. ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ತಂಬಾಕು ನಾಟಿ ಮಾಡಿರುವ ದೃಶ್ಯ.

                                                                

  ರಾಮನಾಥಪುರ;- ಇಲ್ಲಿಯ ಸುಬ್ರಹ್ಮಣ್ಯನಗರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೆಲವರು ತಂಬಾಕು ನಾಟಿ ಮಾಡಿ ಈಗಾಗಲೇ  ನಾಟಿಯ ಸಮಯದಲ್ಲಿ ರಾಸಾಯನಿಕ ಗೊಬ್ಬರದ ನೀಡಲಾಗಿದೆ. ನಾಟಿಯನ್ನು ಮುಗಿಸಿರುವರ ಬೇಸಾಯದಲ್ಲಿ ನಿರತವಾಗಿ ಕಳೆ ತೆಗೆದು, ಈಗಾಗಲೇ ಗಿಡಗಳಿಗೆ ಗೊಬ್ಬರ ಹಾಕಿ ಮಣ್ಣು ಏರಿಸುವ ಕಾಯಕದಲ್ಲಿ ನಿರತವಾಗಿದ್ದಾರೆ.


ಇಲ್ಲಿಯ ತಂಬಾಕು ಹರಾಜು ಪ್ಲಾಟ್ ಪಾರಂ ೭ ಹಾಗೂ ೬೩ರ ೨ ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಅರಕಲಗೂಡು ಮತ್ತು ಹೊಳೆನರಸಿಪುರ ತಾಲ್ಲೂಕು, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು, ಮೈಸೂರು ಜಿಲ್ಲೆಯ ಕೆ.ಅರ್. ನಗರ ತಾಲ್ಲೂಕಿನ ಸಾಲಿಗ್ರಾಮ, ಪಿರಿಯಪಟ್ಟಣ ತಾಲ್ಲೂಕಿನ ಬೆಟ್ಟದಪುರ ಮುಂತಾದ ಕೆಲವು ಭಾಗದ ತಂಬಾಕು ಬೆಳೆ ಇಲ್ಲಿಯ ಮಾರುಕಟ್ಟೆ ವ್ಯಾಪ್ತಿಯಲ್ಲಿ ಹೆಚ್ಚು ಹೊಗೆಸೊಪ್ಪು ಬೇಸಾಯವನ್ನು ಕೈಗೊಳ್ಳುತ್ತಿದೆ. ಈ ಬಾರಿ ಏಪ್ರಿಲ್‌ನಿಂದ ಮೇ ೩೦ರ ತನಕ ಹೇಳಿಕೊಳ್ಳುವ ಮಟ್ಟದಲ್ಲಿ ಮಳೆ ಬಿದ್ದಿಲ್ಲ. ಇದರಿಂದ ಉಳುಮೆ ಹಾಗೂ ಸಸಿಮಡಿ ಕೈಗೊಳ್ಳಲು ಹಿನ್ನೆಡೆಯಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಬರುವ ಹಾಗೂ ನೀರಿನ ಮೂಲಗಳನ್ನು ಹೊಂದಿರುವವರು ಈಗಾಗಲೇ ನಾಟಿ ಕಾರ್ಯವನ್ನು ಮುಗಿಸಿ ಬೇಸಾಯದಲ್ಲಿ ನಿರತವಾಗಿರುವುದು ಕಂಡುಬAದಿದೆ.

