ತಹಶೀಲ್ದಾರ್ ಮಂಜುನಾಥ್ ವರ್ಗಾವಣೆ ಮಾಡಿದರೆ ಉಗ್ರ ಪ್ರತಿಭಟನೆ: ಭಜರಂಗದಳ ಎಚ್ಚರಿಕೆ

ಸಕಲೇಶಪುರ : ತಾಲ್ಲೂಕಿನಲ್ಲಿ ಯಾವುದೆ ರೀತಿಯ ಕೊರೋನಾ ಪ್ರಕರಣಗಳು ಕಂಡು ಬರದಂತೆ ಎಚ್ಚರಿಕೆ ವಹಿಸಿರುವ ಪ್ರಾಮಾಣಿಕ ಅಧಿಕಾರಿ ತಹಶೀಲ್ದಾರ್ ಮಂಜುನಾಥ್ ರವರನ್ನು ವಿನಾಕಾರಣ ವರ್ಗಾವಣೆ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ಹೇಳಿದರು.
   ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ರವರಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದ ನಂತರ ಮಾತನಾಡಿ  ತಹಶೀಲ್ದಾರ್ ಮಂಜುನಾಥ್ ಇದುವರೆಗೂ ಯಾವುದೇ ಒಂದು ಕೋವಿಡ್ 19 ಪ್ರಕರಣ ತಾಲೂಕಿನಲ್ಲಿ  ವರದಿ ಆಗದಂತೆ, ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುತ್ತಾರೆ. ಕಡ್ಡಾಯ ಮಾಸ್‌ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಜನಜಾಗೃತಿ ಅರಿವನ್ನು ಮೂಡಿಸಲು ತಹಶೀಲ್ದಾರ್ ಕಳೆದ ಮೂರು ತಿಂಗಳಿನಿಂದ ಸತತ ಶ್ರಮ ಹಾಕಿದ್ದಾರೆ. ಲಾಕ್ ಡೌನ್ ಸಂದ‘ರ್ದಲ್ಲಿ ಹೊರರಾಜ್ಯದಿಂದ ಕೂಲಿ ಅರಸಿ ಬಂದಿದ್ದಂತಹ ಅಸ್ಸಾಂ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡು ಬಂದ ಕೂಲಿ ಕಾರ್ಮಿಕರನ್ನು ಸುರಕ್ಷಿತವಾಗಿ ಆಯಾ ರಾಜ್ಯಗಳಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ತಹಶೀಲ್ದಾರ್ ಮಂಜುನಾಥ್ ಮಾಡಿದ್ದರು.ಅಶುಚಿತ್ವದಿಂದ ಸಾಂಕ್ರಾಮಿಕ ರೋಗಗಳು ಹಾಗೂ ಕೊರೋನಾ ಹರಡುತ್ತದೆ ಎಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಗೋಹತ್ಯೆ ಮಾಡುತ್ತಿದ್ದನ್ನು ತಡೆದು ಶಿಸ್ತು ಕ್ರಮ ಕೈಗೊಂಡ ಕಾರಣಕ್ಕಾಗಿ ತಹಶೀಲ್ದಾರ್‌ರವರ ವರ್ಗಾವಣೆ ಷಡ್ಯಂತ್ರ ನಡೆದಿದೆ. ಕಂದಾಯ ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಬಹಳ ಪ್ರಯತ್ನ ಮಾಡಿದ್ದು ಜೊತೆಗೆ  ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತಿರುಗಾಡುವ ಸಾವಿರಾರು ವಾಹನಗಳು ಹಾಗೂ ಜನರನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮವನ್ನು ವ್ಯವಸ್ಥಿತವಾಗಿ ಕೈಗೊಂಡಿದ್ದಾರೆ.  ಸಕಲೇಶಪುರ ತಾಲೂಕನ್ನು  ಕೊರೋನ ಮಹಾಮಾರಿಯಿಂದ ನಿಯಂತ್ರಣದಲ್ಲಿ ಇಡಲು ಎಲ್ಲಾ ವ್ಯವಸ್ಥೆಯನ್ನು ಸಹ ಅತ್ಯಂತ ಯಶಸ್ವಿಯಾಗಿ ನಿರ್ವಾಹಿಸಿದ್ದು ಆದರೂ ಸಹ ರಾಜಕೀಯ ದುರುದ್ದೇಶದಿಂದ ತಹಶೀಲ್ದಾರ್‌ರವರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ.ಯಾವುದೇ ಕಾರಣಕ್ಕೂ ಕೋವಿಡ್ 19 ಸಮಸ್ಯೆ ಮುಗಿಯುವವರೆಗೂ ವರ್ಗಾವಣೆ ಮಾಡಬಾರದೆಂದು ಹೇಳಿದರು.
  ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಕೌಶಿಕ್, ಕಾರ್ತೀಕ್, ರಘು, ಶೇಖರ್, ಮಣಿ ಮುಂತಾದವರು ಹಾಜರಿದ್ದರು

Post a Comment

Previous Post Next Post