ಅಡಿಕೆ ಮರಗಳಿಗೆ ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಿದರೆ ಅದರ ಫಲಿತಾಂಶ ಅಪಾರ. ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಲು ಎಂದೂ ಮರೆಯದಿರಿ. ಹಾಕದೇ ಇದ್ದಲ್ಲಿ ಇದರಿಂದ ಮುಂದಿನ ವರ್ಷದ ಬೆಳೆಗೆ ತೊಂದರೆ ಆಗುತ್ತದೆ. ಬೇಸಿಗೆ ಕಾಲ ಕಳೆದು ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ ಋತುಮಾನದ ಬದಲಾವಣೆ ಉಂಟಾಗುತ್ತದೆ. ಆಗ ಸಸ್ಯಗಳ ಬೆಳವಣಿಗೆಯಲ್ಲಿ ಒಂದು ರೀತಿಯ ಬದಲಾವಣೆಯೂ ಆಗುತ್ತದೆ. ಈ ಸಮಯದಲ್ಲಿ ಎಲ್ಲಾ ಸಸ್ಯಗಳಲ್ಲೂ ಬೇರಿನ ಬೆಳವಣಿಗೆ, ಹೊಸ ಬೇರು ಮೂಡುವುದು, ಸಸ್ಯದ ಎಲೆಗಳು ಹೆಚ್ಚು ಚಟುವಟಿಕೆಯಿಂದ ಇರುತ್ತದೆ. ಬೇಸಿಗೆಯಲ್ಲಿ ಭಾಗಶಃ ಒಣಗಿದ್ದರೂ ಸಹ ಮಳೆ ಬಂದ ತಕ್ಷಣ ಅದು ಹೊಸ ಚೈತನ್ಯದಲ್ಲಿ ಬೆಳವಣಿಗೆ ಪ್ರಾರಂಭಿಸುತ್ತದೆ. ಇದನ್ನು ಸಂಕ್ಷಿಪ್ತವಾಗಿ ಸಸ್ಯಗಳಿಗೆ ಹಸಿವಿನ ಕಾಲ ಎಂದು ಹೇಳಬಹುದು.
◆ ಹಸಿವು ಇರುವಾಗ ಆಹಾರ ತಿನ್ನಬೇಕು.
◆ ಆಗ ಅದು ದೇಹಕ್ಕೆ ತೆಗೆದುಕೊಳ್ಳುತ್ತದೆ.
◆ ಆದರಿಂದ ಶಕ್ತಿ ಲಭ್ಯವಾಗುತ್ತದೆ. ಇದು ಸಸ್ಯಗಳಿಗೂ ಅನ್ವಯ.
◆ ಬಹಳ ಜನ ಮಳೆಗಾಲದಲ್ಲಿ ಗೊಬ್ಬರ ಕೊಟ್ಟರೆ ಅದು ಮಳೆ ನೀರಿಗೆ ತೊಳೆದು ಹೋಗುತ್ತದೆ ಎಂದು ಕೊಡುವುದಿಲ್ಲ.
◆ ಮಳೆ ನೀರಿಗೆ ತೊಳೆದು ಹೋಗದಂತೆ ರಕ್ಷಣೆ ಮಾಡಿ ಗೊಬ್ಬರ ಕೊಡಬಹುದು.
ಅಡಿಕೆ ಮರಗಳಿಗೆ ಈಗ ಗೊಬ್ಬರ ಕೊಡುವುದರ ಪ್ರಯೋಜನ:
● ಅಡಿಕೆ ಮರದಲ್ಲಿ ಈಗ ಫಸಲು ಇರುತ್ತದೆ. ಮುಂದಿನ ಸಾಲಿನ ಫಸಲಿನ ಹಿಂಗಾರ (ಹೂ ಗೊಂಚಲು) ಸಹ ಎಲೆ ಕಂಕುಳಲ್ಲಿ ಸಣ್ಣದಾಗಿ ಮೂಡಲು ಸಿದ್ಧವಾಗಿರುತ್ತದೆ.
