ಪಣತೋಟ್ಟು ಅನೇಕ ವೈದ್ಯಾಧಿಕಾರಿಗಳ ಕೆಲಸ ಡಾ. ರಾಜೇಶ್ ಬಾರ್ದಿಲ

ರಾಮನಾಥಪುರ;- ಕೊರೊನಾ ಪೀಡರಿಗಿಂತ ಭಾರೀ ಸಂಕಷ್ಟದಲ್ಲಿದ ಪರಿಸ್ಥಿತಿಯನ್ನು ಎದುರಿಸುವವರೆಂದರೆ, ಕೊರೊನಾ ಸೋಂಕಿಗೆ ನೀಡುವ ವೈದ್ಯರು, ತಮ್ಮ ಕುಟುಂಭದ ಹಿತಾಶಕ್ತಿಯನ್ನು ದೂರತಳ್ಳಿ ಸ್ವಂತ ತಮ್ಮ ವೈದ್ಯವೃತ್ತಿ ಜೀವನವನ್ನೇ ಪಣಕಿಟು ಕಾರ್ಯನಿರ್ವಹಿಸಿ, ಕಾರ್ಯದಕ್ಷತೆಯಲ್ಲಿ ಇಂಚೂ ಸಹ ವ್ಯತ್ಯಾಸವಾಗುವಂತೆ ನಿಖರತೆ ಕಾಯ್ದುಕೊಂಳ್ಳಬೇಕಾದ ಅನಿರ್ವಾಯತೆ ವೈದ್ಯರಿಗೆ ಒಂದು ಸವಾಲೇ ಸರಿ. 
ಇಚ್ಚೆ ಪಟ್ಟು ಕೆಲಸದಲ್ಲಿ ತೊಡಗಿಸಿಕೊಂಡರೆ ಯಾವುದು ಕಷ್ಟವಾಗದು ಎಂಬುದಕ್ಕೆ ಈ ವ್ಯಾಪ್ತಿಯಲ್ಲಿ ಕೊರೊನಾ ಎಂಬ ಮಾರಿಯನ್ನು ತಡೆಯಬೇಕೆಂದು ಪಣತೋಟ್ಟು ಅನೇಕ ವೈದ್ಯಾಧಿಕಾರಿಗಳು ಕೆಲಸ ಮಾಡುತ್ತಿದ್ದು, ಅದರಲ್ಲಿ ಈ ಗ್ರಾಮೀಣ ಪ್ರದೇಶದ ರಾಮನಾಥಪುರ, ಬಸವಪಟ್ಟಣ, ಕಾಳೇನಹಳ್ಳಿ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿ ಡಾ. ರಾಜೇಶ್ ಬಾರ್ದಿಲ ಅವರು ಸಾಕ್ಷಿಯಾಗಿದ್ದಾರೆ, 
ಜಿಲ್ಲೆ ಮತ್ತು ತಾಲ್ಲೂಕು ಅಡಳಿತವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಕಾಯ-ವಾಚಾ-ಮನಸಾ ಇಚ್ಚೆಯಂತೆ ಇಲ್ಲಿಯ ಹೋಬಳಿ ವ್ಯಾಪ್ತಿಯಲ್ಲಿ ವೈದ್ಯೋ ನಾರಾಯಣೋ ಹರಿ ಎಂಬುದು ಪ್ರಚೀನ ಉಕ್ಕಿಯಾದರೂ ಇಂದಿಗೂ ಪ್ರಸ್ತುತವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಅದ ಕೊಡುಗೆ ನೀಡುತ್ತಿರುವ ಡಾ. ರಾಜೇಶ್ ಬಾರ್ದಿಲ ಅವರು ತೊಡಗಿಸಿಕೊಂಡಿದ್ದಾರೆ. ಕಛೇರಿಗಳಲ್ಲಿ ಸಭೆ ಮತ್ತು ಅಸ್ಪತ್ರೆಯಲ್ಲಿ ರೋಗಿಗಳನ್ನು ತಪಾಷಣೆ ಜೊತೆಗೆ ಗ್ರಾಮೀಣ ಪ್ರದೇಶದ ಭಾಗಕ್ಕೆ ಹೊರಟರೇ ಬರುವುದು ರಾತ್ರಿಯೇ. ಪ್ರತಿನಿತ್ಯ ನೂರಾರು ಮಂದಿಗೆ ಅರೋಗ್ಯ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತರೊಂದಿಗೆ ಒಟ್ಟುಗೂಡಿಕೊಂಡು ಹಳ್ಳಿಗಳ ಮನೆ-ಮನೆಗೂ ತೆರಳಿ ಕೊರೊನಾ ತಡೆಯುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಡಾ, ರಾಜೇಶ್ ಬಾರ್ದಿಲ ಅವರು.
ಕೊರೊನಾ ಸೊಂಕಿನಿಂದ ಎಲ್ಲೆಡೆ ಅತಂಕವಿರುವ ಈ ಸಂದರ್ಭದಲ್ಲಿ ಸಾಮಾಜಿಕ, ಅಂತರ ಕಾಯ್ದುಕೊಂಡು ಹೋಗಬೇಕು. ಮೊದಮೊದಲು ಕೊರೊನಾ ವಿಚಾರ ಕೇಳಿದಾಗ ಸ್ವಲ್ಪ ಗಾಬರಿಗೊಂಡೆ. ನಂತರ ಅಸ್ಪತ್ರೆ ವಾರ್ಡ್ ಒಳ ಪ್ರವೇಶಿಸಿದ ಮೇಲೆ ನನ್ನೋಳಗಿನ ವೈದ್ಯ ಧರ್ಮ ಜಾಗೃತವಾಯ್ತು. ಇಂತಹ ಸಂದರ್ಭದಲ್ಲಿ ಸಿಕ್ಕಿರುವ ಜನರ ಸೇವೆ ಮನಸ್ಸಿಗೆ ಸಂತೃಪ್ತಿ ಮನದಲ್ಲಿ ಮೂಡಿತು ಎಂದು ತಿಳಿಸಿದರು.
ವೈದ್ಯಾಧಿಕಾರಿ ಹೇಳಿಕೆ;- ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಶುಚ್ಚತ್ವ, ನಿಯಮಿತ ಅರೋಗ್ಯ ತಪಾಸಣೆ, ಮತ್ತು ಅರೋಗ್ಯ ಸೇತು ಮುಂತಾದವು ಕಡ್ಡಾಯ ಎಂಬುದು ಪೂರ್ವಕ ಸಲಹೆ. ಕೆಲವು ಸಂಘ ಸಂಸ್ಥೆಗಳು ಸನ್ಮಾನಗಳು ನಮ್ಮ ಜವಾಬ್ದಾರಿಗಳನ್ನು ಇನ್ನೂ ಹೆಚ್ಚಿಸಿದೆ. ಎಂದೂ ಈ ಸನ್ಮಾನವನ್ನು ವೈಯಕ್ತಿಕವಾಗಿ ಜಿಲ್ಲೆಯ ಅರೋಗ್ಯ ಮತ್ತು ಕುಡುಂಬ ಕಲ್ಯಾಣಧಿಕಾರಿ ಡಾ. ಕೆ.ಎಂ. ಸತೀಶ್, ತಾಲ್ಲೋಕು ಅರೋಗ್ಯಧಿಕಾರಿ ಡಾ. ಸ್ವಾಮಿಗೌಡ, ಈ ಭಾಗದಲ್ಲಿ ಅರೋಗ್ಯ ಸೇವೆ ಸಲ್ಲಿಸುತ್ತಿರುವ ಡಾ. ಪ್ರದೀಪ್, ಡಾ. ಪೂಜ್ಯ, ಡಾ. ದಿವ್ಯಾ ಮುಂತಾದವರ ಪರವಾಗಿ ಸ್ವೀಕರಿಸಲು ಹೆಮ್ಮೆ ಅನಿಸುತ್ತದೆ. ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನಿಂದ ಈ ತರಹದ ಕಾರ್ಯಕ್ರಮಗಳು ಅಯೋಜಿಸಲ್ಪಡುತ್ತಿರಲಿ ಎಂದು ಡಾ, ರಾಜೇಶ್ ಬಾರ್ದಿಲ ಶುಭ ಹಾರೈಸಿದರು.

Post a Comment

Previous Post Next Post