ಹಾಸನ: ಇಡೀ ವಿಶ್ವವೇ ಕೊರೋನಾ ವೈರಸ್‌ಗೆ ನಲುಗಿ ಹೋಗಿದ್ದು, ಜನ ಮನೆಯಿಂದ ಹೊರ ಬರಲು ಅಂಜುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಈ ನಡುವೆಯೂ ಆಶಾ ಕಾರ್ಯಕರ್ತೆಯರು, ಹಗಲು ಇರುಳೆನ್ನದೇ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಹಾಸನದ ಶ್ರೀ ಗಾಯಿತ್ರಿಪತ್ತಿನ ಸಹಕಾರ ಸಂಘದ ವತಿಯಿಂದ ೦೫ ಮಂದಿ ಆಶಾ ಕಾರ್ಯಕರ್ತೆಯರಿಗೆ ಸಹಯಧಾನ ನೀಡಲಾಯಿತು.
ನಗರದ ಗಾಯಿತ್ರಿ ಪತ್ತಿನ ಸಹಾಕರಿ ಸಂಘದ ಕಛೇರಿಯಲ್ಲಿ ಕೊರೋನಾ ವಾರಿಯರ್ಸ್‌ಗಳಾಗಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವಿಸಿ ೦೫ ಮಂದಿಗೆ ತಲಾ ೦೩ ಸಾವಿರ ರೂಗಳ ಚೆಕ್ ನೀಡಿ, ಆತ್ಮಸೈರ್ಯ ತುಂಬಲಾಯ್ತು. ಈ ವೇಳೆ ಮಾತನಾಡಿದ ಸಂಘದ ನಿರ್ದೇಶಕಿ ರಾಧಾ ಜಗದೀಶ್, ಗಾಯಿತ್ರಿ ಪತ್ತಿನ ಸಹಕಾರ ಸಂಘ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನ ಮಾಡಿಕೊಂಡು ಬಂದಿದ್ದು, ಕೋವಿಡ್ ೧೯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಹಾಯಧನ ನೀಡಿದ್ದು, ಕೊರೋನಾ ನಡುವೆ ಆಶಾ ಕಾರ್ಯಕರ್ತೆರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದ್ರು.
ಈ ವೇಳೆ ಆಶಾ ಕಾರ್ಯಕರ್ತೆಯರು ಮಾತನಾಡಿ, ಪ್ರತಿನಿತ್ಯ ಕೆಲಸಕ್ಕೆ ಹೊದಾಗ ಒಂದಲ್ಲೊಂದು ಸಮಸ್ಯೆ ಎದುರಾಗುತ್ತೆ, ನಮ್ಮನ್ನು ಗುರುತಿಸಿ ಗಾಯಿತ್ರಿ ಪತ್ತಿನ ಸಹಕಾರ ಸಂಘದಿಂದ ಸಹಾಯಧನ ಮಾಡಿದ್ದು, ನಮ್ಮಂತೆ ದುಡಿಯುತ್ತಿರುವ ನಮ್ಮ ಸಹದ್ಯೋಗಿಗಳಿಗೆ ಸಂಘ ಸಂಸ್ಥೆಗಳು ಸಹಾಯಕ್ಕೆ ಮುಂದೆ ಬರಬೇಕೆಂದು ಮನವಿ ಮಾಡಿದ್ರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಪಿ.ಎಸ್.ಪ್ರಮೋದ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ನಾಗರಾಜ್, ನಿರ್ದೇಶಕರುಗಳಾದ ನಿಟ್ಟೂರು ಜಯರಾಂ, ರಘುನಂದನ್, ಸಿಇಒ ನಾಗರತ್ನೆ ಸೇರಿದಂತೆ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

Tags
ಹಾಸನ