World Heritage: ಕರ್ನಾಟಕದ ಹೊಯ್ಸಳ ದೇವಾಲಯಗಳು ವಿಶ್ವ ಪಾರಂಪರಿಕ ಕೇಂದ್ರವನ್ನು ಪರಿಗಣಿಸಲು ನಾಮನಿರ್ದೇಶನ ಸಲ್ಲಿಕೆ

ಬೆಂಗಳೂರು: (ಫೆ.1)World Heritage:2022-23ರ ವಿಶ್ವಪರಂಪರೆಯ ಪಟ್ಟಿಯಲ್ಲಿ ಕರ್ನಾಟಕದ ಬೇಲೂರು ಹಳೇಬೀಡು ಮತ್ತು ಸೋಮನಾಥಪುರ ದೇವಾಲಯಗಳನ್ನು ಪರಿಗಣಿಸಲು ಭಾರತದ ನಾಮನಿರ್ದೇಶನ ಅಂತಿಮಗೊಳಿಸಲಾಗಿದೆ.

ವಿಶ್ವಪಾರಂಪರಿಕಾ ಕೇಂದ್ರಕ್ಕೆ ದಾಖಲೆ ಸಲ್ಲಿಸುವುದು ಹಾಗೂ ಅದರ ತಾಂತ್ರಿಕ ಪರಿಶೀಲನೆ ಮಾಡುವುದು ಮೊದಲ ಹಂತವಾಗಿದೆ. ಯುನೆಸ್ಕೋ ಗೆ ಭಾರತದ ರಾಯಭಾರಿ ಪ್ರತಿನಿಧಿಯಾದ ವಿಶಾಲ್ ಅವರು ನಾಮನಿರ್ದೇಶನವನ್ನು ವಿಶ್ವಪರಂಪರೆಯ ನಿರ್ದೇಶಕರಿಗೆ ಸಲ್ಲಿಸಿದ್ದಾರೆ.

Belur

ಹೊಯ್ಸಳ ಶಿಲ್ಪಕಲೆಯ ಸಂಯೋಜನೆ ಏಪ್ರಿಲ್ 15, 2014 ರಿಂದ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿತ್ತು ಹಾಗೂ ಇದು ಮನುಷ್ಯನ ಸೃಜನಶೀಲ ಪ್ರತಿಭೆಯ ಅತ್ಯುತ್ತಮ ಸ್ವರೂಪವನ್ನು ಪ್ರತಿನಿಧಿಸುತ್ತದೆ ಎಂದು ಸಾಕ್ಷಿಯಾಗಿದೆ. ನಮ್ಮ ದೇಶದ ಇತಿಹಾಸ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸೇರಿದೆ ಎಂದು ಹೇಳಲಾಗಿದೆ.

Halebidu

ಭಾರತಕ್ಕೆ ಇದು ಅತ್ಯಂತ ಸಂತೋಷದ ಕ್ಷಣವಾಗಿದೆ. ಎಲ್ಲಾ ಮೂರು ಹೊಯ್ಸಳ ದೇವಾಲಯಗಳು ಭಾರತೀಯ ಪುರಾತತ್ವ ಸರ್ವೇಕ್ಷಣ ರಕ್ಷಿತ ಸ್ಮಾರಕಗಳ ಆಗಿದೆ. 200 ಸ್ಮಾರಕಗಳಿರುವ ರಾಜ್ಯ ಸಂರಕ್ಷಿತ ಸ್ಮಾರಕಗಳ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರ ನೋಡಿಕೊಳ್ಳುತ್ತಿದೆ.

Somanathapura



Post a Comment

Previous Post Next Post