ಬೇಲೂರಿನಲ್ಲಿ ಒಂದೇ ದಿನ ೯ ಶಿಕ್ಷಕರು ನಿವೃತ್ತಿ: ಗೌರವಾರ್ಪಣೆ

 ಬೇಲೂರು:ಬೇಲೂರು ತಾಲ್ಲೂಕಿನ ಸರ್ಕಾರಿ ಸರ್ಕಾರಿ, ಖಾಸಗಿ ಪ್ರೌಢಶಾಲೆ, ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಯ ೯ ಶಿಕ್ಷಕ, ಶಿಕ್ಷಕಿಯರು ಒಂದೇ ದಿನ ನಿವೃತ್ತಿ ಹೊಂದಿದ್ದಾರೆ.

ಬೇಲೂರಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಗೌರವಿಸಲಾಯಿತು

ವಿಶೇಷವೆಂದರೆ ಈ ಎಲ್ಲಾ ನಿವೃತ್ತ ಶಿಕ್ಷಕ, ಶಿಕ್ಷಕಿಯರನ್ನು ನಿವೃತ್ತಿ ಹೊಂದಿದ ದಿನವೇ ಇಲ್ಲಿನ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ತೆರಳಿ ಗೌರವಿಸಿದ್ದು ನಡೆಯಿತು. 

ಬೇಲೂರಿನ ಹೊಯ್ಸಳ ಅನುದಾನಿತ ಪೌಢಶಾಲೆಯ ಹಿಂದಿ ಶಿಕ್ಷಕ ಕೆ.ಎನ್.ಚಂದ್ರಶೇಖರಪ್ಪ ೩೫ ವರ್ಷ ಸೇವೆ ಸಲ್ಲಿಸಿದ್ದರು. ಇವರ ನಿವಾಸಕ್ಕೆ ತೆರಳಿ ಶಿಕ್ಷಕ ದಂಪತಿಗಳನ್ನು ಸನ್ಮಾನಿಸಲಾಯಿತು. 

ಹಾಲ್ತೊರೆಕೊಪ್ಪಲಿನ ಎಲ್‌ಪಿಎಸ್ ಶಾಲೆಯ ಲಕ್ಷ್ಮಣ ಗೌಡ (೩೦ ವರ್ಷ ಸೇವೆ) ಪಂಡಿತನಹಳ್ಳಿಯ ಹೆಚ್‌ಪಿಎಸ್ ಶಾಲೆಯ ಪರ್ವತಯ್ಯ (೩೩ ವರ್ಷ ಸೇವೆ) ಶಿವಪುರಕಾವಲಿನ ಎಲ್‌ಪಿಎಸ್ ಶಾಲೆಯ ಬಸವರಾಜು (೨೩ ವರ್ಷ ಸೇವೆ) ತಟ್ಟೆಹಳ್ಳಿಯ ಹೆಚ್‌ಪಿಎಸ್ ಶಾಲೆಯ ಈರೇಗೌಡ (೩೦ ವರ್ಷ ಸೇವೆ) ಸಾಣೇನಹಳ್ಳಿಯ ಹೆಚ್‌ಪಿಎಸ್ ಶಾಲೆಯ ಶೇಷಯ್ಯ (೩೫ ವರ್ಷ ಸೇವೆ) ಬಲ್ಲೇನಹಳ್ಳಿಯ ಎಲ್‌ಪಿಎಸ್ ಶಾಲೆಯ ಶಾಮಣ್ಣ (೩೦ ವರ್ಷ ಸೇವೆ) ಬೇಲೂರು ಪಟ್ಟಣದ ಪೇಟೆ ಪೈಮರಿ ಶಾಲೆಯ ಮುಖ್ಯಶಿಕ್ಷಕಿ ಪದ್ಮ ಸತತ (೪೦ ವರ್ಷಗಳ ಸುಧೀರ್ಘ ಸೇವೆ) ಸಲ್ಲಿಸಿ ನಿವೃತ್ತರಾಗಿದ್ದಾರೆ.

Advertisement


ಇವರೆಲ್ಲರನ್ನು ಪ್ರಾ.ಶಾ.ಶಿ.ಸಂಘದ ಪ್ರ.ಕಾರ್ಯದರ್ಶಿ ಮಂಜೇಗೌಡ, ನಿದೇರ್ಶಕರಾದ ಆನಂದ್, ಸುಧಾಮಣಿ, ಲಕ್ಷ್ಮಣ್, ಜಿಲ್ಲಾ ಸಂಘದ ಸಂ.ಕಾರ್ಯದರ್ಶಿ ಬೊಮ್ಮಡಿಹಳ್ಳಿಕುಮಾರಸ್ವಾಮಿ, ರಾಜ್ಯ ಸ.ನೌಕರರ ಸಂಘದ ಉಪಾಧ್ಯಕ್ಷ ಪೂರ್ಣೇಶ್, ಜಿಲ್ಲಾ ಪ್ರಾ.ಶಾ.ಶಿ.ಸಂಘದ ಸಂಘಟನಾ ಕಾರ್ಯದರ್ಶಿ ರೂಪ, ತಾ.ಪ್ರಾ.ಶಾ.ಶಿ.ಸಂಘದ ಖಜಾಂಚಿ ಧರ್ಮಾಬೋವಿ ಗೌರವಿಸಿದರು. ಕಸಾಪ ಮಾಜಿ ಅಧ್ಯಕ್ಷ ಅರಸು ಇದ್ದರು.


Post a Comment

Previous Post Next Post