ತಾಲೂಕಿನ ೪೫ರಿಂದ ೫೦ ಸಾವಿರ ಎಕರೆ ಪ್ರದೇಶದಲ್ಲಿ ತಂಬಾಕು ಬೆಳೆಯನ್ನು ಕೈಗೊಳ್ಳಲಾಗುತ್ತಿದ್ದು, ಕಳೆದ ಬಾರಿ ನಿಗದಿತ ಬೆಲೆ ದೊರಕದೇ ಇರುವುದು, ರಾಗಿಮರೂರು, ಹರಳಳ್ಳಿ, ಮಲ್ಲಾಪುರಸೋಪುರ, ಲಕ್ಕೂರು ಮುಂತಾದ ಕಡೆಗಳಲ್ಲಿ ಮಳೆ ಸಕಾಲದಲ್ಲಿ ಬೀಳದೆ ಇರುವ ಪರಿಣಾಮ ಈ ಬಾರಿ ಬೆಳೆ ವಿಸ್ತೀರ್ಣ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಹಲವರು ಕೆರೆಗಳಲ್ಲಿ ನೀರಿಲ್ಲದೆ ಇರುವುದರಿಂದ ಕೆರೆ ಅಂಗಳ ಮತ್ತು ತೋಟದಲ್ಲಿ ಗುಂಡಿತೋಡಿ ಜಲದಿಂದ ಸಂಗ್ರಹವಾಗುವ ನೀರಿನಿಂದ ಸಸಿಮಡಿಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಒಂದೂವರೆ ತಿಂಗಳಿAದ ನಾಟಿ ಮಾಡಿ ಕಳೆ  ತೆಗೆದಿದ್ದು ಕೆಲವು ಕಡೆಗಳಲ್ಲಿ ನೀರಿಲ್ಲದೆ ಒಣಗತೊಡಗಿವೆ.

ಕೆಲವು ಕಡೆಗಳಲ್ಲಿ ಮಳೆಯಾಶ್ರಿತ ಬೆಳೆಗಾರರಿಗೆ ಸಮಸ್ಯೆ ಎದುರಾಗಿದೆ. ಮುಂಗಾರು ಮಳೆ ಮತ್ತು ನಾಲೆ ವ್ಯಾಪ್ತಿಯಲ್ಲಿ ಹೆಚ್ಚು ಹೊಗೆಯನ್ನು ಕೈಗೊಳ್ಳಲಾಗುತ್ತಿದೆ. ವರ್ಷದಲ್ಲಿ ಎರಡು ಬೆಳೆ ಮಾಡುವ ಸಲುವಾಗಿಯೇ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿತ್ತನೆ ಕಾರ್ಯಮುಗಿದರೇ ಮುಂದಿನ ಭತ್ತ ಬೇಸಾಯವನ್ನು ಮಾಡಲು ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಕೆಲವು ಕಡೆಗಳಲ್ಲಿ ಉತ್ತಮ ಕೂಡ ಮಳೆಯಾಗದೇ ಇರುವ ಪರಿಣಾಮ ಎರಡನೇ ಬೇಸಾಯ ಭತ್ತಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ತಂಬಾಕು ಬೆಳೆಯನ್ನೇ ಹೆಚ್ಚು ಆಶ್ರಯಿಸಿರುವುದರಿಂದ ಬೆಳೆ ಮಾಡಲು ತುಂಬಾ ಹರಸಾಹಸ ಪಡಬೇಕಿದೆ. ಇಲ್ಲಿ ಕೆಲವು ಕಡೆ ನಮಗೆ ನೀರಾವರಿ ಮೂಲಗಳು ಇಲ್ಲ. ಕಾವೇರಿ ನದಿ ಪಾತ್ರದಲ್ಲಿ ಬರುವ ಜಮೀನು ಆಗಿರುವುದರಿಂದ ನೂರಾರು ಅಡಿ ದೂರದಿಂದ ಪೈಪ್‌ಗಳ ಅಳವಡಿಸಿ ಬೇಸಾಯ ಮಾಡುತ್ತಿದ್ದಾರೆ. ಈ ಕಷ್ಟ ಮಳೆರಾಯನಿಗೆ ತಿಳಿಯುತ್ತಿಲ್ಲವೇ ಎಂದು ಶಿರದನಹಳ್ಳಿ ಮಲ್ಲೇಶ್ ಅವರು ತಮ್ಮ ಅಳಲನ್ನು ತೋಡಿಕೊಂಡಸರು.

