ಅಧಿಕಾರಿಗಳಿಂದ ಅವಧಿ ಮೀರಿದ ಮಧ್ಯ ನಾಶ

 ಹಾಸನ ಹೊಳೇನರಸೀಪುರ ರಸ್ತೆಯಲ್ಲಿರುವ ಕೆ.ಎಸ್.ಬಿ.ಸಿ.ಎಲ್. ಮದ್ಯ ಮಳಿಗೆ-2 ರಲ್ಲಿ ಅವಧಿ ಮೀರಿದ 111 ರಟ್ಟಿನ ಪೆಟ್ಟಿಗೆ ಹಾಗೂ 07 ಬಾಟೇಲ್‍ನಲ್ಲಿರುವ ಒಟ್ಟು 977.030 ಲೀಟರ್ಸ್ ಬಿಯರ್ ದಾಸ್ತಾನುಗಳನ್ನು ಜು. 28 ರಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ರಘು ಎಂ ಹೆಚ್. ಅಬಕಾರಿ ಉಪ ಅಧೀಕ್ಷಕರು ಹಾಸನ ಉಪ ವಿಭಾಗ ಇವರ ನೇರ ಉಸ್ತುವಾರಿಯಲ್ಲಿ ಹಾಗೂ ಎ. ಟಿ. ಚಂದನ, ಅಬಕಾರಿ ನಿರೀಕ್ಷಕರು, ಮದ್ಯ ಮಳಿಗೆ-2 ಹಾಸನ ಮತ್ತು ಲೋಕೇಶಪ್ಪ ವ್ಯವಸ್ಥಾಪಕರು ಮದ್ಯ ಮಳಿಗೆ-2 ಹಾಸನ ಹಾಗೂ ಸುದ್ದಿ ಮಾಧ್ಯಮ ಮತ್ತು ಪಂಚರುಗಳ ಸಮಕ್ಷಮ ನಾಶಪಡಿಸಲಾಗಿದೆ ಎಂದು ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.

Post a Comment

Previous Post Next Post