● ಒಂದು ಮರದಲ್ಲಿ 8-10 ಎಲೆಗಳಿರುತ್ತದೆ. ಸುಳಿ ಭಾಗದ ಒಂದೆರಡು ಎಲೆಗಳ ಕಂಕುಳಲ್ಲಿ ಮುಂದಿನ ವರ್ಷದ ಹಿಂಗಾರದ (ಹೂ ಗೊಂಚಲು) ಮೂಡುವಿಕೆ ಪ್ರಾರಂಭವಾಗಿರುತ್ತದೆ.
● ಬೆಳೆಯುತ್ತಿರುವ ಕಾಯಿಗಳಿಗೆ ಅಗತ್ಯವಾಗಿ ಪೋಷಕಾಂಶಗಳು ಬೇಕು.
● ಜೊತೆಗೆ ಮುಂದಿನ ವರ್ಷದ ಹೂ ಗೊಂಚಲಿನ ಬೆಳವಣಿಗೆಗೂ ಸಹ ಅಗತ್ಯವಾಗಿ ಬೇಕು.
● ಒಂದು ವೇಳೆ ಈಗ ಗೊಬ್ಬರವನ್ನು ಕೊಡದೆ ಇದ್ದರೆ, ಇರುವ ಕಾಯಿಗಳು ಹೇಗಾದರು ಲಭ್ಯವಿರುವ ಫೋಷಕಾಂಶಗಳನ್ನು ಬಳಸಿ ಬೆಳೆಯಬಹುದು.
● ಸ್ವಲ್ಪ ಬೆಳವಣಿಗೆ ನಿಧಾನವಾಗಬಹುದು. ಕಾಯಿಗಳು ಅಲ್ಪ ಸ್ವಲ್ಪ ಸಣ್ಣದೂ ಆಗಬಹುದು.
● ಆದರೆ ಮುಂದಿನ ವರ್ಷದ ಹೂ ಗೊಂಚಲಿಗೆ ಮಾತ್ರ ಆಹಾರದ ಕೊರತೆಯಾಗುತ್ತದೆ.
● ಇದರಿಂದ ಮುಂದಿನ ಸೀಸನ್ (ಜನವರಿ - ಫೆಬ್ರವರಿ) ನಲ್ಲಿ ಬರುವ ಹೂ ಗೊಂಚಲಿನ ಗಾತ್ರ ಕಡಿಮೆಯಾಗಬಹುದು.
● ಮಿಡಿ ಉದುರುವುದು, ಹೂ ಗೊಂಚಲು ಒಣಗುವುದು ಇತ್ಯಾದಿ ಸಮಸ್ಯೆಗಳ ಸಾಧ್ಯತೆ ಹೆಚ್ಚು.
● ಇದಕ್ಕೆಲ್ಲಾ ಪರಿಹಾರ ಮುಂಗಾರು ಪೂರ್ವದಲ್ಲಿ ಗೊಬ್ಬರ ಕೊಡುವುದು ಅಥವಾ ಹಸಿವು ಇರುವಾಗ ಗೊಬ್ಬರ ಕೊಡುವುದು ಸೂಕ್ತ.
ಹೇಗೆ ಗೊಬ್ಬರ ಕೊಡಬೇಕು?
◆ ಅಡಿಕೆ ಮರಗಳಿಗೆ ಪೋಷಕಾಂಶ ಕೊಡುವಾಗ ಬುಡ ಭಾಗದಿಂದ 2ಅಡಿ ದೂರದಲ್ಲಿ ಕೊಡುವುದು ಸೂಕ್ತ.
◆ ಬುಡಕ್ಕೆ ಗೊಬ್ಬರ ಕೊಡಬಾರದು. ಅಲ್ಲಿ ಪೋಷಕಗಳನ್ನು ಹೀರುವ ಬೇರುಗಳು ಇರುವುದಿಲ್ಲ.
◆ ಅನುಕೂಲ ಇದ್ದರೆ ಮರದ/ಸಸಿಯ ಬುಡಭಾಗವನ್ನು 1-2 ಇಂಚಿನಷ್ಟು ಮಣ್ಣು ಕೆರೆದು ಆ ಭಾಗಕ್ಕೆ ಹಾಕಬೇಕಾದ ಗೊಬ್ಬರವನ್ನು ಹಾಕಿ ಮಣ್ಣನ್ನು ಮುಚ್ಚಬೇಕು.
