ಕಳೆದ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋತರು 5 ವರ್ಷದಿಂದ ಮನೆ ಮಗನಾಗಿ ಕೆಲಸ ಮಾಡಿರುವೆ : ಹುಲ್ಲಳ್ಳಿ ಸುರೇಶ್

ಜಾವಗಲ್: ನಗರದ ಕರಿಯಮ್ಮ ದೇವಾಲಯದ ಖಾಸಗಿ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಅಪ್ಪು ಜನ್ಮದಿನ ಹಾಗೂ ಅನ್ಯ ಪಕ್ಷಗಳನ್ನು ತೊರೆದು ಭಾರತೀಯ ಜನತಾ ಪಕ್ಷ ಸೇರ್ಪಡೆ ಕಾರ್ಯಕ್ರಮ ಜರುಗಿತು, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಹುಲ್ಲಳ್ಳಿ ಸುರೇಶ್ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,


ಬೇಲೂರು ಕ್ಷೇತ್ರ ಈ ಭಾರಿ ಭಾರತೀಯ ಜನತಾ ಪಕ್ಷದ
ಅಭ್ಯರ್ಥಿಯು ಜಯಗಳಿಸುವ ಮೂಲಕ ಇತಿಹಾಸ ಬರೆಯಲಿದೆ ಕಳೆದ 29 ವರ್ಷದ ಇಂದೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾಪ್ಟನ್ ಗೋಪಿನಾಥ್ ಸ್ಪರ್ದೀಸಿದ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ 5500 ಮತ ನೀಡಿದ್ದರು 2013 ರ ಚುನಾವಣೆಯಲ್ಲಿ 45 ಸಾವಿರ ಮತ ನೀಡಿದ್ದಿರಿ  ಕಳೆದ ಭಾರಿ ಚುನಾವಣೆಯಲ್ಲಿ ನಾನು ಅಲ್ಪ ಮತದಿಂದ ಸೋತರು  ಕೂಡ ಕಳೆದ  5 ವರ್ಷದಿಂದ ಈ ಕ್ಷೇತ್ರದಲ್ಲಿ ನೆಲೆಸಿ ಬಡವರ,  ದಲಿತರ ,ಶೋಷಿತರ ಪರವಾಗಿ ಅವರ
ಮನೆ ಮಗನಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೆನೆ ಅನ್ಯ ಪಕ್ಷಗಳ 5 ದಿನಗಳ ಚುನಾವಣೆಗೆ ಬ್ರೇಕ್ ಹಾಕಬೇಕಿದೆ , ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮ ಹಾಕಬೇಕು, ವಿಶ್ವ
ಮಟ್ಟದ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಅಭಿವೃದ್ಧಿ
ಕಾರ್ಯಗಳು ಈ ಭಾಗಕ್ಕೆ ಯಡಿಯೂರಪ್ಪ ಮುಖ್ಯ ಮಂತ್ರಿಆದಾಗ  ಕೊಟ್ಟ ಹಳೇಬೀಡು _ಮಾದಿಹಳ್ಳಿ, ರಣಘಟ್ಟ ನೀರಾವರಿ ಯೋಜನೆಗಳು ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ರವರು
2023 ರ ಬಜೆಟ್ ನಲ್ಲಿ ಜನಸಾಮನ್ಯರಿಗೆ ಕೊಟ್ಟಿರುವ
ಕಾರ್ಯಕ್ರಮಗಳು ಈ ಭಾರಿ ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಪ್ರತಿಯೊಬ್ಬ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಆಸ್ತಿ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಬೂತನ ಅಧ್ಯಕ್ಷರು ಸದಸ್ಯರು ಎಚ್ಚರ ತಪ್ಪದ ಹಾಗೆ ಕಾರ್ಯನಿರ್ವಹಿಸಿ ಪಕ್ಷದ ಗೆಲುವಿಗೆ ಕಾರಣ ಅಗಬೇಕೆಂದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಆನಂದ
ಕೆ ಡಿ ಪಿ ಸದಸ್ಯ ಸಿದ್ದಪ್ಪಶೆಟ್ಡಿ, ಗ್ರಾ ಪಂ ಅಧ್ಯಕ್ಷರಾದ ಮಮತಾ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಸಾಲೆ ರಮೇಶ ಪಕ್ಷದ ಹಿರಿಯ ಮುಖಂಡರಾದ ಸುಬೇದಾರ್ ಚಂದ್ರಪ್ಪ ಚಂದ್ರಶೇಖರ್, ಸತ್ಯನಾರಾಯಣ, ವಿ ಟಿ ಎಸ್ ರಾಜಣ್ಣ ಪಾಪಣ್ಣ,ಹರಿಹರಮೂರ್ತಿ,  ಲಕ್ಷ್ಮೀಶ್, ಅಣ್ಣಪ್ಪ  ಶಾಂತಣ್ಣ,ನಟರಾಜ,ಪ್ರಸಾದ ಕೋಳಗುಂದ ಗ್ರಾ ಪಂ ಸದಸ್ಯರಾದ ಅಶೋಕ, ದೊರೆ,ನಾಗಶ್ರೀದೊರೆ,ನಾಗೇಂದ್ರ ಶಕ್ತಿ ಕೇಂದ್ರದ ಅಧ್ಯಕ್ಷ ಮಧು ಯುವಮೋರ್ಚ ಅಧ್ಯಕ್ಷ ಸೋಮಶೇಖರ ಯುವ ಮುಖಂಡರಾದ ಕಲ್ಲಂಗಡಿ ಮಂಜು,ಜೀವನ್, ಯತೀಶ್ ನವೀನ್ ಮತ್ತಿತರರು ಉಪಸ್ಥಿತಿಯಿದ್ದರು,

Post a Comment

Previous Post Next Post