ಹಾಸನ: ಕೊರೋನಾ ಇರುವುದರಿಂದ ಸರಕಾರ ಜಾರಿಗೆ ತರಲಾಗಿರುವ ಕಾನೂನು ನಿಯಮವನ್ನು ಮಸೀದಿ ಗುರುಗಳ ಮೂಲಕ ಸಮುದಾಯದವರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದು ಈದ್ಗಾ ಮತ್ತು ದರ್ಗಾ ಕಮಿಟಿ ಮುಖ್ಯಸ್ಥರಾದ ಸಮೀರ್ ಅಹಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕೊರೋನಾದಿಂದ ಜನತೆ ತತ್ತರಿಸಿ ಹೋಗಿದ್ದು, ಮನುಷ್ಯನ ಜೀವ ಅತ್ಯಮುಲ್ಯವಾದುದ್ದು. ವಕ್ಫ್ ಬೋರ್ಡ್ ಸಂಸ್ಥೆ ಮತ್ತು ಅದರ ಅದಿನ ಸಂಸ್ಥೆಗಳು ಸರಕಾರದ ನಿಯಮ ಜಾರಿಗೆ ತಂದಿರುವುದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಎಲ್ಲಾ ಮಸೀದಿಗಳಲ್ಲಿ ಮಂಡಳಿ ಅಧ್ಯಕ್ಷೆ ಅಧ್ಯಕ್ಷತೆಯಲ್ಲಿ ಸಭೆ ಕರೆದು ತಿಳಿಸಲಾಗಿದೆ. ವ್ಯಾಕ್ಸೀನ್, ಮಾಸ್ಕ್, ಸ್ಯಾನೀಟೈಸರ್, ಸಾಮಾಜಿಕ ಅಂತರ ಬಗ್ಗೆಯೂ ಸಮುದಾಯದವರಿಗೆ ಅಲ್ಲಿನ ಗುರುಗಳ ಮೂಲಕ ಮನವರಿಕೆಯನ್ನು ಮಾಡಿಕೊಡಲಾಗುತ್ತಿದೆ ಎಂದರು. ಕೊರೋನಾ ಹಿನ್ನಲೆಯಲ್ಲಿ ಸರಕಾರ ಒಂದೆ ಅಲ್ಲ. ಅಲ್ಲಿನ ಜಿಲ್ಲಾಡಳಿತದ ಜೊತೆ ನಾನಾ ಸಂಘ-ಸAಸ್ಥೆಗಳು, ಉದ್ಯಮಿಗಳು ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೋವಿಡ್ ನಿಯಂತ್ರಣಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಒಂದು ಸಮಿತಿ ರಚನೆ ಮಾಡಿ ಕೋವಿಡ್ ನಿಧಿ ಸ್ಥಾಪನೆ ಮಾಡಿದರೇ ಒಂದು ಉತ್ತಮ ವಾತವರಣ ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಸರಕಾರವು ಕಡು ಬಡವರಾದ ಆಟೋ ಚಾಲಕರು, ಲಾರಿ ಚಾಲಕರು, ಬೀದಿಬದಿ ವ್ಯಾಪಾರಿಗಳಾಗಿರಬಹುದು, ಕಾರ್ಮಿಕರಾಗಿರಬಹುದು ಇವರಿಗೆಲ್ಲಾ ತಲಾ ೫ ಸಾವಿರ ರೂಗಳ ಸಹಾಯ ಧನವನ್ನು ನೀಡುವುದಾಗಿ ಕಳೆದ ವರ್ಷ ಲಾಕ್ ಡೌನ್ ನಲ್ಲಿ ಆದೇಶ ಮಾಡಿದ್ದರೂ ಪೂರ್ಣವಾಗಿ ಕೊಡಲಿಲ್ಲ ಎಂದು ದೂರಿದರು. ಮತ್ತೆ ಲಾಕ್ ಡೌನ್ ಆದೇಶ ನೀಡಿರುವುದರಿಂದ ಈಸಂದರ್ಭದಲ್ಲಾದರೂ ಬದುಕಲು ಸರಕಾರವು ಆರ್ಥಿಕ ಸಹಕಾರ ನೀಡಬೇಕು ಎಂದರು.
ಹಿಂದೆ ನಾವು ಆಹಾರದ ಕಿಟ್ಟನ್ನು ಬಡವರಿಗೆ ಹಂಚಿದ್ದೇವೆ.ಆಹಾರ ಮತ್ತು ಔಷಧದ ಪ್ಯಾಕೇಜುನ್ನು ಕಡು ಬಡವರಿಗೆ ಮೊದಲು ಕೊಟ್ಟು ನಂತರ ಲಾಕ್ ಡೌನ್ ಮಾಡಿದರೇ ಉತ್ತಮ. ಇನ್ನು ವೃದ್ಧಾಪ ವೇತನ, ವಿಧವ ವೇತನ ಹಾಗೂ ಅಂಗವಿಕಲರ ವೇತನವನ್ನು ಅನೇಕರಿಗೆ ಕಳೆದ ಮೂರು ತಿಂಗಳಾದರೂ ನೀಡಿರುವುದಿಲ್ಲ. ಅನೇಕರು ಈ ವೇತನವನು ನಂಬಿ ಜೀವನ ನಡೆಸುತ್ತಿದ್ದಾರೆ. ಸರಕಾರ ಕೂಡಲೆ ಗಮನ ಕೊಟ್ಟು ವೇತನ ನೀಡುವಂತಾಗಲಿ. ಇಂದು ವೆಂಟಿಲೇಟರ್, ಪಿಪಿ ಕಿಟ್, ಆಕ್ಸಿಜನ್ ಬಗ್ಗೆ ಸಮಸ್ಯೆ ಕಂಡು ಬರುತ್ತಿದೆ. ಎಲ್ಲಾವನ್ನು ಗಮನಹರಿಸಿ ಸರಿಪಡಿಸಬೇಕು ಎಂದು ಮನವಿ ಮಾಡಿದರು. ಕೊರೋನಾ ಕಡಿಮೆ ಆಗಬೇಕಾದರೇ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದೂಲ್ ಮುಜೀಬ್, ಉಪಾಧ್ಯಕ್ಷ ಮಹಮದ್ ಅಜ್ಮಲ್ ಉಪಸ್ಥಿತರಿದ್ದರು.