ಜಾವಗಲ್: ಕೋವಿಡ್ 19 ನಡುವೆ ಸರ್ಕಾರದ ಕಟ್ಟುನಿಟ್ಟಿನ ನಿಯಮದಂತೆ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಎಚ್ಚರಿಕೆ ಕ್ರಮದೊಂದಿಗೆ ಗುರುವಾರ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದ ಎಸ್. ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದೆ.
ಒಟ್ಟು ಈ ಪರೀಕ್ಷಾ ಕೇಂದ್ರದಲ್ಲಿ 300 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮೊದಲು ಮಾಸ್ಕ್ ನೀಡಿ ನಂತರ ಆರೋಗ್ಯ ಇಲಾಖೆಯವರಿಂದ ವಿದ್ಯಾರ್ಥಿಗಳ ತಾಪಮಾನ ಪರೀಕ್ಷಿಸಿ ನಂತರ ಸ್ಕೌಟ್ಸ್ ಮತ್ತು ಗೈಡ್ಸ ತಂಡ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಕೊಟ್ಟು ನಂತರ ಕೊಠಡಿ ಒಳಗೆ ಕಳುಹಿಸಲಾಗುತ್ತಿತ್ತು. ಎಲ್ಲಾ ವಿದ್ಯಾರ್ಥಿಗಳು ಅಂತರ ಕಾಪಾಡುವ ವಿಷಯದಲ್ಲಿ ಅತ್ಯಂತ ಎಚ್ಚರಿಕೆ ಕ್ರಮ ವಹಿಸಿರುವುದು ಎದ್ದು ಕಾಣುತ್ತಿತ್ತು.
ಕಾಲೇಜಿನ ಉಪಪ್ರಾಂಶುಪಾಲರಾದ ಯೋಗಿಶ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಜಗದೀಶ್, ಸಬ್ ಇನ್ಸಸ್ಪೆಕ್ಟರ್ ಅರುಣಕುಮಾರ್ ಹಾಗೂ ಹಿರಿಯ ಶಿಕ್ಷಕರು,ಅರೋಗ್ಯ ಸಹಾಯಕಿಯರು ಶಾಲಾ ಸಿಬ್ಬಂದಿ ಇದ್ದರು.
Tags
ಅರಸೀಕೆರೆ