ಕೊಣನೂರು: ಗುರುವಾರ ಕಸಬಾ ಹೋಬಳಿಯ ಚೋಳೇನಹಳ್ಳಿ, ಮಲ್ಲಿಪಟ್ಟಣ ಹೋಬಳಿಯ ದಡದಹಳ್ಳಿ, ಕೊಣನೂರು ಹೋಬಳಿಯ ಬಿದರೂರು ಮತ್ತು ರಾಮನಾಥಪುರ ಹೋಬಳಿಯ ಜೆ.ಹೊಸಹಳ್ಳಿ ಯಲ್ಲಿ ತಲಾ ೧೬ ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿಮಾಣಕ್ಕಾಗಿ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಸಮೀಪದ ಬಿದರೂರಿನಲ್ಲಿ ಗುರುವಾರ ೧೬ ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಮನೆಯಲ್ಲಿ ಅಂಗನವಾಡಿಯನ್ನು ನಡೆಸಲಾಗುತ್ತಿತ್ತು. ಅದನ್ನು ತಪ್ಪಿಸಲು ಸ್ವಂತ ಕಟ್ಟಡಕ್ಕಾಗಿ ನೂತನ ಅಂಗನವಾಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಕಟ್ಟಡವು ಗುಣಮಟ್ಟದಲ್ಲಿ ನಿರ್ಮಾಣವಾಗುವಂತೆ ಆಸಕ್ತಿವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಗಣೇಶ್, ಸದಸ್ಯ ಸುಮತಿ ರಾಜೇಗೌಡ, ಯಶೋಧಾ ಕೃಷ್ಣ, ಅರ್ಪಿತಾ ಮನು, ಸಾಕಮ್ಮ ಮಂಜೇಗೌಡ, ಸಿ ಡಿ ಪಿ ಓ ಹರಿಪ್ರಸಾದ್, ಗ್ರಾ.ಪಂ ಪಿ ಡಿ ಓ ದೇವರಾಜು, ಕಂದಾಯ ನಿರೀಕ್ಷಿಕ ಮಂಜುನಾಥ್, ಗ್ರಾಮ ಲೆಕ್ಕಿಗ ಪ್ರವೀಣ್, ಮುಖಂಡ ಮಾದೇಶ್, ಬಿ.ಆರ್.ನಾಗರಾಜ, ದ್ಯಾಮಪ್ಪನ ಶಿವಣ್ಣ, ಮಲ್ಲೇಶಪ್ಪ, ಪುಟ್ಟರಾಜು, ಕಾಡಯ್ಯನ ರಘು ಮತ್ತು ಗ್ರಾಮಸ್ಥರಿದ್ದರು
