ಹಾಸನ: ಕೊರೋನಾ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೆ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ರಾಜ್ಯ ಸರ್ಕಾರ ಪರಿಗಣಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಶ್ಲಾಘಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಹಾವಳಿ ಸಂದರ್ಭದಲ್ಲಿ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಫ್ರಂಟ್‌ಲೈನ್ ವಾರಿಯರ್ಸ್ ಎಂದು ರಾಜ್ಯ ಸರ್ಕಾರ ಪರಿಗಣಿಸಿರುವುದು ಸ್ವಾಗತಾರ್ಹ ಹಾಗೂ ಈ ನಿರ್ಧಾರಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಕೇಂದ್ರ ಸರ್ಕಾರವು ಸಹ ಪತ್ರಕರ್ತರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿದ್ದು, ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಹ ಮುಖ್ಯಮಂತ್ರಿಗಳು ಕೇಂದ್ರದ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ ರಾಜ್ಯದ ಎಲ್ಲಾ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ತಿಳಿಸಿದ್ದಾರೆ ಎಂದರು. ಈ ಸಂಬAಧ ಹಲವು ಬಾರಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿತ್ತು. ಹಗಲು ರಾತ್ರಿ ಎನ್ನದೆ ಸಮಾಜದ ಸ್ವಾಸ್ಥ÷್ಯ ಕ್ಕಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ಒಳಿತಿಗೆ ಸರ್ಕಾರದಿಂದ ಇದು ಉತ್ತಮ ತೀರ್ಮಾನವಾಗಿದೆ. ಕೊರೋನಾ ವಾರಿಯರ್ಸ್ ಆದ ಪತ್ರಕರ್ತರಿಗೆ ವಿಮೆ ಮಾಡಿಸಬೇಕು. ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರಿಗೆ ನೆರವಿನ ಅಗತ್ಯವಿದೆ. ಈ ಸಂಬAಧ ಸಿಎಂ ಗಮನಕ್ಕೆ ತಂದಿದ್ದು ,ವಿಮೆ ಜಾರಿ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತವು ಕೂಡಲೆ ಸೂಕ್ತ ಕ್ರಮವಹಿಸದಿದ್ದರೆ ಚಾಮರಾಜನಗರದಲ್ಲಿ ಬಂದAತಹ ಸ್ಥಿತಿ ಹಾಸನ ಜಿಲ್ಲೆಯಲ್ಲೂ ಬರಲಿದೆ. ಸರಕಾರಿ ಆಸ್ಪತ್ರೆಗೆ ಹೋದರೆ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ತರಲು ರೋಗಿಗಳ ಸಂಬAಧಿಗಳಿಗೆ ಹೇಳಲಾಗುತ್ತಿದೆ. ೧೮ ಸಾವಿರ ಕ್ಕೆ ರೆಮೆಡಿಸಿವರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ
ಮಾಡಲಾಗುತ್ತಿದೆ ಇದನ್ನು ಹೇಳೋರು ಕೇಳೋರು ಇಲ್ಲ ಎಂದು ದೂರಿದರು. ಹಾಸನದಲ್ಲಿ ಪ್ರತಿನಿತ್ಯ ರೆಮೆಡಿಸಿಮಿರ್ ಚುಚ್ಚುಮದ್ದು ೫೦೦ ರಷ್ಟು ಬೇಕಿದೆ ಆದರೆ.ಕಡಿಮೆ ಪೂರೈಕೆ ಆಗುತ್ತಿದೆ. ೧೧೪೩೦ ಸಕ್ರಿಯ ಪ್ರಕರಣ ಇದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮಾರಾಟ ದಂಧೆ ನಡೆಯುತ್ತಿದೆ ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ. ಪ್ರತಿ ಲೀಟರ್ ಗೆ ಆಕ್ಸಿಜನ್ ೨೧ ರೂ ಇದ್ದು, ನೆರೆ ಜಿಲ್ಲೆ ಚಿಕ್ಕಮಗಳೂರಿಗೆ ೫೫ ರೂಗೆ ಮಾರಾಟ ಮಾಡಲಾಗುತ್ತಿದೆ. ಇದು ಆಸ್ಪತ್ರೆಯ ದಾಖಲೆ ಅಷ್ಟೆ. ಪತ್ತೆಯಾಗದ ಪ್ರಕರಣ ೨೦ ಸಾವಿರ ಗಡಿ ದಾಟಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳೆ ಹೇಳಿರುವಂತೆ ಜಿಲ್ಲೆಯ ಆಸ್ಪತ್ರೆಗಳಿಗೆ ದಿನ ನಿತ್ಯ ೬೫೦ ಆಕ್ಸಿಜನ್ ಸಿಲೆಂಡರ್ ಬೇಕಿದೆ ಆದರೆ ೪೩೦ ಸಿಲೆಂಡರ್ ಪೂರೈಕೆ ಆಗುತ್ತಿದೆ. ಜನರ ಪ್ರಾಣದೊಂದಿಗೆ ಯಾರು ಚೆಲ್ಲಾಟವಾಡಬಾರದು. ಜಿಲ್ಲೆಯ ಪ್ರತಿ ತಾಲ್ಲೂಕಿಗೆ ೨೫ ಲಕ್ಷ
ಕೊಡಲಾಗುವುದು ಎಂದು ಹೇಳಿದ್ದರು ಆದರೆ ಇನ್ನು ಬಿಡುಗಡೆ ಆಗಿರುವುದಿಲ್ಲ. ನೆನ್ನೆ ಸಭೆಯಲ್ಲಿ ನಾಲ್ಕು ದಿನದಲಾಕ್ ಡೌನ್ ನಿರ್ಧಾರ ಸಂಜೆ ವೇಳೆಗೆ ಬದಲಾಗುತ್ತೆ ಎಂದರೆ ಈ ಬದಲಿ ನಿರ್ಧಾರಕ್ಕೆ ಕಾಣದ ಕೈ ಕೆಲಸ ಮಾಡಿದೆ ಎಂದು ನೀವೆ ತೀರ್ಮಾನ ಮಾಡಬಹುದಾಗಿದೆ ಎಂದು ಟೀಕಿಸಿದರು.
ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರಿಗೆ ಕನಿಷ್ಠ ೨೦೦೦ ರೂ ನೆರವು ಹಾಗೂ ಅಗತ್ಯ ಆಹಾರ ಪದಾರ್ಥ ಒದಗಿಸುವುದು ಅಗತ್ಯವಿದೆ. ಜಿಲ್ಲೆಯಲ್ಲಿ ಒಂದು ವಾರದಿಂದ ಈಚೆಗೆ ಪ್ರತಿದಿನ ೧೦ ಕ್ಕೂ ಹೆಚ್ಚು ಮಂದಿ ಕೊರೋನಾ ಸೊಂಕಿಗ ಸಾವೀಗೀಡಾಗುತ್ತಿದ್ದಾರೆ. ಸಮರ್ಪಕ ಪರೀಕ್ಷೆ ನಡೆದರೆ ಶೇ.೫೦ ಕ್ಕೂ ಹೆಚ್ಚು
ಮಂದಿ ಪಾಸಿಟಿವ್ ಕೇಸ್ ಇರುವ ವ್ಯಕ್ತಿಗಳು ಪತ್ತೆಯಾಗಲಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆ ನಿಯಂತ್ರಣ ಕ್ಕೆ ಸರ್ಕಾರ ನಿರಾಸಕ್ತಿ ತೋರಿಸಬಾರದು. ಮಂತ್ರಿಗಳಿಗೆ ಕೊರೋನಾ ಹತೋಟಿಗೆ ಸಮಿತಿ ರಚಿಸಿ ಪಂಚ ಅಶೋಕ್, ಸುದಾಕರ್ ಸೇರಿದಂತೆ ಪಂಚ ಪಾಂಡವರಿಗೆ ವಿವಿಧ ಕ್ಷೇತ್ರವನ್ನು ಹಂಚಿಕೆ ಮಾಡಿದ್ದು, ಮುಂದೆ ಇವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಕಾದು ನೋಡಬೇಕಾಗಿದೆ ಎಂದು ಹೇಳಿದರು.