◆ ಕೆಲಸದವರ ಸಮಸ್ಯೆಯಾದರೆ ಮರದ ನಾಲ್ಕು ದಿಕ್ಕಿನಲ್ಲಿ ಹಾರೆಯಲ್ಲಿ 3-4 ಇಂಚಿನಷ್ಟು ಮಣ್ಣನ್ನು ತೆಗೆದು ಆ ಭಾಗಕ್ಕೆ ಗೊಬ್ಬರವನ್ನು ಸಮಪಾಲು ಮಾಡಿ ಹಂಚಿ ಹಾಕಿ ಮಣ್ಣು ಮುಚ್ಚಬೇಕು.
◆ ಹನಿ ನೀರಾವರಿ ಮಾಡಿದ ತೋಟವಾದರೆ ನೀರು ತೊಟ್ಟಿಕುವ ಭಾಗದಲ್ಲಿ ಬೇರಿಗೆ ಪೆಟ್ಟಾಗದಂತೆ ಮಣ್ಣು ಕೆರೆದು ಆ ಭಾಗಕ್ಕೆ ಗೊಬ್ಬರವನ್ನು ಹಾಕಿ ಮುಚ್ಚಬೇಕು.
◆ ಹನಿ ನೀರಾವರಿ ವ್ಯವಸ್ಥೆಯಲ್ಲಿ ಎಲ್ಲಿ ನೀರು ತೊಟ್ಟಿಕ್ಕುತ್ತದೆಯೋ ಅಲ್ಲೇ ಬೇರಿನ ಸಾಂದ್ರತೆ ಹೆಚ್ಚು ಇರುತ್ತದೆ.
◆ ಅಲ್ಲಿಗೆ ಗೊಬ್ಬರ ಕೊಟ್ಟರೆ ಅದು ಸಮರ್ಪಕವಾಗಿ ಲಭ್ಯವಾಗುತ್ತದೆ.
◆ ಮರದ ನಾಲ್ಕು ದಿಕ್ಕಿನಲ್ಲಿ ತೂತು ಮಾಡಿ ಗೊಬ್ಬರ ಕೊಡುವುದು ಉತ್ತಮ ವಿಧಾನ.
◆ ಇದನ್ನು ಪ್ಯಾಕೆಟ್ ಮೆನ್ಯೂರಿಂಗ್ ಎಂದು ಕರೆಯಲಾಗುತ್ತದೆ.
◆ ಈ ವಿಧಾನದಲ್ಲಿ ಗೊಬ್ಬರ ಹಾಕಿದರೆ ಬೇರಿಗೆ ಹಾನಿ ಉಂಟಾಗುವುದಿಲ್ಲ.
◆ ಹಾಕಲು ಸುಲಭವಾಗುತ್ತದೆ. ಸ್ವಲ್ಪ ನಿಧಾನವಾಗಿ ಲಭ್ಯವಾಗುತ್ತದೆ.
◆ ಮಿಶ್ರ ಬೆಳೆ ಇದ್ದಾಗ ದುಪ್ಪಟ್ಟು ಗೊಬ್ಬರ ಕೊಡಬೇಕಾಗುತ್ತದೆ.
ಗೊಬ್ಬರ ಯಾವಾಗ ನೀಡಬೇಕು?
ಗೊಬ್ಬರ ಕೊಡುವಾಗ ಅದನ್ನು ಮೂರು ಭಾಗ ಮಾಡಿ ಕೊಡುವುದು ಉತ್ತಮ. ಕನಿಷ್ಟ ಪಕ್ಷ ಎರಡು ಬಾರಿಯಾದರು ಕೊಡಬೇಕು. ಅದು ಮೇ ಕೊನೆವಾರದಿಂದ ಜೂನ್ ಎರಡನೇ ವಾರದ ತನಕ ಎರಡನೇ ಕಂತು ಸಪ್ಟಂಬರ್ ಕೊನೆ ವಾರದಿಂದ ಅಕ್ಟೋಬರ್ ಎರಡನೇ ವಾರದ ಒಳಗೆ. ಮೂರನೆಯದ್ದು. ಜನವರಿ ಕೊನೆವಾರದಿಂದ ಫೆಬ್ರವರಿ ಮೂರನೇ ವಾರದ ಒಳಗೆ ಕೊಡಬೇಕು.
