ರೇವಣ್ಣನಾದ್ರೂ ಬರಲಿ ಬೊಮ್ಮಣ್ಣನಾದ್ರೂ ಬರಲಿ; ನಾನು ಬಂದಿರೋದು ರಾಜಕಾರಣ ಮಾಡೋಕೆ : ಶಾಸಕ ಪ್ರೀತಂ ಗೌಡ


 ಹಾಸನ: ನಾನೇನು ಅವರು ಹೇಳಿದ ಹಾಗೇ ಕೇಳಿಕೊಂಡು ಕುಳಿತು ಕೊಳ್ಳುವುದಕ್ಕೆ ಬಾಂಗ್ಲಾ ಹಾಗೂ ನೇಪಾಳದಿಂದ ಬಂದಿಲ್ಲ, ನಾನು ಹಾಸನದಲ್ಲೆ ಹುಟ್ಟಿರುವುದು ನನಗೂ ಗೊತ್ತಿದೆ ರಾಜಕಾರಣ ಮಾಡುವುದಕ್ಕೆ ಎಂದು ಬಿಜೆಪಿ ಶಾಸಕ ಪ್ರೀತಮ್​ ಗೌಡ ಅವರು ಮಾಜಿ ಸಚಿವ ಹೆಚ್​.ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಹಾಸನದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಂದು ಹಾಸನ ಕ್ಷೇತ್ರ ರೀ, ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕು ಗೊತ್ತಿದೆ, ಅವರು ಬೇಕಾದರೇ ಹೊಳೆನರಸೀಪುರದಲ್ಲಿ ಮಾಡಲಿ. ಅವರನ್ನು ದ್ವೇಷ ಮಾಡಲಿಕ್ಕೆ ನಾನೇನು ಮಂತ್ರಿನಾ(?)ಎಂದರು.

ಇನ್ನು ಇವರನ್ನು ಬಿಟ್ಟು ಜಿಲ್ಲೆಯಲ್ಲಿ ಯಾರು ಬೇಳೆಯಬಾರದು, ಕೆಂಪು ಲೈಟ್ ಹಾಕೊಂಡು ಓಡಾಡಬಾರದು, ಅಧಿಕಾರ ಇರಲಿ ಬಿಡಲಿ ಅವರದ್ದೇ ನಡೆಯಬೇಕು, ಇದು ಪಾಳೆಗಾರರ ಕಾಲವಲ್ಲ, ಮೊದಲು ಇಂತಹ ಮನಸ್ಥಿತಿಯಿಂದ ಹೊರಬರಲಿ ಎಂದು ಅವರು ಹೇಳಿದರು.

ಸದ್ಯ ಹಾಸನದ ಬಗ್ಗೆ ತಲೆಕೆಡಿಕೊಳ್ಲಬಾರದು ಅಷ್ಟೇ. ಈ ಕ್ಷೇತ್ರಕ್ಕೂ ರೇವಣ್ಣಗೂ ಸಂಬಂಧ ಏನು(?) ನಾನು ಹೊಳೆನರಸೀಪುರ ಕ್ಷೇತ್ರಕ್ಕೆ ಅನುದಾನ ತಂದಿಲ್ಲ, ಹಾಸನ ಕ್ಷೇತ್ರಕ್ಕೆ ತಂದಿರುವುದು. ಬೇಕಾದರೇ ರೇವಣ್ಣ ಬಂದು ಹಾಸನ ಕ್ಷೇತ್ರಕ್ಕೆ ಬಂದು ಚುನವಾಣೆಗೆ ನಿಲ್ಲಲಿ ಎಂದು ಅವರು ಹೆಚ್​.ಡಿ ರೇವಣ್ಣ ಅವರಿಗೆ ಸವಾಲ್​ ಹಾಕಿದರು.

ಅದುವಲ್ಲದೇ, ರೇವಣ್ಣ, ರಾಗಿ ಮಾರಿ, ಜೋಳ ಮಾರಿ ಅನುದಾನ ತಂದಿದ್ರಾ(!) ಸರ್ಕಾರದ ದುಡ್ಡು ಕಣ್ರಿ, ನನ್ನ ಕ್ಷೇತ್ರಕ್ಕೆ ರೇವಣ್ಣನಾದ್ರೂ ಬರಲಿ, ಬೊಮ್ಮಣ್ಣಾನಾದ್ರೂ ಬರಲಿ ನಾನು ಹಾಸನ ಕ್ಷೇತ್ರದ ಮಗ. ರೇವಣ್ಣ ಬಂದ್ರೆ ಸ್ವಾಗತ ಚುನವಾಣೆ ಮಾಡುವ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಅವರ ಮನಸ್ಥತಿಯನ್ನು ಚೆಂಜ್ ಮಾಡಿಕೊಳ್ಳಲಿ. ನಿನ್ನ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ತಂದೆ ಸಮಾನವಾದ ವ್ಯಕ್ತಿ ಬಗ್ಗೆ ಇದನ್ನು ನಾನು ಖಂಡಿಸುತ್ತೇನೆ. ನಮ್ಮ ಸಂಸದರು ನನಗಿಂತ ಎಂಟು ವರ್ಷ ಕಿರಿಯರು ನಾನೇನಾದ್ರು ಏಕವಚನದಲ್ಲಿ ಮಾತನಾಡಿಸುತ್ತೀನಾ ಎಂದು ಶಾಸಕ ಪ್ರೀತಂ ಗೌಡ ಅವರು ಹೆಚ್​.ಡಿ ರೇವಣ್ಣ ವಿರುದ್ಧ ಗುಡುಗಿದರು.

Post a Comment

Previous Post Next Post