ಕೋವಿಡ್ ಯಾವುದೇ ಕೊರತೆಯಿಂದ ಸಾವುನೋವು ಸಂಭವಿಸಲು ಬಿಡುವುದಿಲ್ಲ : ಸಂಸದೆ ಸುಮಲತಾ

ಮಂಡ್ಯ. ಮೇ.03:- ಕೋವಿಡ್ ಎರಡನೇ ಅಲೆ ದೇಶದ ಇತರೆಡೆಗಳಂತೆ ಮಂಡ್ಯದಲ್ಲೂ ಭಾರಿ ಸವಾಲುಗಳನ್ನು ತಂದೊಡ್ಡಿದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ ಆಡಳಿತ ವ್ಯವಸ್ಥೆ ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಸಾಕಷ್ಟು ಒತ್ತಡ ತಂದಿದೆ. ಅವರೆಲ್ಲರೂ ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಈ ಮಹಾಮಾರಿ ಇಂದ ಪಾರಾಗಲು ಸಾಧ್ಯ ಎಂದು ಲೋಕಸಭಾ ಸದಸ್ಯರಾದ ಸುಮಲತಾಅಂಬರೀಶ್   ಹೇಳಿದರು.
ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕಿನ ತಹಶೀಲ್ದಾರ್ ಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು,  ಎಂದಿನಂತೆ ನಾನು ಮಂಡ್ಯ ಕ್ಷೇತ್ರದ ಆಡಳಿತ ಅಧಿಕಾರಿಗಳು, ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಪ್ರತಿದಿನ ಬೆಡ್ ಗಳಿಗಾಗಿ, ಔಷಧಿಗಾಗಿ, ಆಕ್ಸಿಜನ್ ವ್ಯವಸ್ಥೆಗಾಗಿ ತುರ್ತು ಕೋರಿಕೆಗಳು ಬರುತ್ತಲೇ ಇವೆ. ಇವುಗಳನ್ನು ಸಮರೋಪಾದಿಯಲ್ಲಿ ವ್ಯವಸ್ಥೆ ಮಾಡುವ ಕೆಲಸ ಪ್ರತಿದಿನ ನಡೆಯುತ್ತಿದೆ ಎಂದರು.
 ಈ ಎರಡನೇ ಅಲೆ ಬಂದಾಗಿನಿಂದ ಹಿಂದಿಗಿಂತಲೂ ಅತಿ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ. ರಾಜ್ಯದ ಆರೋಗ್ಯ ಸಚಿವ ರಾದ  ಸುಧಾಕರ್ ಅವರ ಜೊತೆಗೂ ನೇರ ಸಂಪರ್ಕದಲ್ಲಿದ್ದು ಅವರು ಇದುವರೆಗೂ ನಮ್ಮ ಎಲ್ಲಾ ಅವಶ್ಯಕತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಇದಕ್ಕೂ ಮಿಗಿಲಾಗಿ ಮುಂದೆ ಬರಬಹುದಾದ ಇನ್ನಷ್ಟು ಬೇಡಿಕೆಗಳಿಗೆ ಈಗಲೇ ವ್ಯವಸ್ಥೆ ಮಾಡುವ ಕೆಲಸಗಳು ನಡೆಯುತ್ತಿವೆ. ಬೆಡ್ ಮ್ಯಾನೇಜ್ಮೆಂಟ್ ಎಂಬ ಕ್ರಿಯಾ ಯೋಜನೆಯಡಿ ಸರ್ಕಾರದಿಂದ ಅನುಮತಿ ಪಡೆದು ಜಿಲ್ಲೆಯ ಖಾಸಗಿ ಆಸ್ಪತ್ರೆಗಳಾದ ಸ್ಯಾಂಜೋ ಆಸ್ಪತ್ರೆ, ಜಿ. ಮಾದೇಗೌಡ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಏಮ್ಸ್ ಆಸ್ಪತ್ರೆಯಲ್ಲಿ ತೀವ್ರ ತುರ್ತು ಪರಿಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು. 

ಗಾಮೆರ್ಂಟ್ಸ್ ಕಾರ್ಮಿಕರಿಗೆ ಆರ್ಥಿಕ ಪರಿಹಾರ ಹಾಗೂ ಕೆಲಸ ಮಾಡಲು ಅವಕಾಶ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಮಾರನೇ ದಿನ ಸರಕಾರ 50% ಕೆಲಸಗಾರರಿಗೆ ಅವಕಾಶ ಕೊಟ್ಟಿದೆ. ಆರ್ಥಿಕ ಪರಿಹಾರಕ್ಕೆ ಪ್ರಯತ್ನ ಮುಂದುವರೆದಿದೆ ಎಂದರು.

