ನವದೆಹಲಿ: (ಫೆ.1): union Budget 2022-23: ಪ್ರಸ್ತುತ ಸಾಲಿನ ವರ್ಷದ ಬಜೆಟ್ ಇಂದಿನಿಂದ ಆರಂಭವಾಗಲಿದ್ದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23 ವರ್ಷದ ಬಜೆಟ್ ಮಂಡಿಸಲಿದ್ದಾರೆ.ಪ್ರತಿ ಬಾರಿ ಬಜೆಟ್ ನಲ್ಲಿ ಹಲವಾರು ನಿರೀಕ್ಷೆಗಳನ್ನು ಇರುತ್ತದೆ.
ಇಂದು ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಸಂಪುಟ ಸಭೆಯಲ್ಲಿ ಬಜೆಟ ಮಂಡನೆಗಾಗಿ ಅನುಮೋದನೆ ಪಡೆಯಲಿದ್ದಾರೆ.
ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಮೊದಲ ಬಾರಿ ಪೇಪರ್ ಲೆಸ್ ಬಜೆಟ್ ಮಂಡಿಸಿದ್ದರು. ಅದೇ ರೀತಿ ಈ ವರ್ಷವೂ ಕೂಡ ಕಾಗದರಹಿತ ಬಜೆಟ್ ಮಂಡನೆ ಮಾಡಲಿದ್ದಾರೆ.
ಆಟೊ ಮೊಬೈಲ್ ಕ್ಷೇತ್ರ;
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಜಾಸ್ತಿ ಇರುವ ಹಿನ್ನಲೆ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕಿದೆ. ವಿದ್ಯುತ್ ವಾಹನದ ಖರೀದಿಗಾಗಿ ಮತ್ತಷ್ಟು ಉತ್ತೇಜನ ನೀಡಬೇಕಿದೆ. 2070ರ ವೇಳೆಗೆ ನೆಟ್ ಝೀರೋ ಕಾರ್ಬನ್ ಎಮಿಷನ್ಸ್ ಸಾಧಿಸಲು ಈಗಲೇ ಭದ್ರ ಬುನಾದಿಯನ್ನು ಹಾಕಲು ಯೋಜನೆ ಮಾಡಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮ:
ಎಂದಿನಂತೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಈ ಬಾರಿ ತೆರಿಗೆಯಲ್ಲಿ ಗೃಹಸಾಲದ ಕಡಿತ ಮಿತಿ 2 ಲಕ್ಷ ರೂಪಾಯಿಗೆ ಹೆಚ್ಚಿಸುವುದು. ಮನೆ ಖರೀದಿ ಮಾಡುವವರು ವಿನಾಯಿತಿ ಸಿಗಬಹುದೆಂದು ಯೋಜನೆ ಹಾಕಲಾಗಿದೆ. ಮನೆ ಖರೀದಿದಾರರಿಗೆ ಜೊತೆ ಆಸ್ತಿ ಖರೀದಿದಾರರಿಗೆ ವಿನಾಯಿತಿ ಹಾಗೂ ಪ್ರಯೋಜನಗಳ ನಿರೀಕ್ಷೆಯಲ್ಲಿದೆ.
ಚಿಲ್ಲರೆ ವ್ಯಾಪಾರ:
ಕೋವಿಡ್ ಕಾರಣದಿಂದಾಗಿ ಹಿಂದುಳಿದಿರುವ ಚಿಲ್ಲರೆ ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಚಿಲ್ಲರೆ ವ್ಯಾಪಾರೋದ್ಯಮ ತೆರಿಗೆ ಸಂಬಂಧಿತ ವಿಚಾರಗಳನ್ನು ಸರಳಿಕರಣ ಮಾಡುವುದು. ಚಿಲ್ಲರೆ ವ್ಯಾಪಾರದ ಅಭಿವೃದ್ಧಿಗಾಗಿ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯನ್ನು ಅನುಷ್ಠಾನ ಮಾಡುವ ಸಾಧ್ಯತೆ ಇದೆ. ಬಂಡವಾಳ ಹೂಡಿಕೆಗಾಗಿ ವಿವಿಧ ರೀತಿಯ ಅವಕಾಶ ಹಾಗೂ ತೆರಿಗೆ ವಿನಾಯಿತಿ ಮತ್ತು ವಸ್ತುಗಳ ಮೇಲಿನ ಜಿಎಸ್ಟಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. 700 ಜಿಲ್ಲೆಗಳನ್ನು ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಯೋಜನೆ ಜಾರಿ ಮಾಡುವ ಸಾಧ್ಯತೆ ಇದೆ.
ಫಿನ್ಟೆಟ್ ಕಂಪನಿಗಳು
ಫಿನ್ಟೆಕ್ ಸೆಕ್ಟರ್ ಪ್ರಗತಿಗಾಗಿ ಡಿಜಿಟಲೀಕರಣ ಹಾಗೂ ನವೋನ್ಮೇಷಣೆಗೆ ಉತ್ತೇಜನ ನೀಡಬಹುದು.
ಬ್ಯಾಂಕುಗಳು ಹಾಗೂ ಫಿನ್ಟೆಕ್ ನವೋದ್ಯಮ ಗಳ ನಡುವೆ ಪಾಲುದಾರಿಕೆ ಹೆಚ್ಚಳಕ್ಕೆ ಬೆಂಬಲ. MSME ಎಂ ಎಸ್ ಎಂ ಇ ಬಲವರ್ಧನೆಗಾಗಿ ಬಂಡವಾಳ ಹೂಡಿಕೆಗಾಗಿ ಅವಕಾಶ ನೀಡಬಹುದು.
ಆರೋಗ್ಯ ಕ್ಷೇತ್ರ:
ಆರೋಗ್ಯ ಸೇವಾ ಮೌಲ್ಯ ಸೌಕರ್ಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಚಿಂತನೆ ಮಾಡಬಹುದು. ಆರೋಗ್ಯ ಕ್ಷೇತ್ರದಲ್ಲಿ ಇರುವ ಜಿಎಸ್ಟಿ ಪರಿವರ್ತನೆಯ ಪ್ರಯೋಜನ ಪಡೆಯಲು ಕ್ರಮ ಕೈಗೊಳ್ಳಬಹುದು. ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ ಧನ ನೀಡಬಹುದೆಂಬ ನಿರೀಕ್ಷೆಯಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವನ್ನು ಮತ್ತಷ್ಟು ಸರಾಗಗೊಳಿಸಲು ನಿಯಮವನ್ನು ಸಡಿಲಿಕೆ ಮಾಡಬಹುದು. ಜಿಡಿಪಿಯ ಶೇಕಡಾ 3ರಷ್ಟು ನಿಧಿ ಹಂಚಿಕೆಗಾಗಿ ಹೆಚ್ಚಾಗುವುದು.