ಭಾರತದಲ್ಲಿ ಯಾವ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಎಷ್ಟು ದಂಡ ಪರಿಷ್ಕರಿಸಲಾಗಿದೆ

ಭಾರತದಲ್ಲಿ ಯಾವ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಎಷ್ಟು ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಮುಖ್ಯ. ಈಗ ವಿವಿಧ ಸಂಚಾರ ನಿಯಮ ಉಲ್ಲಂಘನೆಯ ದಂಡಗಳನ್ನು ಪರಿಷ್ಕರಿಸಲಾಗಿದೆ.


ಹಾಗಾದ್ರೆ ಯಾವ ಸಂಚಾರ ನಿಯಮ ಉಲ್ಲಂಘನೆ, ಎಷ್ಟು ದಂಡ ಎನ್ನುವ ಬಗ್ಗೆ ಮುಂದೆ ಓದಿ.

ನೀವು ರಸ್ತೆಗೆ ವಾಹನವನ್ನು ತೆಗೆದುಕೊಂಡಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದರೊಂದಿಗೆ, ಟ್ರಾಫಿಕ್‌ನಲ್ಲಿ ವಾಹನಗಳು ಸುಗಮವಾಗಿ ಚಲಿಸುತ್ತದೆ. ಟ್ರಾಫಿಕ್ ಸಮಯದಲ್ಲಿ ನಿಮ್ಮ ಸುರಕ್ಷತೆಯು ಹೆಚ್ಚಾಗುತ್ತದೆ ಮತ್ತು ಪೋಲಿಸರಿಂದ ಕಡಿತಗೊಳಿಸಲ್ಪಡುವ ಚಲನ್ ಅನ್ನು ಸಹ ನೀವು ತಪ್ಪಿಸಬಹುದು.

ಸದ್ಯ ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಇದರೊಂದಿಗೆ ಹಲವು ಪ್ರಕರಣಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯೂ ಜೈಲು ಪಾಲಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಯಾವ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ. ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಭಾರತದಲ್ಲಿ ಯಾವ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇಲ್ಲಿ ನೀಡಲಿರುವ ಮಾಹಿತಿಯು ಕೇಂದ್ರ ಸರ್ಕಾರ ತಂದಿರುವ ಕಾನೂನನ್ನು ಆಧರಿಸಿದೆ. ಕೆಲವು ರಾಜ್ಯಗಳು ತಮ್ಮ ಸ್ವಂತಕ್ಕೆ ಅನುಗುಣವಾಗಿ ಇವುಗಳಲ್ಲಿ ಬದಲಾವಣೆಗಳನ್ನೂ ಮಾಡಿಕೊಂಡಿವೆ.

ಹೀಗಿದೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಂಚಾರಿ ನಿಯಮಗಳ ಪರಿಷ್ಕೃತ ದಂಡದ ವಿವರ

