ಹಾಸನ ಜಿಲ್ಲೆಯಲ್ಲಿ ಇಂದು ಸಹ ಮತ್ತೊಂದು ಕೊವಿದ್ ಸಾವು : ಸಾವಿನ ಸಂಖ್ಯೆ 12ಕ್ಕೆ ಏರಿಕೆ

ಹಾಸನ ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ ಸಾವು .ಹಾಸನ ನಗರದ ಹೊರವಲಯದ 48 ವರ್ಷದ ಮಹಿಳೆ ಕರೋನಾ ಸೋಕಿನಿಂದ ಅಸುನೀಗಿದ್ದಾರೆ.
ರಕ್ತದೊತ್ತಡ, ಮಧುಮೇಹ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಅವರು ಜು 7 ರಂದು ಕೊವಿದ್ ಅಸ್ಪತ್ರೆಗೆ ದಾಖಲಾಗಿದ್ದರು.ಜು 8 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ  ಸತೀಶ್ ತಿಳಿಸಿದ್ದಾರೆ ಇದರೊಂದಿಗೆ ಕೊವಿದ್ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ

Post a Comment

Previous Post Next Post