ಬಾಲಿವುಡ್ ಗೆ ಮತ್ತೋರ್ವ ಕಿರಿಕ್ ಬೆಡಗಿ; ಜಂಕಿ ಪಾತ್ರದಲ್ಲಿ ಸಂಯುಕ್ತ ಹೆಗ್ಡೆ !

 ಕಿರಿಕ್​ ಮಾಡುತ್ತಲೇ ಕನ್ನಡಿಗರ ನಿದ್ದೆಗೆಡಿಸಿದ್ದ ನಟಿ ಸಂಯುಕ್ತ ಹೆಗ್ಡೆ ಸದ್ಯ ಬಾಲಿವುಡ್​ ಅಂಗಳದಿಂದ ಸುದ್ದಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಸಂಯುಕ್ತ ಹೆಗ್ಡೆ ಹಿಂದಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ಹೌದು.. ಹಿಂದಿ ವೆಬ್​ ಸೀರೀಸ್​​ ‘ಪಂಚ್​ ಬೀಟ್’​​ನಲ್ಲಿ ಸಂಯುಕ್ತ ನಟಿಸಿದ್ದು, ಪಕ್ಕಾ ಜಂಕಿ ಪಾತ್ರವನ್ನ ನಿಭಾಯಿಸಿದ್ದಾರೆ ಅಂತ ಹೇಳಲಾಗ್ತಿದೆ. ಮೀಶಾ ಅಂತ ಈ ಪಾತ್ರಕ್ಕೆ ಹೆಸರಿಡಲಾಗಿದೆ.



ಹಿಂದಿ ವೆಬ್​ ಸೀರೀಸ್​ ‘ಪಂಚ್​ ಬೀಟ್’ -​ ಸೀಸನ್​ 2 ಇದಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಸಂಯುಕ್ತ ಹೆಗ್ಡೆ ನಟಿಸಿದ್ದಾರೆ. ಈ ಬಗ್ಗೆ ನಟಿ ಸಂಯುಕ್ತ ಹೆಗ್ಡೆ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದು, ‘ ತಮ್ಮ ನಿಜ ಜೀವನಕ್ಕೂ ಪಂಚ್​ ಬೀಟ್​ನ ಪಾತ್ರಕ್ಕೂ ವ್ಯತ್ಯಾಸವಿಲ್ಲ. ನಾನು ಹೇಗಿದ್ದೀನೋ ಹಾಗೇ ಇದರಲ್ಲಿ ನಟಿಸಿದ್ದೀನಿ’ ಅಂದಿದ್ದಾರೆ. ನಟ ಪ್ರಿಯಾಂಕ್​ ಶರ್ಮಾ, ಸಮೀರ್​ ಸೋನಿ, ನಿಖಿ ವಾಲಿಯಾ, ಕಾಜಲ್​ ತ್ಯಾಗಿ, ನಿಖಿಲ್​ ಹಾಗೂ ಇನ್ನೂ ಹಲವರು ನಟ-ನಟಿಯರು ಈ ವೆಬ್​ ಸೀರೀಸ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್​ ಚೌಬೆ ‘ಪಂಚ್​ ಬೀಟ್’​ ವೆಬ್​ ಸೀರೀಸ್​ಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿರ್ಮಾಪಕಿ ಎಕ್ತಾ ಕಪೂರ್​ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ.



‘ಕಾಲೇಜ್​ ಕುಮಾರ’ ಚಿತ್ರದ ನಂತರ ಯಾವುದೇ ಕನ್ನಡ ಸಿನಿಮಾಗಳಲ್ಲೂ ಕಾಣಿಸಿಕೊಳ್ಳದ ಸಂಯುಕ್ತ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಇದರ ಜೊತೆಗೆ ಹಿಂದಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಬಹಳ ಸುದ್ದಿಯಾಗಿದ್ದರು. ‘ಪಂಚ್​ ಬೀಟ್’​-​ ಸೀಸನ್​ 2 ಇದೇ ಜೂನ್​ 27ರಂದು OTTಯಲ್ಲಿ ಬಿಡುಗಡೆಯಾಗಲಿದೆ.

Post a Comment

Previous Post Next Post