ನಮ್ಮೂರು ನಮ್ಮ ಕೆರೆ ಕಾರ್ಯಕ್ರಮಕ್ಕೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ

ಜಾವಗಲ್ :ಕೆರೆ  ಕಟ್ಟೆಗಳು ಮನುಷ್ಯನ ಬದುಕಿನ ಜೀವನಾಡಿಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ, ಜಾತಿ-ಧರ್ಮದ ಬೇದವಿಲ್ಲದೇ ಎಲ್ಲಾ ಸಮುದಾಯ ಒಂದೇ ಅನ್ನುವ ನಿಟ್ಟಿನಲ್ಲಿ ವಿಶ್ವದಲ್ಲೆ ಒಂದು ಒಳ್ಳೆಯ ಸಂಸ್ಥೆಯಾಗಿ ಬೆಳೆಯುತ್ತಿದೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಎಂದು ಶಾಸಕ ಲಿಂಗೇಶ್ ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು
ಸಮೀಪದ ಬಂದೂರು ಗ್ರಾಮದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅರಸೀಕೆರೆ ತಾಲ್ಲೂಕು ಹಾಗೂ ಬಂದೂರು ಕೆರೆ ಅಭಿವೃದ್ಧಿ ಸಮಿತಿ ಮತ್ತು ಬಂದೂರು ಗ್ರಾಮಪಂಚಾಯತಿ ಸಹಭಾಗಿತ್ವದಲ್ಲಿ 'ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮಕ್ಕೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ ನೀಡಿ ಬಳಿಕ ಮಾತನಾಡಿದರು. 

ಇದಕ್ಕೂ ಮುನ್ನ ಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದ ಶಾಸಕ ಲಿಂಗೇಶ್,  ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ರಾಜ್ಯದಲ್ಲಿಯೇ ಉತ್ತಮ ಕೆಲಸ ಮಾಡುತ್ತಿದೆ. ಇಂದು ಎಷ್ಟೋ ಜನ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಳ್ಳುವರಿದ್ದಾರೆ. ಆದರೆ ಈ ಸಂಸ್ಥೆ 36 ಲಕ್ಷ ರೂ ವೆಚ್ಚದಲ್ಲಿ ಕೆರೆಯ ಹೂಳು ಎತ್ತಿ, ಮಳೆ ಬಂದಾಗ ನೀರು ನಿಂತರೆ ಕೃಷಿಕರ ಕುಟುಂಬಕ್ಕೆ ಅನುಕೂಲವಾಗುತ್ತದೆ ಎನ್ನುವ ದೃಷ್ಠಿಯಿಂದ  ಈ ಸತ್ಕಾರ್ಯ ಮಾಡಿದೆ ಇಂತಹ ಸಂಸ್ಥೆ ಕಟ್ಟಿ ಬೆಳೆಸುತ್ತಿರುವ ವಿರೇಂದ್ರ ಹೆಗ್ಗಡೆ ಯವರ ದೂರ ದೃಷ್ಟಿ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ಸಹಕಾರಿಯಾಗಿದೆ ಎಂದರು.  

ಪ್ರಾದೇಶಿಕ ನಿರ್ದೇಶಕರಾದ ಗಂಗಾಧರ್ ರೈ ಮಾತನಾಡಿ ಧರ್ಮಸ್ಥಳ ಒಂದು ಧಾರ್ಮಿಕ ಕ್ಷೇತ್ರವಾಗದೆ. ಸಾಮಾಜಿಕ ಕಲ್ಯಾಣ ಆಗಬೇಕು ಅನ್ನುವ ದೃಷ್ಟಿಯಿಂದ, ಪೂಜ್ಯರು ಸುಮಾರು ನಾಲ್ಕು ದಶಕಗಳಿಂದ ಕೃಷಿ, ಕೂಲಿ ಕಾರ್ಮಿಕ. ಈಗೆ ಎಲ್ಲಾ ವರ್ಗದ ಜನರ ಸಂಘಟನೆಯಿಂದ ಇಂದು ರಾಜ್ಯದಲ್ಲಿ 5 ಲಕ್ಚ 50 ಸಾವಿರ ಸ್ವಸಹಾಯ ಸಂಘಗಳಿದ್ದು, 45 ಲಕ್ಷ ಸದಸ್ಯರಿದ್ದಾರೆ. ಇವರೆಲ್ಲರ ಸಣ್ಣ ಠೇವಣಿ ಹಣ 2000 ಕೋಟಿ ಇದೆ. ಲಾಭಂಶವಾಗಿ 620 ಕೋಟಿ ಹಣವನ್ನ ಸದಸ್ಯರಿಗೆ ನೀಡಿದ್ದೆವೆ. ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಪರಿಸರ ಜಾಗೃತಿ,ಅಂತರ್ಜಲಮಟ್ಟ ಹೆಚ್ಚಿಸುವುದು ಆರೋಗ್ಯ ರಕ್ಷಾ, ಯಂತ್ರಶ್ರೀ ಯೋಜನೆ, ಕೆರೆ ಸಂರಕ್ಷಣೆ ಈಗೆ ಅನೇಕ ಯೋಜನೆಗಳು ಸಂಸ್ಥೆಯಿಂದ ನಡೆಯುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಶ್ವನಾಥ್, ಜಿಲ್ಲಾ ನಿರ್ದೇಶಕರಾದ ಜಯರಾಮ್, ತಾಲ್ಲೂಕು ಯೋಜನಾಧಿಕಾರಿಗಳಾದ ವಿನಾಯಕ್ ಪೈ, ಸಾಮಾಜಿಕ ಅರಣ್ಯ ಅಧಿಕಾರಿ ಶ್ರೀ ಲಕ್ಷ್ಮೀ, ತಾಲ್ಲೂಕು ಸಹಾಯಕ ನಿರ್ದೇಶಕರಾದ ವಿನಯ್ ಕುಮಾರ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹೇಶ, ಪಂ ಅಭಿವೃದ್ಧಿ ಅಧಿಕಾರಿ ಜಯಸಿಂಹ, ಗ್ರಾ ಪಂ ಸದಸ್ಯರಾದ ಲಾವಣ್ಯ ಪವನ್,  ಜಾವಗಲ್ ವಲಯ ಮೇಲ್ವಿಚಾರಕರಾದ ಶ್ರೀನಿವಾಸ ಹಾಗೂ ಸೇವಾಪ್ರತಿನಿಧಿಗಳು ಗ್ರಾ ಪಂ ಸದಸ್ಯರಾದ ಜಯಣ್ಣ, ವೇಂಕಟೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದ್ದರು.

Post a Comment

Previous Post Next Post