೨೦೨೧-೨೨ನೇ ವರ್ಷದಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ಮುನ್ಸೂಚನೆ ಕೆ.ಹೆಚ್. ರವಿ ಮಾಹಿತಿ

ಹಾಸನ: ಈ ವರ್ಷ ಉತ್ತಮ ಮಳೆ ಆಗುವ ಮುನ್ಸೂಚನೆ ಇದ್ದು, ಮುಂಗಾರು ಹಂಗಾಮಿನ ಸಿದ್ಧತೆ ಬಗ್ಗೆ ಜಂಟಿ ಕೃಷಿ ನಿರ್ದೇಶಕರಾದ ಕೆ.ಹೆಚ್. ರವಿ ತಿಳಿಸಿದರು.


       ಜಂಠಿ ಕೃಷಿ ಇಲಾಖೆ ಕಛೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ೧೧೪೨ ಮಿ.ಮೀ ನಷ್ಟಿದ್ದು, ಕಳೆದ ಸಾಲಿನಲ್ಲಿ ೧೧೬೧ ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.೨ ರಷ್ಟು ಹೆಚ್ಚಿನ ಮಳೆಯಾಗಿದೆ. ಪ್ರಸಕ್ತ ೨೦೨೧-೨೨ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ ೪೨.೩ ಎಂ.ಎA. ವಾಡಿಕೆ ಮಳೆಯಿದ್ದು, ಇಲ್ಲಿಯವರೆಗೂ ೫೪.೬ ಎಂ.ಎA. ಮಳೆಯಾಗಿ ಶೇ.೨೯ ರಷ್ಟು ಹೆಚ್ಚು ಮಳೆಯಾಗಿದೆ. ಪ್ರಮುಖವಾಗಿ ಆಲೂರು, ಅರಕಲಗೂಡು, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ, ಸಕಲೇಶಪುರ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುತ್ತದೆ. ಬೇಲೂರು ಮತ್ತು ಹೊಳೆನರಸೀಪುರ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ೨೦೨೦ನೇ ಏಪ್ರಿಲ್ ಮಾಹೆಯಲ್ಲಿ ೫೪.೮ ಎಂ.ಎA. ವಾಡಿಕೆ ಮಳೆಗೆ ೫೪.೦ ಎಂ.ಎA. ಮಳೆಯಾಗಿ ಶೇ. ೧.೫ ರಷ್ಟು ಮಳೆಯ ಕೊರತೆ ಉಂಟಾಗಿತ್ತು. ೨೦೨೧-೨೨ ನೇ ಸಾಲಿನಲ್ಲಿ ಉತ್ತಮ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ಮುನ್ಸೂಚನೆ ಇರುತ್ತದೆ ಎಂದರು. ಹಾಸನ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚು ಬೆಳೆ ಪ್ರದೇಶ ಆವರಿಸುವುದರಿಂದ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ತಂಬಾಕು, ಭತ್ತ, ರಾಗಿ ಮುಸುಕಿನಜೋಳದ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಉತ್ತಮ ಮಳೆಯಾದರೆ ಹೆಚ್ಚಿನ ಪ್ರದೇಶದಲ್ಲಿ ದ್ವಿದಳ ದಾನ್ಯ ಬೆಳೆಗಳ ಬಿತ್ತನೆಯಾಗುವ ಸಾದ್ಯತೆಯಿದ್ದು, ಹೊಳೆನರಸೀಪುರ ಹಾಗೂ ಅರಕಲಗೂಡು ತಾಲ್ಲೂಕುಗಳಲ್ಲಿ ತಂಬಾಕು ಬೆಳೆಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದ ಅವರು, ನಾನಾ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು. 

      ಜಿಲ್ಲೆಯ ಬೆಳೆ ಪದ್ದತಿ ಆಧರಿಸಿ ಮುಂಗಾರು ಹಂಗಾಮಿಗೆ ೧,೪೦,೬೩೩ ಮೆ.ಟನ್. ರಸಗೊಬ್ಬರದ ಬೇಡಿಕೆಯಿದ್ದು, ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಹೆಚ್ಚಿನ ರಸಗೊಬ್ಬರ ಬೇಡಿಕೆ ಇರುವುದರಿಂದ ಮಾಹೆವಾರು ಹಂಚಿಕೆ ಮಾಡಲಾಗಿರುತ್ತದೆ. ಕಳೆದ ಸಾಲಿನಲ್ಲಿ ೧,೧೫,೧೮೭ ಮೆ.ಟನ್ ಬೇಡಿಕೆಗೆ ೧,೩೪,೫೫೭ ಮೆ.ಟನ್ ರಸಗೊಬ್ಬರ ಸರಬರಾಜಾಗಿದ್ದು ಬೇಡಿಕೆಗಿಂತ ೧೯೩೭೦ ಮೆ.ಟನ್ ಹೆಚ್ಚಿನ ರಸಗೊಬ್ಬರ ಸರಬರಾಜಾಗಿದ್ದು, ಕಳೆದ ಸಾಲಿಗಿಂತ ಪ್ರಸಕ್ತ ಸಾಲಿಗೆ ೬೦೭೬ ಮೆ.ಟನ್. ಹೆಚ್ಚುವರಿ ರಸಗೊಬ್ಬರ ಹಂಚಿಕೆ ಮಾಡಲಾಗಿರುತ್ತದೆ. ಪ್ರಸ್ತುತ ಎಲ್ಲಾ ಖಾಸಗಿ ಮಾರಾಟಗಾರರಲ್ಲಿ ಒಟ್ಟು ೩೨೩೫೧ ಮೆ.ಟನ್. ರಸಗೊಬ್ಬರ ದಾಸ್ತಾನಿದ್ದು, ಎಲ್ಲಾ ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಿ ರಸಗೊಬ್ಬರಗಳನ್ನು ಪಿ.ಓ.ಎಸ್ ಮಿಶಿನ್‌ನಲ್ಲಿ ವಿತರಿಸಬೇಕು ಎಂದರು. ಯಾವುದೇ ರೀತಿಯ ರಿಯಾಯಿತಿದರದ ರಸಗೊಬ್ಬರಗಳನ್ನು ಕೃಷಿಯೇತರ ಬಳಕೆಗೆ ಬಳಸುವುದನ್ನು ಕಾನೂನಾತ್ಮಕವಾಗಿ ನಿಷೇದಿಸಲಾಗಿರುತ್ತದೆ ಪ್ರಮುಖವಾಗಿ ಯೂರಿಯಾ ರಸಗೊಬ್ಬರವನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದ್ದು, ಈ ರೀತಿ ಕೃಷಿಯೇತರ ಚಟುವಟಿಕಗಳಿಗೆ ರಸಗೊಬ್ಬರಗಳನ್ನು ಬಳಕೆ ಮಾಡುವವರ ಹಾಗೂ ಸರಬರಾಜು ಮಾಡುವವರ ವಿರುದ್ದ ಅಗತ್ಯ ವಸ್ತುಗಳ ಕಾಯಿದೆ ೧೯೫೫ರಡಿರಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.ಈ ರೀತಿಯ ಪ್ರಕರಣಗಳನ್ನು ತಡೆಗಟ್ಟಲು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಪೋಲೀಸ್ ಇಲಾಖೆಯೊಂದಿಗೆ ಸಮಿತಿ ರಚಿಸಲಾಗಿರುವುದಾಗಿ ಎಚ್ಚರಿಸಿದರು. 

