ರಾಜ್ಯ ಸರ್ಕಾರದ 6 ಸಾವಿರ ನೇಮಕಾತಿ ರದ್ದು

ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ ನೀಡಿದ್ದು, ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಪೊಲೀಸ್ ಇಲಾಖೆಯಿಂದ ಈ ವರ್ಷ ನಡೆಯಬೇಕಿದ್ದ 6 ಸಾವಿರ ನೇಮಕಾತಿಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ 6 ಸಾವಿರ ಪುರುಷ ಹಾಗೂ ಮಹಿಳಾ ಕಾನ್ಸ್ ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಸಿದ್ಧತೆ ನಡೆದಿತ್ತು. ನೇಮಕಾತಿ ಕುರಿತಂತೆ ಪೊಲೀಸ್ ಇಲಾಖೆ ನೋಟಿಫಿಕೇಷನ್ ಸಹ ಹೊರಡಿಸಿತ್ತು. ಹೀಗಾಗಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ನೇಮಕಾತಿ ಆದೇಶವನ್ನು ರದ್ದುಗೊಳಿಸಿದೆ.

ಇನ್ನು ಕೊರೊನಾದಿಂದಾಗಿ ರಾಜ್ಯ ಆರ್ಥಿಕ ಸ್ಥಿತಿ ಸರಿದಾರಿಗೆ ತರಲು ಸರ್ಕಾರ ಸಂಪನ್ಮೂಲ ಕ್ರೂಢಿಕರಿಸಲು ಮುಂದಾಗಿದ್ದು, 6 ಸಾವಿರ ಪೊಲೀಸ್ ಹುದ್ದೆಗಳ ಜೊತೆ ಬ್ಯಾಗ್ ಲಾಗ್ ಹುದ್ದೆಗಳನ್ನೂ ಭರ್ತಿ ಮಾಡಿಕೊಳ್ಳದಂತೆ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ

Post a Comment

Previous Post Next Post