ಇಂಧನ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಹಾಸನ:  ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ರಸಗೊಬ್ಬರ  ಬೆಲೆ ಏರಿಕೆ ಮಾಡಿರುವ ಕೇಂದ್ರ ರ‍್ಕಾರದ ವಿರುದ್ಧ  ಕಾಂಗ್ರೆಸ್ ಕರ‍್ಯರ‍್ತರು  ಮುಖಂಡ ಬಾಗೂರು ‌ಮಂಜೇಗೌಡ ಅವರ ನೇತೃತ್ವದಲ್ಲಿ ನಗರದ ಎಂಜಿ ರಸ್ತೆಯ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಸಿದರು.



ಈ‌ ‌ಸಂರ‍್ಭದಲ್ಲಿ ಮಾತನಾಡಿದ ಬಿ.ಪಿ.ಮಂಜೇಗೌಡ ಅವರು, ಕೊರೋನಾದಿಂದ ಜನರ ಬದುಕು ತತ್ತರಿಸಿ ಹೋಗಿದೆ. ಜೀವ ಉಳಿಸಿಕೊಂಡು ಜೀವನ ಮಾಡಲು ಆಗದ‌ ಪರಿಸ್ಥಿತಿಯಲ್ಲಿ ಕೇಂದ್ರ‌ ರ‍್ಕಾರ ಬೆಲೆ ಏರಿಕೆ ಮಾಡಿರುವುದು  ಖಂಡನೀಯ ಎಂದು ರ‍್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

 ಕೋವಿಡ್ ‌ಮಹಾಮಾರಿಯಿಂದ ದೇಶದ‌ ಜನರ ಬದುಕು ಆತಂತ್ರವಾಗಿದೆ. ಮೊದಲ‌ ರ‍್ಕಾರಗಳು ಜನರ‌ ಜೀವ ಉಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು.ಆದರೆ  ಬಿಜೆಪಿ ರ‍್ಕಾರ ‌ಇಂಧನ, ರಸಗೊಬ್ಬರ, ಅಡುಗೆ ಅನಿಲ‌ಬೆಲೆ ಏರಿಕೆ ಮಾಡುವ ‌ಮೂಲಕ  ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿರುವುದು ಸರಿಯಲ್ಲ. ಕೂಡಲೇ ಬೆಲೆ‌ ಏರಿಕೆ ಕಡಿತಗೊಳಿಸ ಜನರ ಹಿತ ಕಾಪಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ ರಾಷ್ಟ್ರ ಹಾಗೂ ರಾಜ್ಯ‌ನಾಯಕರ ಮರ‍್ಗರ‍್ಶನದ ಮೇರೆ ಕಾಂಗ್ರೆಸ್ ಕರ‍್ಯರ‍್ತರು ಉಗ್ರಹೋರಾಟ ಮಾಡಬೇಕಾಗುತ್ತದೆ. ಈಗಾಗಲೇ ಕಾಂಗ್ರೆಸ್ ‌ನಾಯಕರು ಬೆಲೆ ಏರಿಕೆ‌ ಖಂಡಿಸಿದ್ದಾರೆ ಇದನ್ನು ರಾಜ್ಯ ಹಾಗೂ ಕೇಂದ್ರ ರ‍್ಕಾರಗಳು  ಮನಗಂಡು ಬೆಲೆ ಇಳಿಕೆ ಮಾಡಿ ಕೊವೀಡ್ ನಿಂದ ಜನರ ಪ್ರಾಣ ಉಳಿಸಿ ಅವರ ಬದುಕು ಕಟ್ಟುವ ಕರ‍್ಯ ಕ್ಕೆ‌ಕೈ ಹಾಕಬೇಕು ಎಂದು ಒತ್ತಾಯಿಸಿದರು. ಈ ಸಂರ‍್ಭದಲ್ಲಿ ಕಾಂಗ್ರೆಸ್ ‌ಕರ‍್ಯರ‍್ತರು ರಾಜ್ಯ ಹಾಗೂ ಕೇಂದ್ರ‌ ರ‍್ಕಾರದ ವಿರುದ್ಧ  ಧಿಕ್ಕಾರ‌ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ

ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಎಂಎಲ್ ಸಿ‌ ಗೋಪಾಲಸ್ವಾಮಿ, ಹಿರಿಯ ಮುಖಂಡ ಹೆಚ್.ಕೆ. ಜವರೇಗೌಡ, ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಗೌರಿಪುರ  ವಿಶ್ವನಾಥ್,‌ ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್,‌ ಕಬಳಿರಾಮಚಂದ್ರು,ಮೇಳಗೋಡು  ಗ್ರಾಪಂ ಅಧ್ಯಕ್ಷ ಲೋಕೇಶ್ ‌  ಸೇರಿದಂತೆ ‌ನೂರಾರು ಕರ‍್ಯರ‍್ತರು ‌ಭಾಗವಹಿಸಿದರು.


Post a Comment

Previous Post Next Post