     ಜಿಲ್ಲೆಯಲ್ಲಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆ ಅನುಸಾರ ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್, ಬೋರಾಕ್ಸ್, ಸಾವಯವ ಗೊಬ್ಬರಗಳಾದ ಎನ್.ಪಿ.ಕೆ. ಕನ್ಸೇರ್ಷಿಯಾ, ಪಿ.ಎಸ್.ಬಿ, ಸಸ್ಯ ಸಂರಕ್ಷಣಾ ಔಷಧಿಗಳಾದ ಎಮೊಮೆಕ್ಟಿನ್ ಬೆನ್‌ಜೋಯೇಟ್, ಕ್ಲೋರೋಪೈರಿಪಾಸ್, ಕ್ವಿನಾಲಾಪಾಸ್, ಟ್ರೆöÊಕೋಡರ್ಮ, ಬೇವಿನ ಎಣ್ಣೆ, ಇತ್ಯಾದಿ ಪರಿಕರಗಳನ್ನು ದಾಸ್ತಾನಿಕರಿಸಲಾಗಿದೆ. ಈ ಯೋಜನೆಯಡಿಯಲ್ಲಿ ಸೂಕ್ಷö್ಮ ನೀರಾವರಿ ಹಾಗೂ ಹನಿ ನೀರಾವರಿ ಘಟಕಗಳನ್ನು ವಿತರಿಸುವ ಕಾರ್ಯಕ್ರಮವಿದ್ದು, ಈ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾನ್ಯ ರೈತರಿಗೆ ಶೇ.೪೫ರ ಸಹಾಯಧನದಡಿ, ಪರಿಶಿಷ್ಠ ಜಾತಿ ಮತ್ತು ಪಂಗಡದ ರೈತರಿಗೆ ಶೇ.೫೫ರ ಸಹಾಯಧನದಡಿಯಲ್ಲಿ ಸೂಕ್ಷö್ಮ ನೀರಾವರಿ ಹಾಗೂ ಹನಿ ನೀರಾವರಿ ಘಟಕಗಳನ್ನು ವಿತರಿಸಲು ಆದೇಶವಿರುತ್ತದೆ ಎಂದು ಹೇಳಿದರು. ಪ್ರೋಟ್ಸ್ ಐಡಿ ಯಾರು ಹೊಂದಿರುವುದಿಲ್ಲ ಅದನ್ನು ರೈತ ಸಂಪರ್ಕ ಕೇಂದ್ರದಲ್ಲಿ ಪಡೆಯಬಹುದಾಗಿದೆ. ರೈತರಿಗೆ ಇದು ತುಂಬ ಅನುಕೂಲಕರವಾಗಿದ್ದು, ಯಾವುದೇ ಸೌಲಭ್ಯ ಪಡೆಯಬೇಕಾದರೂ ಈ ಪ್ರೂಟ್ಸ್ ಐಡಿ ಅವಶ್ಯಕವಾಗಿರುತ್ತದೆ ಎಂದು ಸಲಹೆ ನೀಡಿದರು. ಆರ್.ಟಿ.ಸಿ., ಒಂದು ಆಧಾರ್ ಕಾರ್ಡ್ ಮತ್ತು ಒಂದು ಬ್ಯಾಂಕ್ ಖಾತೆ ಪ್ರತಿ ಕೊಟ್ಟರೆ ಸಾಕು. ಯಾವುದೇ ಸೌಲಭ್ಯದ ಹಣ ಪಡೆಯ ಬೇಕಾದರೇ ನೇರವಾಗಿ ರೈತರ ಖಾತೆಗೆ ಜಮವಾಗಲಿದೆ ಎಂದು ಉಪಯುಕ್ತವಾದ ಮಾಹಿತಿ ಕೊಟ್ಟರು.

      ಇದೆ ವೇಳೆ ಹಾಸನ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಇತರರು ಉಪಸ್ಥಿತರಿದ್ದರು.


Post a Comment

Previous Post Next Post