ಶಾಲಾ ವಾಹನಗಳ ಅರ್ಹತಾ ಪತ್ರಗಳ ನವೀಕರಣ

ಹಾಸನ:-  ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ಶಾಲಾ ವಾಹನಗಳ (ಖಾಸಗಿ ಮಾಲೀಕತ್ವದಲ್ಲಿ ಇರುವ ವಾಹನಗಳು ಸೇರಿದಂತೆ) ಮಾಲೀಕರುಗಳಿಗೆ ತಿಳಿಯಪಡಿಸುವುದೇನೆಂದರೆ ಜೂ. 18 ರಂದು ಪಿ.ಯು.ಸಿ. ಆಂಗ್ಲ ಭಾಷಾ ಪರೀಕ್ಷೆ ಮತ್ತು ಜೂ.25 ರಿಂದ ಜು.4 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಹಲವಾರು ಶಾಲಾ ವಾಹನಗಳನ್ನು/ ಶೈಕ್ಷಣಿಕ ವಿದ್ಯಾಸಂಸ್ಥೆಗಳ ವಾಹನಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯಕ್ಕಾಗಿ ಬಳಸಬೇಕಾಗುತ್ತದೆ.
 ಕೊರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಿದ್ದ ಕಾರಣ ಶಾಲಾ ವಾಹನಗಳ ಅರ್ಹತಾ ಪತ್ರಗಳನ್ನು ನವೀಕರಣ ಮಾಡಲು ವಿಳಂಬವಾಗಿರುತ್ತದೆ. ವಾಯಿದೆ ಮುಗಿದಿರುವ ವಾಹನಗಳ ಅರ್ಹತಾ ಪತ್ರಗಳನ್ನು ಜೂ.15 ರೊಳಗೆ ಕಡ್ಡಾಯವಾಗಿ ನವೀಕರಿಸಿಕೊಳ್ಳುವಂತೆ ತಿಳಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಶಾಲಾ ವಾಹನಗಳ ಎಲ್ಲಾ ದಾಖಲೆಗಳು ಸಿಂಧುತ್ವದಲ್ಲಿ ಇರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಹ ತಿಳಿಸಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಕಾನೂನು ರೀತ್ಯಾ ಕ್ರಮಗಳಿಗೆ ಶಾಲಾ ವಾಹನ ಮಾಲೀಕರೇ ಜವಾಬ್ದಾರರಾಗುತ್ತಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ಅಶೋಕ್ ಕುಮಾರ್ ತಿಳಿಸಿದ್ದಾರೆ.

Post a Comment

Previous Post Next Post