  • ಅಜಾಗರೂಕತೆ ಚಾಲನೆ - ರೂ.1000
  • ಅತೀ ವೇಗದ ಚಾಲನೆ - ರೂ.2000
  • ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದು - ರೂ.1000
  • ಸಮವಸ್ತ್ರ ಧರಿಸದೇ ಚಾಲನೆ - ರೂ.500
  • ಡಿಸಿ ಆದೇಶ ಉಲ್ಲಂಘನೆ - ಕೋರ್ಟ್ ಫೈನ್
  • ಕರ್ಕಶ ಹಾರ್ನ್ - ರೂ.500
  • ಬಲ್ಬು ಹಾರ್ನ್ ಅಳವಡಿಸದಿರುವುದು - ರೂ.500
  • ಬ್ರೇಕ್ ಲೈಟ್ ಇಲ್ಲದೇ ಚಾಲನೆ - ರೂ.500
  • ಅಮಲು ಪದಾರ್ಥ ಸೇವನೆ - ಕೋರ್ಟ್ ಫೈನ್
  • ಹೆಡ್ ಲೈನ್ ಇಲ್ಲದೇ ವಾಹನ ಚಾಲನೆ - ರೂ.500
  • ಕಣ್ಣು ಕುಕ್ಕುವ ಹೆಡ್ ಲೈನ್ - ರೂ.500
  • ಸರಕು ವಾಹನದಲ್ಲಿ ಜನರನ್ನು ಸಾಗಿಸುವುದು - ಕೋರ್ಟ್ ಫೈನ್, ಡಿಎಲ್, ಪರ್ಮಿಟ್, ಆರ್.ಸಿ ಕ್ಯಾನ್ಸಲ್.
  • ಕ್ಯಾಬೀನ್ ನಲ್ಲಿ ಜನರನ್ನು ಕೂರಿಸಿಕೊಂಡು ಹೋಗುವುದು - ಪ್ರತಿ ವ್ಯಕ್ತಿಗೆ ರೂ.200
  • ಚಾಲಕ ಹಸಿಮೀನು ಹೇರಿ ವಾಹನ ಸಾಗಿಸುವುದು - ರೂ.500
  • ಪರವಾನಿಗೆ ನಿಬಂಧನೆ ಉಲ್ಲಂಘನೆ ಮಾಡಿರುವುದು - ಕೋರ್ಟ್ ಫೈನ್
  • ಪೊಲೀಸ್ ನೋಟಿಸ್ ಗೆ ಸಹಿ ಹಾಕದಿರುವುದು, ಅಸಭ್ಯರೀತಿಯ ವರ್ತನೆ - ರೂ.2000
  • ವಾಹನವನ್ನು ಬಸ್ಸು ತಂಗುದಾಣದಲ್ಲಿ ನಿಲ್ಲಿಸಿ 
  • ನಿಯಮ ಉಲ್ಲಂಘನೆ - ರೂ.1000
  • ಡಿಎಲ್ ಇಲ್ಲದೇ ವಾಹನ ಚಾಲನೆ - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000
  • ಡಿಎಲ್ ಪರಿಶೀಲನೆ ತೋರಿಸದೇ ಇರುವುದು - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000.
  • ಡಿಎಲ್ ಇಲ್ಲದವರಿಗೆ ವಾಹನ ಚಾಲನೆಗೆ ನೀಡಿದ್ದು - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000.
  • ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ - ಕೋರ್ಟ್ ಫೈನ್
  • ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡಿದ್ದು - ಕೋರ್ಟ್ ಫೈನ್. ಹಾಗೆ 25,000ವರೆಗೆ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ. ವಾಹನ ನೋಂದಣಿ ರದ್ದು.
  • ಎಫ್‌ಎ ಬಾಕ್ಸ್ ಅಳವಡಿಸದೇ ಇರುವುದು - ರೂ.500.
  • ಆರ್ ಸಿ ವಿವರ ಬಾಡಿಗೆಯಲ್ಲಿ ಬರೆಯದೇ ಇರುವುದು - ರೂ.500
  • ನಂಬರ್ ಪ್ಲೇಟ್ ಇಲ್ಲದೇ, ದೋಷಪೂರಿತ ಬಳಕೆ - ರೂ.500
  • ಸೈಡ್ ಮಿರರ್ ಇಲ್ಲದಿರುವುದು - ರೂ.500
  • ಹ್ಯಾಂಡ್ ಬ್ರೇಕ್ ಇಲ್ಲದಿರುವುದು - ರೂ.500
  • ಖಾಸಗಿ ಕಾರಿನಲ್ಲಿ ಬಾಡಿಗೆ ಮಾಡಿದ್ದು - ಕೋರ್ಟ್ ಫೈನ್.
  • ದೂರು ಪೆಟ್ಟಿಗೆ ಇಲ್ಲದಿರುವುದು - ರೂ.500
  • ಅಗ್ನಿ ಶಾಮಕ ಸಾಧನ ಅಳವಡಿಸದಿರುವುದು - ರೂ.500
  • ದೂಮಪಾನ ಮಾಡುತ್ತ ವಾಹನ ಚಾಲನೆ - ರೂ.500
  • ಟ್ರಾಫಿಕ್ ಲೈಟ್ ಉಲ್ಲಂಘನೆ - ರೂ.500
  • ಪೊಲೀಸ್ ಸಿಗ್ನಲ್ ಉಲ್ಲಂಘನೆ - ರೂ.500
  • ಏಕಮುಖ ರಸ್ತೆಯ ವಿರುದ್ಧ ಚಾಲನೆ - ರೂ.500
  • ಚಾಲಕ ಬ್ಯಾಡ್ಜ್ ಧರಿಸದ್ದು - ರೂ.500

Post a Comment

Previous Post Next Post