ಸಾವಯವ ಗೊಬ್ಬರ ಕೊಡುವ ವಿಧಾನ:
Add Shop DNC 90:
(◆ ಯುಮಿಕ್ ಮತ್ತು ಫುಲ್ವಿಕ್ ಶೇಕಡ 50 ಪ್ರತಿಷತ.
◆ ಬೇವಿನ ಹಿಂಡಿ ಶೇಕಡ 20 ಪ್ರತಿಷತ
◆ ಹರಳಿನ ಹಿಂಡಿ ಶೇಕಡ 30 ಪ್ರತಿಷತ.
◆ ನೈಸರ್ಗಿಕ NPK ಹಾಗೂ 90ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುವ ಸಂಯೋಜನೆ)
ಉಪಯೋಗ:
★ ಭೂಮಿ ಮ್ರದು ಮತ್ತು ಸಡಿಲವಾಗುತ್ತದೆ.
★ ಕಂದು ಕಾಯಿಯ ಸಂಖ್ಯೆ ಹೆಚ್ಚಾಗುತ್ತದೆ.
★ ಸಸ್ಯಗಳಿಗೆ ಸಹಾಯ ಮಾಡುವ ಬ್ಯಾಕ್ಟೀರಿಯಗಳ ಏರಿಕೆಯನ್ನು ಕಾಣಬಹುದು.
★ ಉತ್ಪಾದನೆಯ ಪ್ರಮಾಣ 15 ರಿಂದ 60 ಪ್ರತಿಷತ ಹೆಚ್ಚಾಗಲಿದೆ ಮತ್ತು ಗುಣಮಟ್ಟದ ಉತ್ಪಾದನೆಯನ್ನು ಕಾಣಬಹುದು.
Add Shop Crop Sudha:
(◆ ಸಮುದ್ರ ಪಾಚಿ ಸಾರ ಶೇಕಡ 30 ಪ್ರತಿಷತ ◆ ಆಮೈನೋ ಆಮ್ಲ ಶೇಕಡ 12 ಪ್ರತಿಷತ ◆ ನೀರಿನ ಪ್ರಮಾಣ ಶೇಕಡ 100 ಪ್ರತಿಷತ ಒಳಗೊಂಡಿರುವ ಸಂಯೋಜನೆ)
ಉಪಯೋಗ: ★ ಇದು ಬೇರುಗಳ ಮೂಲಕ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ★ ಬೀಜ ಮೊಳಕೆಯೊಡೆದು ಗುಣಮಟ್ಟದ ಸಸಿಯನ್ನು ಪಡೆಯಲು ಇದು ಉಪಯುಕ್ತವಾಗಿದೆ. ★ ಕ್ರಾಫ್ ಸುಧಾ ಎಲ್ಲಾ ರೀತಿಯ ಬೆಳೆಗಳಿಗೆ ಉಪಯೋಗಿಸಲು ಸಹಾಯಕವಾಗಿದೆ. ★ ಇದು ಬೆಳೆಯ ರುಚಿ, ಬೆಳೆಯ ಬಣ್ಣ, ಬೆಳೆಯ ಗಾತ್ರ ಮತ್ತು ಆಹಾರದ ಸಂರಕ್ಷಣೆಯ ಗುಣಮಟ್ಟನ್ನು ಸುಧಾರಿಸುತ್ತದೆ. ★ ಇದು ಬೆಳೆಯ ನೈಸರ್ಗಿಕ ತೇವಾಂಶದ ಮದ್ಯವರ್ತಿ ಆಗಿ ಕಾರ್ಯನಿರ್ವಹಿಸುತ್ತದೆ.
