ಲಾಕ್ ಡೌನ್ ಎಫೆಕ್ಟ್ ಹಾಸನದಲ್ಲಿ ಹೆಚ್ಚಾದ ವಾಹನಗಳ ಓಡಾಟ.

ಹಾಸನ: ಕೊರೋನಾ ಎರಡನೇ ಅಲೆ ಹೆಚ್ಚಳದ ಹಿನ್ನಲೆಯಲ್ಲಿ ಈಗಾಗಲೇ ಸರಕಾರವು ೧೫ ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ತಮ್ಮ ಊರು ಸೇರಿಕೊಳ್ಳಲು ಪ್ರಯಾಣಿಕರು ಹೆಚ್ಚಾದ ಹಿನ್ನಲೆಯಲ್ಲಿ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟವು ಹಾಸನ ನಗರದಲ್ಲಿ ಹೆಚ್ಚಾಗಿತ್ತು.


        ಮಂಗಳವಾರ ರಾತ್ರಿ ೯ ಗಂಟೆಯಿAದ ಇನ್ನು ೧೫ ದಿನಗಳ ಕಾಲ ಯಾವ ವಾಹನವು ರಸ್ತೆಗಳಿಯದಂತೆ ನಿಯಮ ಜಾರಿ ಮಾಡಿರುವುದರಿಂದ ದೂರದ ಸ್ಥಳದಲ್ಲಿ ಇರುವವರು ಹಾಗೂ ದೂರದ ಸ್ಥಳಕ್ಕೆ ಹೋಗುವವರು ಹೆಚ್ಚಾದ್ದರಿಂದ ರಸ್ತೆಯಲ್ಲಿ ವಾಹನದ ಸಂಖ್ಯೆಯು ಹೆಚ್ಚಾಗಿರುವುದು ಕಂಡು ಬಂದಿತು. ಬೆಳಗಿನಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫೀಕ್ ಜಾಮ್ ಆಗುತ್ತಿತ್ತು. ಇನ್ನು ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬರುವುದು ಹೋಗುವುದರಲ್ಲೂ ಹೆಚ್ಚು ಜನ ಪ್ರಯಾಣಿಕರು ಇದ್ದರು. ಇನ್ನು ೧೫ ದಿನಗಳ ಕಾಲ ಆಹಾರ ಪದಾರ್ಥ  ಇತರೆ ಪ್ರಮುಖ ವ್ಯವಹಾರಗಳು ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೆ ಮಾತ್ರ ನಡೆಸಬೇಕಾಗಿದೆ.


Post a Comment

Previous Post Next Post