ಉಪ ಆರಕ್ಷಕ ನಿರೀಕ್ಷಣಾ ಅಧಿಕಾರಿ ಸರೋಜ ಭಾಯ್ ಅವರ ಸಮ್ಮುಖದಲ್ಲಿ ಬಹಳ ಅಚ್ಚು ಕಟ್ಟಾಗಿ ದಿನಚರಣೆ ಆಚರಿಸಲಾಯಿತು ಇದೆ ಸಂದರ್ಭದಲ್ಲಿ ಮಾತನಾಡಿದ ಪಿ. ಎಸ್. ಐ ಸರೋಜ ಭಾಯ್ ಅವರು ಭಾರತ ಮಾತೆಯನ್ನು ದಾಸ್ಯದ ಸಂಕೋಲೆ ಇಂದ ಬಿಡಿಸಲು ಹಗಲಿರುಳು ಶ್ರಮಿಸಿದ ಕಷ್ಟಗಳನ್ನು ಎದುರಿಸಿದ ತಮ್ಮ ಬದುಕನ್ನೇ ಮುಡುಪಾಗಿ ಇಟ್ಟ ರಾಷ್ಟ್ರ ಭಕ್ತರಿಗೆ ಗೌರವ ಸಲ್ಲಿಸುವ ದಿನವಿಂದು ಅವರ ಸೇವೆ ಸದಾ ಅಮರ ಎಂದು ಮಾತನಾಡಿ. ಠಾಣೆಯ ಸಹ ಉದ್ಯೋಗಿಗಳಿಗೆ ಸಿಹಿ ಹಂಚಿ ಸಂತೋಷ ವ್ಯಕ್ತ ಪಡಿಸಿದರು..ಹಾಗೂ ಕೋವಿಡ್ 19 ಸಮಯದಲ್ಲಿ ತಮ್ಮ ಕುಟುಂಬ ಬದಿಗೊತ್ತಿ ಕೆಲಸ ನಿರ್ವಹಿಸಿದ ಠಾಣಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು ಮತ್ತು ನಿಮ್ಮ ಕರ್ತವ್ಯ ಹೀಗೆ ಮುಂದು ವರೆಯಲಿ ಎಂದರು.
Tags
ಚನ್ನರಾಯಪಟ್ಟಣ