊಪ್ಪು ತರುತ್ತಿದ್ದು  ಕನಿಷ್ಟ ೬೦ರಿಂದ ಗರಿಷ್ಟ ೨೬೨ ರೂಗೆ ಕೊನೆಯ ದಿವಸ ಮಾರಾಟವಾಗಿದೆ. ಎರಡು ಹರಾಜು ಮಾರುಕಟ್ಟೆಗಳಲಲಿ ನಡೆದ ೧೨೬ ದಿವಸಗಳಲ್ಲಿ  ೧೮೪ ಕೋಟಿ ೬೭ ಲಕ್ಷ ಸಾವಿರ  ರೂ ವಹಿವಾಟು ನಡೆದಿದ್ದು, ೭೪ ಲಕ್ಷ ೯೪ ಸಾವಿರ ಕೆ.ಜಿ. ಮಾರಟವಾಗಿ ಪ್ರತಿ. ಕೆ.ಜಿ. ೧೧೫. ೭೦ ರೂ ಸರಸರಿ ದರ ರೈತರಿಗೆ ದೊರಕುತ್ತಿದೆ ಎಂದರು.

ತಂಬಾಕು ಬೇಲ್ ಕೊನೆಯ ದಿವಸ ಬಿಡ್ ಅದ ಬೇಲ್‌ಗಳು

ತಂಬಾಕು ಬೆಳೆ ಸಾಲದ ಮನ್ನ ಮಾಡುವಂತೆ ರೈತರ ಅಗ್ರಹ:- 

ರಾಮನಾಥಪುರದ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಕೊಳ್ಳುವ ಕಂಪನಿಯವರು ಪ್ರಥಮ ಎಕ್ಸ್ ದರ್ಜೆಗೆ ಮಾತ್ರ ಉತ್ತಮ ಬೆಲೆ ನೀಡಿ ಉಳಿದ ,,,೫ನೇ ದರ್ಜೆಯ ವರೆಗಿನ ಇಲ್ಲಾ ದರ್ಜೆಯ ತಂಬಾಕುಸೊಪ್ಪುನ್ನು ೫೫ ರಿಂದ ೧೦೦ ರೂವರೆಗೆ ಮಾತ್ರ  ಬೇಕಾಬಿಟ್ಟಿ ಹರಾಜು ಮಾಡಿ ರೈತರಿಗೆ ಭಾರಿ ಅನ್ಯಾಯ ಮಾಡಿದ್ದಾರೆ ಎಂದು ತಂಬಾಕು ಬೆಳೆಗಾರರರು ತಮ್ಮ ಅಳಲನ್ನು ತೊಡಿಕೊಂಡರು.

ರಾಮನಾಥಪುರ ಮಾರುಕಟ್ಟೆಯಲ್ಲಿ ಕೊನೆಯ ದಿವಸದ ಹರಾಜು ಪ್ರಕ್ರಿಯೇ ನಂತರ ಹೆಸರು ಹೇಳದ ಕೆಲವು ರೈತರು ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ೨೦೨೦ಕ್ಕೆ ಹಂತ ಹಂತವಾಗಿ ತಂಬಾಕು ಬೆಳೆ ನಿಷೇಧ ಮಾಡುತ್ತೆವೆ ಎನ್ನವ ಕೇಂದ್ರ ತಂಬಾಕು ಮಂಡಳಿಯವರು ರೈತರಿಗೆ ಬೇರೆ ಪರ್ಯಾಯ ಮಾರ್ಗವನ್ನು ಸುಚಿಸದೇ ರೈತರನ್ನು ಇಕ್ಕಟಿಗೆ ಸಿಲುಕಿಸುತ್ತಿದ್ದಾರೆ. ಹಾಲಿ ಲ್ಯೆಸಸ್ಸ್ ದಾರರಿಗೆ ತಂಬಾಕಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕರ್ನಾಟಕ ರಾಜ್ಯ ಹಾಗೂ ಆಂದ್ರ ರೈತರ ಮಧ್ಯ ಬೆಲೆಯಲ್ಲಿ ತಾರತ್ಯಮ ನಡೆಯುತ್ತಿದೆ. ಇದರ ಹಿಂದಿನ ಒಳಮರ್ಮವೇನು ಹಾಲಿ ಇರುವ ಲ್ಯೆಸಸ್ಸ್ ದಾರರಿಗೆ ಬೆಲೆಯನ್ನು ಕಡಿಮೆ ನೀಡುತ್ತಾರೆ. ಮತ್ತೆ ಹೊಸದಾಗಿ ಬೆಳೆಗಾರರಿಗೆ ಕಾಡ್ ಕೊಟ್ಟು ತಂಬಾಕು ಕೊಳ್ಳುತ್ತಾರೆ. ಹಾಗೂ ಹೆಚ್ಚುವರಿ ತಂಬಾಕು ಹರಾಜು ಮಾರುಕಟ್ಟೆ ಮಾಡುತ್ತೆವೆ ಎನ್ನುತ್ತಾರೆ ಇದರ ಒಳ ಮರ್ಮವೇನು ಎಂಬುದು ರೈತರಿಗೆ ತಿಳಿಯುತ್ತಿಲ್ಲ. ಇದರಿಂದ ತಂಬಾಕು ಬೆಳೆಗಾರ ಲ್ಯೆಸಸ್ಸು ದಾರರಿಗೆ ಬಹಳ ಅನ್ಯಾಯವಾಗುತ್ತಿದೆ ಎನ್ನುತಾರೆ ರೈತರು.


Post a Comment

Previous Post Next Post