Add Shop Bhoomi Sudha
(◆ಹ್ಯುಮಿಕ್ ಶೇಕಡ 70 ಪ್ರತಿಷತ ◆ಫಲ್ವಿಕ್ ಶೇಕಡ 20 ಪ್ರತಿಷತ ◆ ಆಮೀನೊ ಆಸೀಡ್ ಶೇಕಡ 10 ಪ್ರತಿಷತ
★ ಇದು ಸಸ್ಯಗಳ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ★ ಇದು ಬೆಳೆಯ ಉತ್ಪಾದನೆ, ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ. ★ ಇದು ಮಣ್ಣಿನ ಪೋಷಕಾಂಶಗಳ ಅಭಿವೃದ್ಧಿಯಿಂದ ಕೃಷಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ★ ಹಣ್ಣು, ತರಕಾರಿಗಳು, ಬೀನ್ಸ್, ಕಬ್ಬು, ಗೋಧಿ, ಜೋಳ, ಭತ್ತ ಮುಂತಾದ ಎಲ್ಲಾ ಬೆಳೆಗಳ ಕೃಷಿಯಲ್ಲಿ ಪ್ರಯೋಜನಕಾರಿ. ★ ಇದು ಸಸ್ಯಗಳಲ್ಲಿ ಶಿಲೀಂದ್ರ, ವೈರಲ್ ಮತ್ತು ಸತ್ತ ಬೇರುಗಳು ಸಾಯುವ ರೋಗವನ್ನು ತಡೆಯುತ್ತದೆ.
*Add Shop ASP 90:*
◆ ಎ ಎಸ್ ಪಿ - 90 ಅಧಿಕ ಸಾಮರ್ಥ್ಯದ ಆಯಾನ್ ರಹಿತ ಉತ್ತೇಜಕ, ವಿಸ್ತಾರಕ, ಪ್ರವೇಶಕವಾಗಿದ್ದು ಎಲ್ಲಾ ಬೆಳೆಗಳಿಗೆ ಮತ್ತು ಮರ-ಗಿಡಗಳಿಗೆ ಪ್ರಬಲ ಉತ್ತೇಜಕ ಔಷಧಿಯಾಗಿದೆ.
◆ಇದು ಸಿಂಪಡಿಕೆ ಸಮಯದಲ್ಲಿ ಬಾಕಿ ಉಳಿಕೆಯನ್ನು ಪೂರ್ಣಗೊಳಿಸುತ್ತದೆ. ◆ ಇದು ಸಸ್ಯಗಳ ಬುಡದ ತೇವಾಂಶದ ವಿಸ್ತಾರವನ್ನು ಹೆಚ್ಚಿಸುತ್ತದೆ. ◆ ಇದು ಪರಿಸರ ಸ್ನೇಹಿ, ಸುರಕ್ಷಿತ ಮತ್ತು ಸಸ್ಯನಂಜು ರಹಿತ.
*ಬಳಸುವ ವಿಧಾನ:*
Add Shop DNC 90 - 3KG ಚೀಲ
Add Shop Crop Sudha - 3KG ಚೀಲ
3ವರ್ಷದ ಮೇಲಿನ ಪ್ರತಿ ಅಡಿಕೆ ಮರಕ್ಕೆ DNC-90- 30ಗ್ರಾಂ, Crop Sudha- 30ಗ್ರಾಂ ನಂತೆ ಮತ್ತು 3ವರ್ಷದ ಕೆಳಗಿನ ಸಸಿಗಳಿಗೆ DNC-90 15ಗ್ರಾಂ, Crop Sudha 15ಗ್ರಾಂ ನಂತೆ ನೇರವಾಗಿ ಭೂಮಿಗೆ ಮೇಲೆ ತಿಳಿಸಲಾಗಿರುವ ನಿರ್ದೇಶನದಂತೆ ಹಾಕಬೇಕು.
ಮೊದಲ ಹಂತದಲ್ಲಿ Add Shop DNC 90 ಮತ್ತು Add Shop Crop Sudha ಬಳಸಿ ಎರಡನೇ ಹಂತದಲ್ಲಿ ಮತ್ತು ಹೊಸದಾಗಿ ನಾಟಿ ಮಾಡಿರುವ ಗಿಡಗಳಿಗೆ Add Shop ಭೂಮಿ ಸುಧಾ ಮತ್ತು ASP 90 ಬಳಸುವುದು ಸೂಕ್ತ.
