ಅಕ್ಷರ ಬುಕ್ ಹೌಸ್ : ಎಸ್.ಎಸ್.ಎಲ್.ಸಿ. ಸಾಧಕರಿಗೆ ಅಕ್ಷರ ಪುರಸ್ಕಾರ

ಹಾಸನ: ನಗರದ ಶಂಕರಮಠ ರಸ್ತೆ ಬಳಿ ಇರುವ ಅಕ್ಷರ ಬುಕ್ ಹೌಸ್ ನಲ್ಲಿ ಎರಡನೇ ದಿವಸವು ಕೂಡ ಎಸ್.ಎಸ್.ಎಲ್.ಸಿ. ಸಾಧಕರಿಗೆ ಅಕ್ಷರ ಪುರಸ್ಕಾರ ಸನ್ಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರವರು ನೆರವೇರಿಸಿದರು.
        ಅಕ್ಷರ ಬುಕ್ ಹೌಸ್ ಕಳೆದ 5 ವರ್ಷಗಳಿಂದ ಹಾಸನದ ಓದುಗರಿಗೆ, ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಓದಿನ ಸವಿಯನ್ನು ನೀಡುತ್ತಾ ಬಂದಿದೆ. ಜೊತೆ ಜೊತೆಯಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸಾಧನೆಗೆ ಪ್ರೋತ್ಸಹ ನೀಡುವ ಸಲುವಾಗಿ ಅಕ್ಷರ ಪುರಸ್ಕಾರವನ್ನು ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಹಿಸಲಾಗುತ್ತಿದೆ. ಕೊರೋನಾ ಎಂಬ ಮಹಾಮಾರಿ ಎಲ್ಲೆಡೆ ಆವರಿಸಿರುವುದರಿಂದ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಒಂದು ದಿವಸ ನಡೆಸಲಾಗುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ ಮೂರು ದಿವಸಗಳ ಕಾಲ ಹಮ್ಮಿಕೊಳ್ಳಲಾಗಿದೆ. ಭಾನುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಾನಿಯರ ವಿಶೇಷ ಪುಸ್ತಕವನ್ನು ಉಡುಗರೆಯಾಗಿ ನೀಡಿ ಸನ್ಮಾನಿಸಲಾಯಿತು. ಖಾಸಗಿ ಶಾಲೆಯಲ್ಲಿ ಓದಿದ ಮಕ್ಕಳ ಜೊತೆ ಸರಕಾರಿ ಶಾಲೆಯಲ್ಲೂ ಕೂಡ ಶಿಕ್ಷಣ ಪಡೆದವರು ಹೆಚ್ಚಿನ ಅಂಕ ಪಡೆದಿರುವ ಬಗ್ಗೆ ಚಪ್ಪಾಳೆ ಹೊಡೆದು ಪ್ರೋತ್ಸಹಿಸಿದರು.
       ಇದೆ ವೇಳೆ ಏಷ್ಯಾ ಕಾರ್ಯನಿರತ ಪತ್ರಕರ್ತರ ಸಂಘ ಒಕ್ಕೂಟದ ಸಂಚಾಲಕ ಹೆಚ್.ಬಿ. ಮದನ್ ಗೌಡ, ಸಣ್ಣ ಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷ ಜೆ.ಆರ್. ಕೆಂಚೇಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು, ಅಕ್ಷರ ಬುಕ್ ಹೌಸ್ ಬಳಗದ ಗಂಗಾಧರ್, ಆಸರೆ ಪೌಂಢೇಶನ್ ನ ಗುರುಪ್ರಸಾದ್, ಅಕ್ಷರ ಬುಕ್ ಹೌಸ್ ಮ್ಯಾನೇಜರ್ ಮಂಜುನಾಥ್, ಶ್ರೀನಾಥ್, ಕೀರ್ತಿ ಉಪಸ್ಥಿತರಿದ್ದರು.

Post a Comment

Previous Post Next Post