ಹೊಳೆನರಸೀಪುರ : ಜಾನಪದ ಎಂಬತಕ್ಕಂತಹದ್ದು ಜಾತಿ, ಧರ್ಮವನ್ನು ಮೀರುವಂತಹದ್ದು, ಲಿಂಗಾತೀತ ವಾದಂತಹದ್ದು, ಕಾಲಾತೀತ ಹಾಗೂ ಪ್ರದೇಶಾತೀತವಾದಂತಹದ್ದು. ಹೆಣ್ಣು ಗಂಡು ಎಂಬ ಭೇದವಿಲ್ಲದಂತಹದ್ದು ಎಂದು ಜಿಲ್ಲಾ ಜಾನಪದಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ತಿಳಿಸಿದರು.
ಕರ್ನಾ್ಟಕ ಜಾನಪದ ಪರಿಷತ್ತು(ರಿ)ಬೆಂಗಳೂರು, ಹಾಸನ ಜಿಲ್ಲಾ ಘಟಕ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಹೊಳೆನರಸೀಪುರ ಹಾಗೂ ಸರ್ಕಾರಿ ಪದವಿ ಪೂರ್ವಕಾಲೇಜು ಪಡುವಲಹಿಪ್ಪೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿಯೇ ಹುಟ್ಟಿಕೊಂಡಂತಹದ್ದು ಜಾನಪದ. ಅಂತಹ ಜಾನಪದ ನಮ್ಮ ದೇಶದಲ್ಲಿ ಸಂವೃದ್ಧವಾಗಿದೆ. ಜಾನಪದವನ್ನು ಭಾರತದ ಖಣಜ ಎಂದು ಹೇಳುತ್ತೇವೆ. ಒಂದು ಕಾಲದಲ್ಲಿ ಕೇವಲ ಪುರುಷರು ಬಾರಿಸುವಂತಹ ಡೊಳ್ಳು ಕಲೆ, ವೀರಗಾಸೆ ಕುಣಿತ, ಕೋಲಾಟ,ಕಂಸಾಳೆ ನೃತ್ಯ ಕಲೆಗಳನ್ನು ಮಾಡುತ್ತಿದ್ದು , ಪ್ರಸ್ತುತ ಮಹಿಳೆಯರೂ ಸಹ ಕಲಿತು ವಿದೇಶದಲ್ಲಿ ಕಾರ್ಯಕ್ರಮ ನೀಡಿದ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇದೆ. ಪ್ರೀತಿಯಿಂದ ಬದುಕುವ ವಾತಾವರಣ ನಮ್ಮ ಜಾನಪದದಲ್ಲಿರುವುದನ್ನು ನಾವುಗಳು ಕಾಣುತ್ತಿದ್ದೇವೆ. ಜಾನಪದ ಕೇವಲ ಮನರಂಜನೆಗೆ ಸೀಮಿತವಾದುದಲ್ಲ.ಅದರಲ್ಲಿ ಪ್ರೀತಿ, ವಿಶ್ವಾಸವಿದೆ ಎಲ್ಲ ಒಟ್ಟುಗೂಡಿ ಬದುಕುವ ಸಾಮರಸ್ಯವಿದೆ ಎಂದು ಜಾನಪದ ನಡೆದು ಬಂದ ದಾರಿಯನ್ನು ವಿವರವಾಗಿ ತಿಳಿಸುತ್ತಾ ಮಕ್ಕಳು ಓದುವಿನೊಂದಿಗೆ ಕಲೆ, ಸಾಹಿತ್ಯದ ಬಗ್ಗೆ ಅರಿವಿರಲಿ ಎಂಬ ಉದ್ದೇಶದಿಂದ ಶಾಲಾ ಕಾಲೇಜುಗಳನ್ನುಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ. ಪಠ್ಯಕ್ಕೆ ಹೊರತಾದ ಶಿಕ್ಷಣವು ನಿಮ್ಮ ವ್ಯಕ್ತಿತ್ವನ್ನು ರೂಪಿಸುತ್ತದೆ. ಪಠ್ಯದ ಜೊತೆ ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕೆಂದು ಕಿವಿಮಾತು ಹೇಳುತ್ತಾ ಜಾನಪದ ಪರಿಷತ್ತಿಗೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ನಾವುಗಳೇ ಗೆಳೆಯರೆಲ್ಲ ಸೇರಿಕೊಂಡು ಮಾಡುತ್ತಿದ್ದು, ಪದಾಧಿಕಾರಿಗಳು ಶಾಲಾ ಕಾಲೇಜಿನಲ್ಲಿ ಕಡಿಮೆ ಖರ್ಚಿನಲ್ಲಿ ಆಯೋಜಿಸಿ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನಪದ ಅಕಾಡೆಮಿ ಸದಸ್ಯ, ಗಾಯಕ ದೇವಾನಂದ ವರಪ್ರಸಾದ್ ಮಾತನಾಡಿ ಅವರ ತಾಯಿ ಅವರಿಗೆ ಹೇಳಿಕೊಡುತ್ತಿದ್ದ ಹಾಡು, ಆಚಾರ ಕನಸಾಗು ನೀತೀಯ ಪ್ರಭುವಾಗು, ಮಾತಿನಲಿ ಚೂಡಾ ಮಣೀಯಾಗು, ಕಂದಯ್ಯ, ಜ್ಯೋತಿಯಾಗು ಜಗಕೆಲ್ಲ ಎಂಬ ಹಾಡಿನ ಮೂಲಕ ಪ್ರಾರಂಭಿಸಿ ಇಂತಹ ಹಾಡುಗಳನ್ನು ಹಾಡಿದವರು ಯಾವುದೇ ವಿದ್ಯಾಭ್ಯಾಸವನ್ನು ಮಾಡಿದವರಲ್ಲ, ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲ, ಸ್ಲೇಟಿನಲ್ಲಿ ಬರದವರಲ್ಲ ಅವರ ಜೀವನದ ಅನುಭವವನ್ನೇ ಹಾಡಿನ ರೂಪದಲ್ಲಿ ಹೇಳುತ್ತಿದ್ದರು ಎಂದು ತಿಳಿಸುತ್ತಾ ಕೆಲವು ಜನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಹಿರಿಯ ಸಾಹಿತಿಗಳು ಹಾಗೂ ಜಿಲ್ಲಾ ಜಾನಪದ ಪರಿಷತ್ತಿನ ಗೌರವ ಸಲಹೆಗಾರರಾದ ಮೇ್ಟಿಕೆರೆ ಹಿರಿಯಣ್ಣ ಮಾತನಾಡಿ ಸಸ್ಯ ಪ್ರೇಮ ಮತ್ತು ಪ್ರಕೃತಿ ಪ್ರೇಮದಿಂದಲೇ ಜಾನಪದ ಮೂಲ ಉಗಮಸ್ಥಾನವಾಗಿದ್ದು, ಸಸ್ಯವು ಮನಸ್ಸಿಗೆ ಮತ್ತು ದೇಹಕ್ಕೆ ಚೈತನ್ಯವನ್ನು ಕೊಡುತ್ತದೆ. ವ್ಯವಸಾಯದ ಜ್ಞಾನವನ್ನು ಅರಿತವರು ಸ್ತ್ರೀಯರು. ಹಾಗಾಗಿ ನಮ್ಮ ಸಂಸ್ಕೃತಿ ಭಾಗವಾದ ಜಾನಪದವನ್ನು ಉಳಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಫಯಾಜ್ ಪಾಷಾ ವಹಿಸಿದ್ದರು. ಸಮಾರಂಭದಲ್ಲಿ ಸ.ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸೈಯದ್ ಅಹಮದ್, ರೋಟರಿ ಮಾಜಿ ಅಧ್ಯಕ್ಷ ಹೆಚ್.ಆರ್.ಶಿವಕುಮಾರ್, ಪ್ರಗತಿ ಪರ ರೈತ ಆರ್.ಕೆ. ಪುಟ್ಟಸ್ವಾಮಿಗೌಡ ಕಾಲೇಜಿನ ಉಪನ್ಯಾಸಕ ಸತೀಶ್, ಮಹದೇವಸ್ವಾಮಿ ಮುಂತಾದವರಿದ್ದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ಕೊಳಲಿನ ಮೂಲಕ ಜಾನಪದ ಗೀತೆಗಳನ್ನು ನುಡಿಸಿ ರಂಜಿಸಿದರು.
ಇದೇ ಸಂದರ್ಭದಲ್ಲಿ ಡಾ.ಹಂಪನಹಳ್ಳಿ ತಿಮ್ಮೇಗೌಡರು ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಬಿ.ಕೆ.ಅನಿಲ್, ಗೌರವಾಧ್ಯಕ್ಷರಾಗಿ ಹೆಚ್.ಆರ್.ನಿಂಗೇಗೌಡ ಉಪಾಧ್ಯಕ್ಷರಾಗಿ ಉಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ. ಮಲ್ಲಿಕಾರ್ಜುನ್, ಖಜಾಂಚಿಯಾಗಿ ಡಿ.ರಾಜೇಶ್, ಜಂಟಿ ಕಾರ್ಯದರ್ಶಿಯಾಗಿ ತೀರ್ಥಕುಮಾರ್, ಸುನಿಲ್,ಬಿ.ಕೆ., ಮನುಕುಮಾರ್, ಶಶಿಕುಮಾರ್, ದರ್ಶಿನಿ, ಧನುಷ್, ಸಂಘಟನಾ ಕಾರ್ಯದರ್ಶಿಗಳಾಗಿ ಪುನಿತ್, ಲತಾ, ರೊಜಾ ಸಿ.ಆರ್., ಗೀತಾ, ವಿನಾಯಕ್, ಅಭಿಲಾಷ್, ದರ್ಶಿನಿ, ಧನುಷ್ ಗೌರವ ಸಲಹೆಗಾರರಾಗಿ ಹೆಚ್. ಆರ್.ಶಿವಕುಮಾರ್, ಆರ್.ಕೆ.ಪುಟ್ಟಸ್ವಾಮಿಗೌಡ ಆಯ್ಕೆಯಾದರು.