ಮುಂದೆ ಆಕ್ಸಿಜನ್ ಗಾಗಿ ಹೆಚ್ಚಾಗಬಹುದಾದ ಬೇಡಿಕೆ, ಹೆಚ್ಚಿನ ಔಷಧಿ ವ್ಯವಸ್ಥೆ, ಬೆಡ್ ಮ್ಯಾನೇಜ್ಮೆಂಟ್ ವಿಷಯಗಳ ಕುರಿತು ಸರಕಾರ ಹಾಗೂ ಅಧಿಕಾರಿಗಳ ಜೊತೆ ತುರ್ತು ಪ್ರಕ್ರಿಯೆ ಮುಂದುವರೆದಿದೆ. ಎಂದಿನಂತೆ ಇಂದೂ ಕೂಡ ಮಂಡ್ಯದ ಜಿಲ್ಲಾಧಿಕಾರಿಗಳ ಜೊತೆಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ಮಾಡುವ ಕುರಿತಾಗಿ ಮಾತುಕತೆ ನಡೆಸಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಖಿhe ಓಚಿಣioಟಿಚಿಟ ಆisಚಿsಣeಡಿ ಖesಠಿoಟಿse ಈuಟಿಜ (ಓಆಖಈ) ಮೂಲಕ 10 ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ. ಈ ಅನುದಾನವನ್ನು ತಾಸಿಲ್ದಾರ್ ಗಳ ಬೇಡಿಕೆಗೆ ಅನುಗುಣವಾಗಿ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಕೊಡಿಸಲಾಗಿದೆ. ಈ ಮೊತ್ತ ಕೋವಿಡ್ ವಿರುದ್ಧದ ಕೆಲಸಗಳಿಗೆ ಬಳಸಲಾಗುತ್ತದೆ ಎಂದರು. 

ಜಿಲ್ಲೆಯ ಡಿಸ್ಟ್ರಿಕ್ಟ್ ಮಿನರಲ್ ಫಂಡ್ (ಡಿಎಂಎಫ್) ಖಾತೆಯಲ್ಲಿ ಖs.2.5 ಕೋಟಿ ರೂಪಾಯಿಗಳಿವೆ. ಈ ಮೊತ್ತವನ್ನು ವೈದ್ಯಕೀಯ ಸಲಕರಣೆಗಳು ಮತ್ತು ಉಪಕರಣಗಳನ್ನು ಖರೀದಿಸಲು ಬಳಸುವ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರ ಜೊತೆಗೆ ಚರ್ಚಿಸಲಾಗಿದೆ. ಆದಷ್ಟು ಬೇಗ ಇದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಪೆÇಲೀಸ್ ಸಿಬ್ಬಂದಿ ಕೋವಿಡ್ ವಿರುದ್ಧ ಮುಂಚೂಣಿ ಹೋರಾಟದಲ್ಲಿದ್ದಾರೆ. ಸಿಬ್ಬಂದಿಗಳಲ್ಲಿ ಹಲವರಿಗೆ ಕೋವಿಡ್ ವ್ಯಾಕ್ಸಿನ್ ದೊರೆತಿದೆ. ಎಲ್ಲಾ ಪೆÇಲೀಸರಿಗೆ ವ್ಯಾಕ್ಸಿನ್ ತುರ್ತು ಅಗತ್ಯವಾಗಿದ್ದು, ಪ್ರತಿಯೊಬ್ಬರಿಗೂ 2 ಡೋಸ್ ವ್ಯಾಕ್ಸಿನ್ ಸಿಗುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.
  ಲಸಿಕೆ ಪಡೆದಿರುವ ಮಾಹಿತಿ ಪಡೆದು ಜಿಲ್ಲೆಯಾದ್ಯಂತ ಲಸಿಕೆ ನೀಡಲು ಕ್ರಮವಹಿಸಲು ಸೂಚಿಸಿ ಪೆÇಲೀಸ್ ಇಲಾಖೆಯಿಂದ ಅನಗತ್ಯವಾಗಿ ಓಡಾಡುವವರಿಗೆ ಬ್ರೇಕ್ ಹಾಕಿ ಕರೋನಾ ಮಾರ್ಗಸೂಚಿ ಗಳನ್ನು ಪಾಲಿಸಲು ಜನರಿಗೆ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಲು ಸೂಚಿಸಿ, ಹಳ್ಳಿಗಳಲ್ಲಿ ಮಾಸ್ಕ್ ಧರಿಸುವಿಕೆ, ಸ್ವಚ್ಚತೆ, ಹಾಗೂ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಿ ಎಂದು ಜಿ.ಪಂ ಸಿ.ಇ.ಒ ಗೆ ಸೂಚಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಅವಶ್ಯಕತೆ ಹೆಚ್ಚಾಗುವ ಸಾಧ್ಯತೆ ಇದೆ. ಲಿಕ್ವಿಡ್ ಬೇಸ್ಡ್ ಆಕ್ಸಿಜನ್ ರೀಫಿಲ್ಲಿಂಗ್ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಂಡ್ಯಕ್ಕೆ ತನ್ನದೇ ಆದ ಸ್ವಂತ ಆಕ್ಸಿಜನ್ ಘಟಕ ಬೇಕು. ಪ್ರಸಾದ್ ಇಂಡಸ್ಟ್ರಿಯಲ್ ಗ್ಯಾಸ್ ಎನ್ನುವ ಸಂಸ್ಥೆ ಈ ವಿಷಯವಾಗಿ ಮುಂದೆ ಬಂದಿದ್ದು ಕೆಲವು ಸವಲತ್ತುಗಳನ್ನು ಕೇಳಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಇದರ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ ಮತ್ತು ಅವರಿಗೆ ಕೊಡಬೇಕಾಗಿರುವ ಸೌಲಭ್ಯಗಳು (ಟiquiಜ ಣಚಿಟಿಞ ಮುಂತಾದವು) ಮತ್ತು ಅನುಮತಿಗಳನ್ನೂ ಅತಿ ಶೀಘ್ರದಲ್ಲಿ ಜಾರಿ ಮಾಡುವಂತೆ ತಿಳಿಸಿದ್ದೇನೆ. ಕೋವಿಡ್ ಮೂರನೇ ಅಲೆ ಬರುವ ಮುಂಚೆ 13ಏಐ ಆಕ್ಸಿಜನ್ ಸಾಮಥ್ರ್ಯ ಪಡೆಯುವತ್ತ ಜಿಲ್ಲೆ ಹೆಜ್ಜೆ ಹಾಕಿದೆ ಎಂದರು. 

