ಖಾಸಗಿ ಆಸ್ಪತ್ರೆಯ ಆಕ್ಸಿಜನ್ ಸ್ಥಿತಿ, ಬೆಡ್, ಚುಚ್ಚುಮದ್ದುಗಳ ವ್ಯವಸ್ಥೆ ಕುರಿತು ನೋಡಲ್ ಅಧಿಕಾರಿಗಳ ಗಮನವಹಿಸಲಿ

ಹಾಸನ :- ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ ಆಮ್ಲಜನಕದ ಸ್ಥಿತಿ, ಬೆಡ್‌ಗಳ ವ್ಯವಸ್ಥೆ, ಚುಚ್ಚುಮದ್ದುಗಳ ವ್ಯವಸ್ಥೆ ಕುರಿತು ನೋಡಲ್ ಅಧಿಕಾರಿಗಳ ಗಮನದಲ್ಲಿರುವಂತೆ ಆಸ್ಪತ್ರೆಗಳು ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದರು.


      ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಗುರುವಾರ ನಡೆದ ಖಾಸಗಿ ಆಸ್ಪತ್ರೆಯ ಮಾಲೀಕರ ಜೊತೆ ನಕದ ನಿರ್ವಹಣೆ ಕುರಿತು  ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳೂ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕದ ಅಭಾವ ತಲೆದೂರದಂತೆ ಸರ್ಮಪಕವಾಗಿ ನಿರ್ವಹಣೆ  ಮಾಡಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರುಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆ ಕೊಟ್ಟರು. ಸರ್ಕಾರದ ಮಾರ್ಗಸೂಚಿಯಂತೆ ಆಸ್ಪತ್ರೆಗಳಲ್ಲಿ ೪ ರೀತಿಯ ವರ್ಗಗಳನ್ನು ಗುರುತಿಸಿಕೊಂಡು ಆಮ್ಲಜನಕವನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದರು. ಹಾಸನ ನಗರದ ಖಾಸಗಿ ಆಸ್ಪತ್ರೆಗಳಿಗೆ ಪ್ರತಿನಿತ್ಯ  ೩ ರಿಂದ ೪ ಹಂತದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸುವಂತೆ ಹಾಗೂ ತಾಲ್ಲೂಕು ಕೇಂದ್ರಗಳಿಗೆ ದಿನಕ್ಕೆ ಎರಡು ಬಾರಿ ಆಮ್ಲಜನಕದ ಸಿಲಿಂಡರ್‌ಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಆಮ್ಲಜನಕ ಪೂರೈಕೆದಾರರಿಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಬರುವ ಮೂರನೇ ಅಲೆ ತಡೆಯಲು ಸಹಕಾರಿಯಾಗುವಂತೆ ಎಲ್ಲಾ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗೆ ನೀಡುವ ಆಮ್ಲಜನಕದ ವಿವರವನ್ನು ಕೇಸ್ ಸೀಟ್‌ನಲ್ಲಿ ದಾಖಲಿಸಬೇಕು ಎಂದರು. 

ಆಮ್ಲಜನಕ ಪೂರೈಕೆದಾರರು ತುರ್ತು ಪರಿಸ್ಥಿತಿಗಾಗಿ ೧೫ ಹೆಚ್ಚುವರಿ ಸಿಲಿಂಡರ್‌ಗಳನ್ನು ಮೀಸಲಿಡುವಂತೆ ಸೂಚಿಸಿದರಲ್ಲದೆ, ಖಾಸಗಿ ಆಸ್ಪತ್ರೆಗಳು ತುರ್ತು ಆಮ್ಲಜನಕ ಅವಶ್ಯಕತೆ ಇದ್ದಲ್ಲಿ ೪ ಗಂಟೆ ಮುಂಚಿತವಾಗಿ  ತಿಳಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. ರೆಮ್‌ಡಿಸಿವರ್ ಚುಚ್ಚುಮದ್ದನ್ನು ಅನಗತ್ಯವಾಗಿ ನೀಡದೆ ಅವಶ್ಯಕವಿರುವವರಿಗೆ ಮಾತ್ರ ನೀಡಬೇಕು ರೆಮ್‌ಡಿಸಿವರ್ ಚುಚ್ಚುಮದ್ದಿನ ಬಗ್ಗೆ ಜನರಲ್ಲಿ ಮನವರಿಕೆ ಮಾಡಿ ಗೊಂದಲ ಸೃಷ್ಟಿಯಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಆಸ್ಪತ್ರೆಯಲ್ಲಿನ ಆಮ್ಲಜನಕದ ಸ್ಥಿತಿ, ಬೆಡ್‌ಗಳ ವ್ಯವಸ್ಥೆ, ಚುಚ್ಚುಮದ್ದುಗಳ ವ್ಯವಸ್ಥೆ ಕುರಿತು ನೋಡಲ್ ಅಧಿಕಾರಿಗಳ ಗಮನದಲ್ಲಿರುವಂತೆ ಆಸ್ಪತ್ರೆಗಳು ನೋಡಿಕೊಳ್ಳಬೇಕೆಂದು ತಿಳಿಸಿದರು. ಯಾವುದೇ ತುರ್ತು ಸಮಸ್ಯೆಗಳಿದ್ದರೆ ಜಿಲ್ಲಾಡಳಿತಕ್ಕೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಬಹುದು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಕ್ರಮವಹಿಸಬೇಕು ಎಂದರು. 

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ  ಕೈಗಾರಿಕಾ ಜಂಟಿ ನಿರ್ದೆಶಕರಾದ ದಿನೇಶ್, ಜಿಲ್ಲಾ ಔಷಧ ನಿಯಂತ್ರಕರಾದ ಡಾ|| ಗಿರೀಶ್, ಆಮ್ಲಜನಕ ನಿರ್ವಹಣೆಗೆ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ವೈದ್ಯರುಗಳು ಆಮ್ಲಜನಕ ಪೂರೈಕೆ ಘಟಕದ ಪ್ರತಿನಿದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.


Post a Comment

Previous Post Next Post