ಹಾಸನ : ೨೦೨೧ ನೇ ಸಾಲಿನ ರಾಜ್ಯಮಟ್ಟದ ಮಹಾನಾಯಕ ಕಾವ್ಯ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಮನುಪುರ ಅವರ “ಬದುಕು-ಬೆಳಕು” ಕವಿತೆ ಪ್ರಥಮ ಸ್ಥಾನ ಹಾಗೂ ಮೂರು ಸಾವಿರ ನಗದು ಬಹುಮಾನ, ತುಮಕೂರು ಜಿಲ್ಲೆಯ ಲತಾಮಣಿ ಎಂ. ಕೆ. ತುರುವೇಕೆರೆಯವರ “ಧೃವತಾರೆ” ಕವಿತೆ ದ್ವಿತೀಯ ಸ್ಥಾನ ಹಾಗೂ ಎರಡು ಸಾವಿರ ನಗದು ಬಹುಮಾನ, ಕಲಬುರಗಿ ಜಿಲ್ಲೆಯ ನರಸಿಂಗರಾವ್ ಹೇಮನೂರ ಅವರ “ಮತ್ತೆ ಹುಟ್ಟಿ ಬಾ ಬಾಬಾ” ಕವಿತೆ ತೃತೀಯ ಸ್ಥಾನ ಹಾಗೂ ಒಂದು ಸಾವಿರ ನಗದು ಬಹುಮಾನ ಮತ್ತು ನಾರಾಯಣ್ ಕೆ.ಎನ್ ಅವರ “ಕ್ಷಮಿಸು ಗುರುವೇ” ಕವಿತೆ ಸಮಾಧಾನಕರ ಹಾಗೂ ಐದು ನೂರು ನಗದು ಬಹುಮಾನ ಜೊತೆಗೆ ಡಾ. ನಲ್ಲಿಕಟ್ಟೆ ಎಸ್.ಸಿದ್ದೇಶ್‌ರವರ “ಆತ್ಮಗೌರವದ ಆದಿತ್ಯ”, ದೇಸು ಆಲೂರುರವರ “ದಿಗಂತದೆಡೆಗೆ”, ಎಡೆಯೂರು ಪಲ್ಲವಿಯವರ “ನಿನ್ನ ಮಗಳು ಅಪ್ಪಾಜಿ”, ಸಿ.ಆರ್.ಸುರೇಶ್‌ರವರ “ಪುಣ್ಯ ಚೇತನ” ಮತ್ತು ಎಂ.ಶಿವಣ್ಣ ಆಲೂರುರವರ “ನನ್ನ ಅಂಬೇಡ್ಕರ್” ಕವಿತೆಗಳು ಮೊದಲ ಐದು ಉತ್ತಮ ಕವಿತೆಗಳಾಗಿ ಯುವಕವಿ ಹಾಗೂ ವಿಮರ್ಶಕ ರಾಜೇಶ್ ಬಿ.ಹೊನ್ನೇನಹಳ್ಳಿ, ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್, ಕವಿ ನಾಗರಾಜ್ ದೊಡ್ಡಮನಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಆಯ್ಕೆಮಾಡಿದೆೆ ಎಂದು ಪತ್ರಿಕೆಯ ಸಂಪಾದಕ ನಾಗರಾಜ್ ಹೆತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಸನದ ಭೀಮವಿಜಯ ಪತ್ರಿಕೆಯು ಯುವ ಸಾಹಿತಿ ಗಂಜಲಗೂಡು ಗೋಪಾಲೇಗೌಡ ಪ್ರಾಯೋಜಕತ್ವದಲ್ಲಿ “ಮಹಾನಾಯಕ” ಕುರಿತು ಕವಿತೆಗಳನ್ನು ಈಗಾಗಲೇ ಆಹ್ವಾನಿಸಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ೧೯೦ ಕವಿಗಳು ತಮ್ಮ ಕವಿತೆಗಳನ್ನು ಕಳುಹಿಸಿಕೊಟ್ಟಿದ್ದರು. ಪ್ರಶಸ್ತಿ ಪುರಸ್ಕೃತರಿಗೆ ೨೦೨೧ ಏಪ್ರಿಲ್ ೦೪ ಭಾನುವಾರದಂದು ನಾಗಭೂಮಿ ವಿವಿದೋದ್ದೇಶ ಅಭಿವೃದ್ಧಿ ಸಂಸ್ಥೆ(ರಿ), ಹಾಸನ ಇವರು ನಗರದ ಕಲಾಭವನದಲ್ಲಿ ಹಮ್ಮಿಕೊಂಡಿರುವ ಹಾಸನ ಜಿಲ್ಲಾ ಆರನೇ ದಲಿತ ಮತ್ತು ಜನಪರ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

Tags
ಹಾಸನ