ಭೂಮಿ ಸುಧಾ 500 ಗ್ರಾಂ,
ASP 90 100ML 200ಲೀಟರ್ ನೀರಿನಲ್ಲಿ ಸರಿಯಾಗಿ ಮಿಶ್ರಣ ಮಾಡಿ ಪ್ರತಿ ಅಡಿಕೆ ಗಿಡಗಳಿಗೆ 2 ಲೀಟರ್ ನಂತೆ ಗಿಡದ ಬುಡಕ್ಕೆ ಮೇಲೆ ತಿಳಿದ ನಿರ್ದೇಶನದಂತೆ ಸೇರಿಸಬೇಕು.
ಹಳೆಯ ಅಡಿಕೆ ಮರಗಳಿಗೆ ನೀಡುವ ಪ್ರಮಾಣ 3ವರ್ಷದ ಕೆಳಗಿನ ಸಸಿಗಳಿಗೆ ನೀಡುವ ಪ್ರಮಾಣದಂತೆ ಇರಲಿ. ಹೆಚ್ಚಾದಂತೆ ಮರದ ಬೆಳವಣಿಗೆ ಮತ್ತು ಅಡಿಕೆ ಮರದ ಇಳುವರಿ ಹೆಚ್ಚಾಗಿ ಮರ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಅಡಿಕೆ ಬೆಳೆಗಾರರು, ತೆಂಗು, ಮೆಣಸು, ಕೊಕ್ಕೋ, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುವಾಗ ಎಲ್ಲದಕ್ಕೂ ಪ್ರತ್ಯೇಕವಾಗಿ ಗೊಬ್ಬರ ಕೊಟ್ಟು ಪೋಷಣೆ ಮಾಡುವುದು ಅತೀ ಅಗತ್ಯ. ಕಳೆ ನಿಯಂತ್ರಣ ಮಾಡಬೇಕು. ಮಣ್ಣು ಕೊಚ್ಚಣೆ ತಡೆಯಬೇಕು. ಹೀಗೆ ಮಾಡಿದರೆ ದುಬಾರಿ ಗೊಬ್ಬರವನ್ನು ಕಡಿಮೆ ಮಾಡಬಹುದು.
ಕರಿಮೆಣಸು ಬಳ್ಳಿಗೆ ಒಂದು ಅಡಿಕೆ ಮರಕ್ಕೆ ಕೊಡುವಷ್ಟೇ ಪ್ರಮಾಣದಲ್ಲಿ ಪೋಷಕಗಳನ್ನು ಕೊಡಬೇಕು.
ಕೊಕ್ಕೋ ಇದ್ದರೆ ಅದಕ್ಕೂ ಅಷ್ಟೇ ಪ್ರಮಾಣದಲ್ಲಿ ಕೊಡಬೇಕು. ಇಲ್ಲವಾದಲ್ಲಿ ಅವು ಮೊದಲು ಅಡಿಕೆ ಮರಕ್ಕೆ ಕೊಟ್ಟ ಗೊಬ್ಬರವನ್ನು ಕಸಿದು ಕೊಂಡು ಬಿಡುತ್ತದೆ.
ತೆಂಗಿನ ಮರಕ್ಕೆ ಒಂದು ಅಡಿಕೆ ಮರಕ್ಕೆ ಕೊಡುವ ಪ್ರಮಾಣದ ದುಪ್ಪಟ್ಟು ಪೋಷಕಗಳನ್ನು ಕೊಡಬೇಕು.
ಸಾವಾಯವ ವಿಧಾನದಲ್ಲೂ ಅಡಿಕೆ ಬೆಳೆಯಬಹುದು ಎಂದು ಈ ಮೂಲಕ ತಿಳಿದು ಕೊಂಡೆವು. ಗೊಬ್ಬರವನ್ನು ಒಮ್ಮೆಲೇ ಕೊಡುವುದು ಅಧಿಕ ಇಳುವರಿಗೂ ಸೂಕ್ತವಲ್ಲ ಜೇಬಿಗೂ ಸೂಕ್ತವಲ್ಲ.
ಸಾವಾಯವ ಕ್ರಷಿಗೆ ಅದಷ್ಟು ಆದ್ಯತೆ ನೀಡಿ. ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಿ.
Tags
ಕೃಷಿ