ಜಾವಗಲ್ : ಹೋಬಳಿಯ ಮಲದೇವಿಹಳ್ಳಿ ಹಾಗೂ ಬೆಳುವಳ್ಳಿ ಗ್ರಾಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜೆ ಜೆ ಎಂ "ಮನೆ ಮನೆಗೆ ಗಂಗೆ" ಕಾರ್ಯಕ್ರಮಕ್ಕೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ ನೀಡಿದರು,
ಶಾಸಕ ಕೆ ಎಸ್ ಲಿಂಗೇಶ್ ಮಾತನಾಡಿ ದೇಶದ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರ ಕನಸಿನ ಯೋಜನೆ ಯಾವ ಭಾಗದಲ್ಲಿ ನದಿ ಮೂಲದಿಂದ ಶಾಶ್ವತ ನೀರಿದೆ ಅಂತ ಭಾಗಗಳಲ್ಲಿ ಪ್ರತಿ ದಿನ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಪ್ರತಿ ಮನೆಗೂ ವಿಶೇಷ ಹೆಚ್ ಡಿ ಪೈಪ್ ಅಳವಡಿಸುವುದು ಪ್ರತಿ ಗ್ರಾಮದಲ್ಲಿ ಸುಸಜ್ಜಿತ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಎಂಜೀನಿಯರ್ ಉಮೇಶ ಮಾತನಾಡಿ ಮಲದೇವಿಹಳ್ಳಿ ಗ್ರಾಮಕ್ಕೆ 52 ಲಕ್ಷ ಹಾಗೂ ಬೆಳುವಳ್ಳಿ ಗ್ರಾಮಕ್ಕೆ 61 ಲಕ್ಷ ರೂ ನಲ್ಲಿ ಯೋಜನೆ ರೂಪಿಸಲಾಗಿದೆ ,ಶೀತಲ್ ಇಂಜೀನಿಯರ್ಸ ಪ್ರೈವೇಟ್ ಲಿಮಿಟೆಡ್ ಗುತ್ತಿಗೆ ನೀಡಿದ್ದು ನಾಲ್ಕು ತಿಂಗಳಲ್ಲಿ ಉತ್ತಮವಾಗಿ ಕಾಮಗಾರಿ ಮಾಡಲಾಗುವುದೆಂದರು,
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ವಿಮಲಾ ನಾಗರಾಜು, ರಾಂ ಪುರ ರಾಜಶೇಖರ್,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಲೋಲಾಕ್ಷಮ್ಮ ಮಹದೇವಪ್ಪಕಲ್ಲಳ್ಳಿ ನಾಗರಾಜು, ಮಹದೇವಪ್ಪ, ಯುವ ಮುಖಂಡರಾದ ದಿನೇಶ್ ಮೊಸಳೆ, ಅರವಿಂದ , ಗ್ರಾಮಸ್ಥರಾದ ಕುಬೇರಪ್ಪ,ಚಂದ್ರನಾಯ್ಕ, ಯೋಗಿಶ್ ನಾಯ್ಕ,ಪುರುಷೋತ್ತಮ, ಕೃಷ್ಣಮೂರ್ತಿ ಭೀಮೋಜಿರಾವ್, ದಿಗ್ಗೇನಹಳ್ಳಿ ಬಾಬು ಸಂಕೀಹಳ್ಳಿಮಧು,ಸಿದ್ದೇಶ್ ಉಪಸ್ಥಿತಿಯಿದ್ದರು