ಹಳೇಬೀಡು:ಜೇನುಕಲ್ಲು ಸಿದ್ದೇಶ್ವರ ಸಮುದಾಯ ಭವನದಲ್ಲಿ ಹಳೇಬೀಡಿನ ರೋಟರಿ ಕ್ಲಬ್ ಶಾಖೆ ಉದ್ಘಾಟನೆ ನೆರವೇರಿತು. ರೋಟರಿ ಕ್ಲಬ್ ವಲಯ ಗವರ್ನರ್ ಬಿ.ರಾಜಾರಾಂ ಭಟ್ ಹಳೇಬೀಡಿನ ನೂತನ ಶಾಖೆಯನ್ನು ಉದ್ಘಾಟಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಆರ್.ಸುರೇಶ್ ಹಾಗೂ ಕಾರ್ಯದರ್ಶಿ ಎಚ್.ಆರ್. ಪ್ರಮೋದ್ ಅವರಿಗೆ ನೂತನ ಘಟಕದ ಅಧಿಕಾರವನ್ನು ಹಸ್ತಾಂತರಿಸಿದರು. ನಂತರ ರಾಜಾರಾಂ ಭಟ್ ಮಾತನಾಡಿ, ಪಲ್ಸ್ ಪೋಲಿಯೊ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ಪ್ರಮುಖ ಪಾತ್ರ ನಿರ್ವಹಿಸಿದೆ. ದೇಶದಲ್ಲಿ ಸಂಕಷ್ಟ ಎದುರಾದಾಗ ರೋಟರಿ ಸಂಸ್ಥೆ ಮುಂದಾಗಿರುತ್ತದೆ. ರೋಟರಿ ಸಂಸ್ಥೆ ಸದಾ ಸಮಾಜ ಮುಖಿ ಕೆಲಸದಲ್ಲಿ ತೊಡಗಿರುತ್ತದೆ. ರೋಟರಿ ಸಂಸ್ಥೆಯ ಯಾವುದೆ ಘಟಕದಲ್ಲಿ ಸದಸ್ಯತ್ವ ಪಡೆದರೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನೋಂದಣಿಯಾಗುತ್ತದೆ ಎಂದರು.
ಹಳೇಬೀಡು ಘಟಕ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, ಹಳೇಬೀಡಿಗೆ ರೋಟರಿ ಸಂಸ್ಥೆಯ ಅಗತ್ಯವಿತ್ತು. ಪ್ರವಾಸಿ ತಾಣವಾದ ಹಳೇಬೀಡು ವಿವಿಧ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ರೋಟರಿಯಿಂದ ಹಳೇಬೀಡಿನಲ್ಲಿ ಸಮಾಜಮುಖಿ ಚಟುವಟಿಕೆ ಕೈಗೊಳ್ಳುತ್ತೇವೆ ಎಂದರು.
ಕಾರ್ಯದರ್ಶಿ ಎಚ್.ಆರ್.ಪ್ರಮೋದ್ ಮಾತನಾಡಿ, ರೋಟರಿ ಕ್ಲಬ್ ನಿಂದ ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಂಪ್ಯೂಟರ್ ನೀಡಲಾಗಿದೆ. ಶೈಕ್ಷಣಿಕ ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲಿ ಹಳೇಬೀಡು ರೋಟರಿ ಶಾಖೆ ನಿರ್ವಹಿಸಲಿದೆ ಎಂದರು. ನೂತನ ಕಾರ್ಯದರ್ಶಿ ಪ್ರಮೋದ್
ಸಹಾಯಕ ಗವರ್ನರ್ ಸಂದೇಶ್ ಟಿ.ಎಸ್, ಮಾಜಿ ಸಹಾಯಕ ಗವರ್ನರ್ ಬಿ.ಎಂ.ಶರತ್ ಝೋನಲ್ ಲೆಫ್ಟಿನೆಂಟ್ ವಿಜಯ್ ಕುಮಾರ್, ಬೇಲೂರು ಮಾತೃ ಸಂಸ್ಥೆ ಅಧ್ಯಕ್ಷ ವೈ.ಡಿ.ಲೋಕೇಶ್, ಹಳೇಬೀಡು ರೋಟರಿ ಘಟಕ ಖಜಾಂಚಿ ಎ.ಎಸ್.ಸುರೇಶ್ ಇದ್ದರು.
ವರದಿ: ಎ.ಸಿ.ಎನ್
![]() |
| Advertisement |



