ಹಾಸನ ಜೂ.೨೨ :- ಹಾಸನ ತಾಲ್ಲೂಕಿನ ಸೀಗೆ ಮತ್ತು ಹಿರೇಕಡಲೂರು ಗ್ರಾಮಗಳಲ್ಲಿ ರೈತರು ಬೆಳೆದಿರುವ ಅಂಗಾಂಶ ಕೃಷಿ ಆಲೂಗಡ್ಡೆ ಬೆಳೆ ತಾಕಿಗೆ ಉಪ ಕುಲಪತಿಗಳ ಭೇಟಿ ಕೃಷಿ ಆಲೂಗಡ್ಡೆ ಬೆಳೆ ಮತ್ತು ನರ್ಸರಿ ತಾಕುಗಳಿಗೆ ಜೂ.೨೧ ರಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಡಾ. ಕೆ.ಎಂ. ಇಂದಿರೇಶ್, ಉಪ ಕುಲಪತಿಗಳು, ಡಾ. ಡಿ. ಆರ್. ಪಾಟೀಲ್, ಸಂಶೋಧನಾ ನಿರ್ದೇಶಕರು ಸಹ ಸಂಶೋಧನಾ ನಿರ್ದೇಶಕರು ಮತ್ತು ಪ್ರಾದೇಶಿಕ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ,. ಮುಖ್ಯಸ್ಥರಾದ ಡಾ. ವಿಷ್ಣುವರ್ಧನ್ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿಕಾವಲಿನ ಡಾ. ಹೆಚ್. ಅಮರನಂಜುAಡೇಶ್ವರ, ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರಾದ ಯೋಗೀಶ್, ಹೆಚ್.ಆರ್, ಕೇಂದ್ರಿಯ ಆಲೂಗಡ್ಡೆ ಸಂಶೋಧನಾ ಸಂಸ್ಥೆಯ ರವೀಂದ್ರ ರೆಡ್ಡಿ, ಹಾಗೂ ಗ್ರೀನ್ ಇನ್ನೋವೇಷನ್ ಸೆಂಟರ್‌ನ ಸುಹಾಸ್, ರವರುಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಇದೇ ವೇಳೆ ರೈತರಾದ ರಘು ಮತ್ತು ಸುನೀಲ್ ರವರು ಹಿಂಗಾರು ಹಂಗಾಮಿನಲ್ಲಿ ಅತ್ಯುತ್ತಮವಾಗಿ ಬೆಳೆದಿರುವ ಕುಫ್ರಿ ಹಿಮಾಲಿನಿ ತಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಬೀಜೋತ್ಪಾದನೆಗೆ ಬಹಳ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.