ಜೇನು ಪೋಷಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೈ ಮಾರುತಿ ದೇವರಾಜ್ ಆಯ್ಕೆ


ಸಕಲೇಶಪುರ:  ಜೇನು ಪೋಷಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೈ ಮಾರುತಿ ದೇವರಾಜ್ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಸಹಕಾರದ ಸಭೆಯಲ್ಲಿ ದೇವರಾಜ್ ಆಯ್ಕೆಯನ್ನು  ಚುನಾವಣೆ ಅಧಿಕಾರಿ ಘೋಷಿಸಿದರು.
ಸಹಕಾರ ಸಂಘದ ಉಪಾಧ್ಯಕ್ಷರಾಗಿ ಹೇಮಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಎರಡು ಸ್ಥಾನಕ್ಕೆ ತಲಾ ಏಕೈಕ ನಾಮಾಪತ್ರ ಸಲ್ಲಿಸಿದರಿಂದ ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಸಂಘದ ನಿರ್ದೇಶಕರಾಗಿ ಶಶಿ ಶೇಕರ್,
ತುಳಸಿ ಪ್ರಸಾದ್, ದೇವರಾಜ್, ಉದಯ್ ಕುಮಾರ್, ರಾಜ್ ಶೇಕರ್, ಸುಂದರಮ್ಮ, ವಿಕ್ರಮ್, ಕೃಷ್ಣೆಗೌಡ, ಸುದೀರ್, ಪ್ರಮೋದ್ ಕುಮಾರ, ಹೇಮಂತ್ ಕುಮಾರ್, ಸುರೇಂದ್ರ, ಬಸವರಾಜ್, ಜಯರಾಮ್, ಈರಯ್ಯ,ಲತಾ, ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಜೈ ಮಾರುತಿ ದೇವರಾಜ್, ಸಂಸ್ಥೆ ಯನ್ನು ಬೆಳಸಲು ಅನೇಕ ಯೋಜನೆ ಗಳನ್ನು , ಪ್ರಯೋಗ ಗಳನ್ನು ಮಾಡಬೇಕಾಗಿದೆ ಈ ಪ್ರಯತ್ನ ವನ್ನು ಎಲ್ಲರ ಸಹಕಾರದೊಂದಿಗೆ ಯಶಸ್ಸು ಗೊಳಿಸಲು ಪ್ರಮಾಣಿಕ ವಾಗಿ ಕೆಲಸ ಮಾಡುತ್ತೇನೆ ಎಂದರು.
ಜೇನು ಹುಳುಗಳ ಸಂತತಿ  ಅಪಾಯ ದಲ್ಲಿದೆ. ಮನುಷ್ಯ ಜೇನು ಹುಳುಗಳಿಗೆ ಕಂಟಕಗಾಗಿದ್ದಾನೆ. ಈ ಸಮಸ್ಯೆ ಹತೋಎ ತರಲು ಮನುಷ್ಯ ಮುಂದಾಗಬೇಕು ಎಂದರು.
ಜೇನು ಹುಳಸಾಗಣೆ ಪ್ರೋತ್ಸಾಹಕ್ಕೆ ಸಹಕಾರ ಸಂಘ ಮುಂದಾಗಿದೆ. ರಿಯಾಯಿತಿ ದರದಲ್ಲಿ ಜೇನು ಪೆಟ್ಟಿಗೆಗಳನ್ನು   ನೀಡಲಾಗುತ್ತದೆ ಎಂದರು.
ಜೇನು ಪೋಷಿಸಲು ಸದ್ಯದಲ್ಲಿ ಕಾರ್ಯಾಗಾರ ನಡೆಸಲಾಗುವುದು. ಈ ಮೂಲಕ ಉತ್ಪಾದನೆ ಹೆಚ್ಚಿಸಲು ಅನೇಕ ಯೋಜನೆ ಗಳನ್ನು ಹಮ್ಮಿಕೊಳ್ಳಲಾವುದು ಎಂದರು.

Post a Comment

Previous Post Next Post