ಮಳೆಯನ್ನು ನೆಚ್ಚಿಕೊಂಡು ಹೊಗೆಸೋಪ್ಪು ನಾಟಿ ಮಾಡಿ ಗೋಬ್ಬರ ಹಾಕಿ ವ್ಯವಸಾಯ ಮಾಡಿ ಕೈ ತೋಳೆದುಕೊಂಡಾಗಿದೆ. ಆದರೆ ಇದುವರೆಗೂ ಮಳೆ ಹೇಳಿಕೊಳ್ಳುವಮಟ್ಟದಲ್ಲಿ ಆಗಿಲ್ಲ. ಕೈಸಾಲ ಮಾಡಿ ಬೋರ್‌ವೆಲ್ ಹಾಕಿಸಿ ಬೆಳಿ ಮಾಡುತ್ತಿದ್ದೇನೆ. ಆದ್ರೆ ಕರೆಂಟ್ ಸಕಾಲದಲ್ಲಿ ದೊರೆಯದ ಪರಿಣಾಮ ಬೆಳೆ ಕೈಗೊಳ್ಳಲು ಹಿನ್ನೆಡೆಯಾಗಿದೆ ಎಂದು ತಂಬಾಕು ರೈತ ಎಂ.ಕೆ. ನಾಗರಾಜು ತಮ್ಮ ಕಷ್ಟವನ್ನು ಹಂಚಿಕೊAಡರು. 

ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಒಂದು ವಾರದಿಂದ ಮತ್ತೆ ಮುನ್ನೂಚನೆ ಸಿಕ್ಕಿದ್ದ ಹಿನ್ನೇಲೆಯಲ್ಲಿ ಸಾಲ ಸೋಲ ಮಾಡಿ ಸಾಲದಲ್ಲಿರುವ ರೈತರು ತಮ್ಮ ಹತ್ತಿರದ ವಾಣಿಜ್ಯ ಹಾಗೂ ಕೃಷಿ ಬ್ಯಾಂಕ್, ಸಹಕಾರ ಸಂಘಗಳ ಸಾಲದ ಸುಳಿಯಿಂದ ಹೊರಲಾರದೇ, ಇತ್ತ ತಂಬಾಕು ಬೆಳೆ ಬೆಳೆಯುವುದನ್ನು ನಿಲ್ಲಿಸಲಾರದೆ ತೊಳಲಾಡುತ್ತಿದ್ದಾನೆ. ಸುಮಾರು ೪೦ ವರ್ಷಗಳಿಂದ ತಂಬಾಕು ಬೆಳೆ ಇತ್ತೀಚಗೆ ಬರಗಾಲ ಮತ್ತು ತಂಬಾಕಿಗೆ ಉತ್ತಮ ಬೆಲೆ ಸಿಗದೇ ಅತ್ಮಹತ್ಯೆ ದಾರಿ ತುಳಿಯುವ ಸಾಧ್ಯತೆ ಇದೆ.

ಕಳೆದ ಮೂರು ವರ್ಷದಿಂದ ಒಂದಲ್ಲಾ ಒಂದು ರೀತಿ ಮಳೆಯಾಗದೇ ಈ ಹಿಂದೆ ಸರ್ಕಾರ ಬರಗಾಲ ಎಂದು ಗೋಷಿಸಿದ್ದು ಯಾವುದೇ ರೈತನಿಗೆ ಪರಿಹಾರ ಸಿಕ್ಕಿಲ್ಲ. ಅಲ್ಲದೇ ಮೂರು ವರ್ಷದಿಂದ ತಂಬಾಕು ಮುಂತಾದ ಬೆಳೆದ ಬೆಳೆಗೆ ಬೆಲೆ ಸಿಗದೇ ನಾವು ಕಂಗಾಲಾಗಿದ್ದೆವೆ. ಅದ್ದರಿಂದ ನಾವು ಜೀವನ ನಡೆಸಲು ಬದುಕಬೇಕಾದರೆ ನಾವು ಈ ಹಿಂದೆ ಮಾಡಿರುವ ವಾಣಿಜ್ಯ ಹಾಗೂ ಕೃಷಿ ಬ್ಯಾಂಕ್, ಸಹಕಾರ ಸಂಘಗಳ ಸಾಲವನ್ನು ಮನ್ನ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಳ್ಳಬೇಕೆಂದು ತಂಬಾಕು ರೈತರು ಅಗ್ರಹಿಸಿದ್ದಾರೆ. 

Post a Comment

Previous Post Next Post