ಹಾಸನದಲ್ಲಿಂದು 31 ಜನರಿಗೆ ಕರೋನ ಪಾಸಿಟಿವ್ ಜೊತೆಯಲ್ಲಿ 2 ಸಾವು

ಹಾಸನ ಜಿಲ್ಲೆಯಲ್ಲಿ  ಇಂದು ಹೊಸದಾಗಿ 31 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 771 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ.

ಇದುವರೆಗೆ 515 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 232 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 24 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಹೊಸದಾಗಿ ಇಂದು ಪತ್ತೆಯಾದ 31 ಪ್ರಕರಣಗಳಲ್ಲಿ 16 ಜನ ಹಾಸನ ತಾಲ್ಲೂಕಿಗೆ ಸೇರಿದವರಾಗಿದ್ದಾರೆ, 2 ಅರಸೀಕೆರೆ ತಾಲ್ಲೂಕಿಗೆ ಸೇರಿದವರು, ಒಬ್ಬರು ಆಲೂರು ಮತ್ತು ಬೇಲೂರು ತಾಲೋಕಿಗೆ ಸೇರಿದವರು ಹಾಗೂ ಚನ್ನರಾಯಪಟ್ಟಣ 3 ಜನ ಸಕಲೇಶಪುರ ತಾಲ್ಲೂಕಿಗೆ 6 ಸೇರಿದವರಾಗಿದ್ದಾರೆ. ಅಲ್ಲದೆ ಇಬ್ಬರು ಹೊರಗಿನರಾಗಿದ್ದಾರೆ ಕೋವಿಡ್-19 ಉಲ್ಬಣವಾಗುತ್ತಿರುವ ಹನ್ನಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕರೋನಾ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಡಾ|| ಸತೀಶ್ ಹೇಳಿದರು. 

Post a Comment

Previous Post Next Post