- ತನಿಖೆ ಮಾಡಿ ಹುಡುಕಿಕೊಡುವಂತೆ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯ
ಹಾಸನ: ಸಕಲೇಶಪುರ ತಾಲೂಕಿನ ಪಂಚಾಯಿತಿ ಸದಸ್ಯನ ಅಪಹರಣವಾಗಿದ್ದು, ಪೊಲೀಸ್ ಇಲಾಖೆಯು ತನಿಖೆ ಮಾಡಿ ಕೊಡಲೇ ಹುಡುಕಿ ಕೊಡುವಂತೆ ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸಕಲೇಶಪುರ ತಾಲ್ಲೂಕು ಪಂಚಾಯಿತಿ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ವೇತಾ ಮತ್ತು ಇತರರು ಸೇರಿ ಜುಲೈ 2 ರಂದು ಐಗೂರು ಕ್ಷೇತ್ರದ ಜೆಡಿಎಸ್ ಸದಸ್ಯರಾದ ಶಿವಪ್ಪ ಎಂಬುವರನ್ನು ಕಿಡ್ನಪ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಜೆಡಿಎಸ್ ಪಕ್ಷದ 4 ಜನ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ 4 ಜನ ಸದಸ್ಯರು ಸೇರಿ ಅವಿಶ್ವಾಸ ನಿರ್ಣಯ ಮಾಡಲು ನಿರ್ಧರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಜುಲೈ 10ಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲು ದಿನಾಂಕ ನಿಗಧಿ ಮಾಡಲಾಗಿದ್ದು, ಕೂಡಲೇ ಅಪಹರಣವಾಗಿರುವ ಶಿವಪ್ಪನನ್ನು ಹುಡುಕಿಕೊಡುವಂತೆ ಮನವಿ ಮಾಡಿದರು. ತಾಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯ ಸ್ಥಾನವಿದ್ದು, 4 ಜೆಡಿಎಸ್, 5 ಕಾಂಗ್ರೆಸ್ ಹಾಗೂ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದೆ. ಬಿಜೆಪಿಯ ಶ್ವೇತಾ ಅವರನ್ನು ಎರಡುವರೆ ವರ್ಷದವರೆಗೆ ಮಾತ್ರ ಒಡಂಬಡಿಕೆಯ ಆಧಾರದಲ್ಲಿ ಅಧ್ಯಕ್ಷೆಯನ್ನಾಗಿ ಮಾಡಲಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಗೆ 8 ಜನ ಸದಸ್ಯರ ಬಹುಮತ ಬೇಕಾಗಿದೆ. ಹಾಗಾಗಿ ಕಾಂಗ್ರೆ ಅಪಹರಣ ಮಾಡಿರುವುದಾಗಿ ಆರೋಪಿಸಿದರು. ಈ ಬಗ್ಗೆ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಹಾಗೂ ಅವರ ಪತಿ ಪ್ರಸನ್ನ, ಸಹಚರರಾದ ರವಿ, ಆಕಾಶ್ ಮತ್ತು ವಿಜಯ್ ವಿರುದ್ಧ ದೂರು ಕೊಡಲಾಗಿದೆ. ಆದರೇ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷೆಯನ್ನು ಅಪಹರಣ ಮಾಡಿದ್ದೇವೆ ಎಂದು ಬಿಜೆಪಿಯವರು ಅವರ ವಿರುದ್ಧ ದೂರು ನೀಡಿದ್ದಾರೆ. ಈ ದೂರನ್ನು ಸೂಕ್ತ ರೀತಿಯನ್ನು ಪರಿಶೀಲಿಸಿ ವಜಾ ಮಾಡಬೇಕೆಂದು ಆಗ್ರಹಿಸಿದರು.
ಸಕಲೇಶಪುರ ತಾಲೂಕು ಕಡೆಗಳಲ್ಲಿ ಸುಮಾರು 3 ಲಕ್ಷಜನ ನಾನಾ ತೋಟಗಳಲ್ಲಿ ಕೆಲಸ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಹಾಸನ ಜಿಲ್ಲೆಗೆ ಬಂದಿರುವುದರಿಂದ ಇಲ್ಲಿಗೆ ಒಂದು ಕಾರ್ಮಿಕ ಕಲ್ಯಾಣ ಭವನ ಮಂಜೂರು ಮಾಡಬೇಕು ಎಂದು ಈಗಾಗಲೇ ಮನವಿ ಮಾಡಿದ್ದು, ನಮ್ಮ ಮಾತಿಗೆ ಒಪ್ಪಿಗೆ ನೀಡಿರುವ ಸಚಿವರು ಭರವಸೆ ನೀಡಿರುವುದಾಗಿ ಹೇಳಿದರು. ಜೊತೆಗೆ ಗುತ್ತಿಗೆ ಕಾರ್ಮಿಕರನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಶಾಶ್ವತ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಕೊರೋನಾ ವೈರಸ್ ದಿನೆ ದಿನೆ ಹೆಚ್ಚಾಗಿ ಪಾಸಿಟಿವ್ ಪ್ರಕರಣದ ಜೊತೆಗೆ ಸಾವುಗಳ ಸಂಖ್ಯೆಯು ಗಣನಿಯವಾಗಿ ಏರಿಕೆಯಾಗಿದೆ. ಆದರೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರಲಾಗಿರುವ ನಿಯಮಗಳನ್ನು ಸಚಿವರು ಮತ್ತು ಶಾಸಕರು ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ. ಕೂಡಲೇ ತುರ್ತು ಸಭೆ ಕರೆದು ಎಲ್ಲಾರ ಸಲಹೆ ಪಡೆದು ಸರಿಯಾದ ನಿರ್ಧಾರಕೈಗೊಳ್ಳಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಲ್ಲಿ ಸಕಲೇಶಪುರ ಜಿಲ್ಲಾ ಪಂಚಾಯಿತಿ ಸದಸ್ಯೆ ಉಜ್ಮಾ ರಿಜ್ವಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚೈತ್ರಾ, ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಸದಸ್ಯ ಶಿವಪ್ಪ ಅವರ ಪತ್ನಿ ನೀಲಾ ಇತರರು ಉಪಸ್ಥಿತರಿದ್ದರು.
Tags
ಸಕಲೇಶಪುರ