ಜಿಲ್ಲಾಧಿಕಾರಿಗಳು ಮತ್ತು ಆಊಔ ಅವರು ಮಂಡ್ಯ ಜಿಲ್ಲೆಗೆ ಪ್ರತಿದಿನ 3ಏಐ ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ತಿಳಿಸಿದರು, ಇದರಲ್ಲಿ 2ಏಐ ನಷ್ಟು ಆಕ್ಸಿಜನ್ ಸಂಬಂಧಪಟ್ಟ ಕೇಂದ್ರಗಳ ಜೊತೆಗೆ ವೈಯಕ್ತಿಕವಾಗಿ ಮಾತನಾಡಿ ಪ್ರತಿದಿನ ಸಿಗುವಂತೆ ಕೂಡಲೇ ವ್ಯವಸ್ಥೆ ಮಾಡಿದ್ದೇನೆ. ಜಿಲ್ಲೆಗೆ ಅವಶ್ಯಕತೆಯಿರುವ ಅಷ್ಟು ಆಕ್ಸಿಜನ್ ದೊರಕಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು-ನೋವು ಜಿಲ್ಲೆಯಲ್ಲಿ ಸಂಭವಿಸಲು ಬಿಡುವುದಿಲ್ಲ ಎಂದರು.

ಮುಂದೆ ನಸ್ರ್ಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರ ಅವಶ್ಯಕತೆ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಮರೋಪಾದಿಯಲ್ಲಿ ತುಂಬಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಏಂದು ಹೇಳಿದರು.

ಈಗಾಗಲೇ ತಜ್ಞ ರ ಪ್ರಕಾರ ಎರಡನೇ ಅಲೆ ಮುಗಿದ ತಕ್ಷಣ ಮೂರನೇ ಕೋವಿಡ್ ಅಲೆಯ ಬಗ್ಗೆ ಮುನ್ಸೂಚನೆ ನೀಡಿದ್ದಾರೆ ಆದ್ದರಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಪೂರ್ವ ಸಿದ್ದತೆಯೊಂದಿಗೆ ಕೋವಿಡ್ ನಿಯಂತ್ರಿಸಲು ಸಿದ್ಧರಾಗುತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಶ್ವಥಿ, ಪೆÇಲೀಸ್ ವರಿμÁ್ಠಧಿಕಾರಿ ಡಾ.ಅಶ್ವಿನಿ, ಜಿ.ಪಂ ಸಿ.ಇ.ಒ ದಿವ್ಯಾ ಪ್ರಭು, ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ಮಿಮ್ಸ್ ನಿರ್ದೇಶಕರಾದ ಹರೀಶ್ , ಜಿಲ್ಲಾ ಸರ್ವೇಕ್ಷಣಧಿಕಾರಿಗಳಾದ ಸಂಜಯ್, ವಾರ್ತಾಧಿಕಾರಿ ಟಿ.ಕೆ ಹರೀಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Post a Comment

Previous Post Next Post