ರಾಮನಾಥಪುರ ಅರೋಗ್ಯ ಕೆಂದ್ರದ ಅವರಣದಲ್ಲಿ ಶಾಸಕ ಡಾ. ಎ.ಟಿ. ರಾಮಸ್ವಾಮಿ

ರಾಮನಾಥಪುರ;- ಸರ್ಕಾರದ ಮಾರ್ಗಸೂಚಿ ಅನ್ವಯ ಕೋವಿಡ್ ಸೋಂಕಿತರು ಮನೆಯಲ್ಲಿ ಐಸೋಲೇಷನ್ ಅಗಲು ಅವಕಾಶವಿಲ್ಲ. ಸೌಕರ್ಯವಿಲ್ಲದವರನ್ನು ಕೂಡಲೇ ಕೇರ್ ಸೆಂಟರ್‌ಗೆ ದಾಖಲಿಸಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು.   


ರಾಮನಾಥಪುರದ ಅರೋಗ್ಯ ಕೆಂದ್ರದ ಅವರಣದಲ್ಲಿ ಮಾತನಾಡಿದ ಅವರು ಈಗಾಗಲೇ ಸರ್ಕಾರ ಇನ್ನು ಒಂದು ವಾರ ಲಾಕ್‌ಡೌನ್ ಮುಂದೆ ಹಾಕ್ಕಿರುವುದು ಗ್ರಾಮೀಣ ಭಾಗದ ಕೋರೊನಾ ಸೋಂಕು ಕಡಿಮೆ ಮಾಡಿಲಿಕ್ಕೆ ಮಾಡಲಾಗಿದೆ. ಕೊರೊನಾ ಎಂಬ ಮಹಾಮಾರಿ ಸೋಂಕು ಕರಿನರಳು ಗ್ರಾಮೀಣ ಭಾಗದ ಪ್ರತಿಹಳ್ಳಿಗಳ ಭಾಗದ ಜನರನ್ನು ಇನ್ನೂ ಅವರಿಸುತ್ತಿದೆ. ಈ ಸೋಂಕಿಗೆ ಕಡಿವಾಣ ಹಾಕಬೇಕಾದರೆ ಸ್ವಚ್ಚತೆಗೆ ಅದ್ಯತೆ ಕೊಡುವುದರಜೊತೆಗೆ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾದುಕೊಳ್ಳುತ್ತಿರುವುದರಿಂದ ಮಾತ್ರ ಸಾಧ್ಯ ಎಂಬುದನ್ನು ಜನರು ಅರಿಯಬೇಕಿದೆ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಹಿನ್ನಲೆಯಲ್ಲಿ ತ್ವರಿತವಾಗಿ ಹಾಗೂ ಪರಿಣಾಮಕಾರಿ ನಿರ್ವಹಣೆ ಮಾಡಿಬೇಕು. ಗ್ರಾಮೀಣ ಭಾಗದ ಪ್ರತಿ ಮನೆಗಳ ಜನತೆಯನ್ನು ಸಮೀಕ್ಷೆ ನಡೆಸಿ ಔಷಧ ವಿರರಣೆ ಅದ್ಯತೆ ನೀಡಿಬೇಕು. ಸೋಂಕಿತರು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಕೇರ್ ಸೆಂಟರ್‌ಗಳಲ್ಲಿ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು.  

ಕೋವಿಡ್ ಸೋಕು ಇರುವವರು ಒಂದೆರಡು ಮಾತ್ರೆಗಳನ್ನು ಪಡೆದು ನಿರ್ಲಕ್ಷö್ಯವಹಿಸುವ ಬದಲು ವೈದ್ಯರ ಸಲಹೆಯನ್ನು ಸಂಪೂರ್ಣ ಪಾಲಿಸುವುದು ಒಳಿತು. ಗ್ರಾ.ಪಂ ಸರ್ಕಾರವು ನೀಡಿರುವ ಕೊವಿಡ್ ಔಷಧಿಗಳ ಕಿಟ್ ಅನ್ನು ಸೋಂಕಿತರಿಗೆ ತಲುಪಿಸಿ ಅವರಿಗೆ ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಅವರು ಗುಣಮುಖರಾಗಲು ಸಹಕರಿಸಿ, ಯಾವುದೇ ಗ್ರಾಮಗಳಲ್ಲಿ  ಗುಂಪಾಗಿ ಆಟಗಳನ್ನು ಆಡುವುದು, ಪಾಸಿಟಿವ್ ಕೇಸ್‌ಗಳು ಮನೆ ಬಿಟ್ಟು ಹೊರಬರುತ್ತಿರುವ ವಿಷಯ ತಿಳಿಸಿದಲ್ಲಿ ಕ್ರಮ ಕೈಗೊಳ್ಳಿ, ತಾಲ್ಲೂಕನ್ನು ಕೊರೋನಾ ಮುಕ್ತವನ್ನಾಗಿಸಲು ಶ್ರಮಿಸಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳಿಗೆ ಸೂಚಿಸಿದರು.  

ತಹಸಿಲ್ದಾರ್ ವೈ.ಎಂ. ರೇಣುಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ: ಸ್ವಾಮಿಗೌಡ, ತಾ.ಪಂ ಇ ಓ ರವಿಕುಮಾರ್, ನೋಡಲ್ ಅಧಿಕಾರಿ ಅರುಣ್, ಆರಕ್ಷಕ ನಿರೀಕ್ಷಿಕ ಅಜೇಯ್‌ಕುಮಾರ್, ಡಾ. ಅಭಿಷೇಕ್,  ಕಾರ್ಯದರ್ಶಿ ನಿಂಗಣ್ಣ ಮುಂತಾದವರು ಇದ್ದರು.


Post a Comment

Previous Post Next Post