ಕೊಣನೂರು: ಗ್ರಾಮೀಣ ಭಾಗದಲ್ಲಿನ ಜನರು ಕೋವಿಡ್–19ರ ಸೋಂಕು ಪರೀಕ್ಷೆಗಾಗಿ ನಗರಕ್ಕೆ ಬರುವುದು ಕಷ್ಟವಾಗುತ್ತದೆ, ಹಳ್ಳಿಯ ಜನರಿಗೂ ಈ ಪರೀಕ್ಷೆಯ ಉಪಯೋಗವಾಗಬೇಕು ಎನ್ನುವ ಚಿಂತನೆಯಡಿಯಲ್ಲಿ ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹಕ್ಕೆ ಯೋಜನೆ ರೂಪಿಸಿದೆ ಎಂದು ಆರೋಗ್ಯ ನಿರೀಕ್ಷಕರಾದ ಆನಂದ್‍ಗೌಡ ತಿಳಿಸಿದರು.
ಪಟ್ಟಣದ ಕೊಳಲು ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಬಳಿ ಇರುವ ಮಾರುಕಟ್ಟೆಯ ಆಸು ಪಾಸು ಕೋವಿಡ್ ಸೋಂಕಿತ ವ್ಯಕ್ತಿಗಳು ಸಂಚರಿಸಿರುವ ಹಿನ್ನೆಲೆಯಲ್ಲಿ ಸಂಚಾರಿ ವಾಹನದ ಮೂಲಕ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳು ಮಾಡಲಾಗಿದೆ. ಇದರ ಜೊತೆಗೆ ಕೊರೊನಾ ಜಾಗೃತಿ ಸಾರುವ ಕೆಲಸ ನಡೆಯುತ್ತಿದೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಅಥವ ಕೋವಿಡ್-19ನ ಶಂಕೆ ಕಂಡುಬಂದರೆ ಸಾರ್ವಜನಿಕರು ಸಂಚಾರಿ ಘಟಕದಲ್ಲಿ ಮಾದರಿ ನೀಡಿ ಫಲಿತಾಂಶ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೋವಿಡ್ 19 ಟೆಸ್ಟ್ ಮಾಡಿಸಿಕೊಂಡು ಮಾತನಾಡಿದ ಕೊಣನೂರು ಪೆÇೀಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಎಸ್ ಎಲ್ ಸಾಗರ್‍ರವರು, ದಯವಿಟ್ಟು ಸಾರ್ವಜನಿಕರು ಕೊರೋನಾ ವೈರಸ್ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ತೋರದೆ. ಸೋಂಕಿತರ ಸಂಪರ್ಕ ಹೊಂದಿದ್ದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ಪಟ್ಟಣದಲ್ಲಿ ಇದುವರೆಗೆ ಯಾವುದೇ ಕೊರೋನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲೇ ಆಗಲಿ ಅಥವಾ ಇನ್ನಿತರ ರೀತಿಯಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಪೆÇೀಲಿಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕೋವಿಡ್ ಟೆಸ್ಟ್ ನಲ್ಲಿ ಭಾಗವಹಿಸಿದರು.
Tags
ಅರಕಲಗೂಡು