ಪ್ರಕೃತಿ ವಿಕೋಪದ ನಡುವೆಯೂ ಸಿಎಂ ಒಳ್ಳೆಯ ಕೆಲಸ ಮಾಡಿದ್ರು - ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ ದೊಡ್ಡ ರೀತಿಯ ನೆರೆ ಬಂತು ಪ್ರಕೃತಿ ವಿಕೋಪದ ನಡುವೆಯೂ ಸಿಎಂ ಒಳ್ಳೆಯ ಕೆಲಸ ಮಾಡಿದ್ರು ಕೋವಿಡ್ ನಿರ್ವಹಣೆ ಯಲ್ಲೂ ಸಿಎಂ ಮತ್ತು ಅವರ ಮಂತ್ರಿ ಮಂಡಲ ಒಳ್ಳೆ ಕೆಲಸ ಮಾಡಿದೆ. ರಾಜ್ಯ ಸರ್ಕಾರದ ಕಾರ್ಯ ನಿರ್ವಹಣೆಗೆ ಫುಲ್ ಮಾರ್ಕ್ ಕೊಟ್ಟ ಬಿಜೆಪಿ ರಾಜ್ಯಾದ್ಯಕ್ಷ
ರೈತರಿಗೆ ಯೋಜನೆ, ನೇಕಾರರ ಸಾಲ ಮನ್ನ, ಬಡವರಿಗೆ ಸಹಾಯ ಮಾಡಿದ್ದಾರೆ ಕೋವಿಡ್ ಉಪಕರಣ ಖರೀದಿಯಲ್ಲಿ ಎರಡು ಸಾವಿರ ಕೋಟಿ ಅವ್ಯವಹಾರ ಆರೋಪ ವಿಚಾರ ಕಾಂಗ್ರೆಸ್ ನಾಯಕರ ವಿರುದ್ದ ನಳೀನ್‌ಕುಮಾರ್ ತೀವ್ರ ವಾಗ್ದಾಳಿ
ಕಾಂಗ್ರೆಸ್ ಪುರಾತನ ಪರಂಪರೆಯ ಪಾರ್ಟಿ ಅದರ ರಾಜ್ಯಾಧ್ಯಕ್ಷರು, ಹಾಗೂ ಮಾಜಿ ಸಿಎಂ ಅಂಕಿ ಸಂಖ್ಯೆ ಇಟ್ಟುಕೊಂಡು ಮಾತಾಡಬೇಕು. ಜನರನ್ನು ದಾರಿತಪ್ಪಿಸೋ ಕೆಲಸ ಈಗ ಮಾಡಬಾರದು ನಮ್ಮ ಸಿಎಂ ಸಚಿವ ಸಂಪುಟದ ಸಚಿವರು ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ ಕಾಂಗ್ರೆಸ್ ಗೆ ಟೀಕೆ ಮಾಡಲು ವಿಚಾರಗಳೇ ಇಲ್ಲ. ಈ ಸಂದರ್ಭದಲ್ಲಿ ರಾಜಕೀಯ ವೈಷಮ್ಯ ಮರೆತು ಜನರಲ್ಲಿ ಆತ್ಮ ವಿಶ್ವಾಸ ತುಂಬಬೇಕಿತ್ತು ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಬೇಕಿತ್ತು. ಏನಾದ್ರು ಚರ್ಚೆಗಳಿದ್ರೆ ಬನ್ನಿ ವಿಧಾನ ಸಭೆಯಲ್ಲಿ ಚರ್ಚೆ ಮಾಡಿ ಎಲ್ಲಾ ಮಾಹಿತಿ ಕೊಟ್ಟಮೇಲೂ ಆರೋಪ ಮಾಡ್ತಾರೆ ಅಂದ್ರೆ ಇದು ಚಿಲ್ಲರೆ ರಾಜಕಾರಣ ಭ್ರಷ್ಟಾಚಾರ ಆಗಿದೆ ಎಂದು ಹೇಳುತ್ತಿರೋದು ಯಾವ ಪಕ್ಷ. ಭ್ರಷ್ಟಾಚಾರ ಆರೋಪದಲ್ಲಿ ಅವರ ರಾಷ್ಟ್ರೀಯ ಅಧ್ಯಕ್ಷರು,ಮಾಜಿ ಅಧ್ಯಕ್ಷರೂ ಬೇಲ್ ನಲ್ಲಿ ಇದಾರೆ ರಾಜ್ಯದ ಅಧ್ಯಕ್ಷರೂ ಬೇಲ್ ನಲ್ಲಿ ಇದಾರೆ,ತನಿಖೆ ಬೇಡ ಎಂದು ಅರ್ಜಿ ಹಾಕಿದ್ದಾರೆ ಅವರು ಏಕೆ ಅರ್ಜಿ ಹಾಕಿದ್ದಾರೆ? ಇವರು ಸರಿ ಇದ್ರೆ ಧೈರ್ಯದಿಂದ ಕಾನೂನು ಎದುರಿಸಿ
ಒಂದು ಬ್ರಹ್ಮಾಂಡ ಭ್ರಷ್ಟಾಚಾರದ ಪಾರ್ಟಿ ಕಾಂಗ್ರೆಸ್ ಭ್ರಷ್ಟಾಚಾರ ಕ್ಕೆ ಮುನ್ನುಡಿ ಹಾಕಿದ್ದೇ ಕಾಂಗ್ರೆಸ್
ಕಾಂಗ್ರೆಸ್ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ವಾಗ್ದಾಳಿ ಇಂದಿರಾ ಕ್ಯಾಂಟೀನ್ ನಲ್ಲಿ ಏನಾಗಿದೆ ಬಹಿರಂಗ ಪಡಿಸಿ
ನಿಮ್ಮ ಅವಧಿಯಲ್ಲಿ ಖರೀದಿಸಿದ ವೆಂಟಿಲೇಟರ್ ಎಲ್ಲಿ ಹೋದವು ತೋರಿಸಿ ಚಿಲ್ಲರೆ ರಾಜಕಾರಣ ಬಿಟ್ಟು ರಾಜ್ಯದ ಜನರ ಸಹಾಯಕ್ಕೆ ಬನ್ನಿ ಎಂದು ಕಿಡಿ
ನಿಗಮ ಮಂಡಳಿ ಸ್ಥಾನ ಬೇಡ ಅಂತಾ ಯಾವ ಶಾಸಕರೂ ರಿಜೆಕ್ಟ್ ಮಾಡಿಲ್ಲ. ಆದ್ರೆ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ
ಪಕ್ಷದಲ್ಲಿ ಯಾವುದೇ ಅಸಮಧಾನ ಇಲ್ಲ
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ
ನಮ್ಮ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ
ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಅವಕಾಶಗಳೇ ಇಲ್ಲ. ಇದು ಕೇವಲ ಮಾಧ್ಯಮಗಳ ಚರ್ಚೆ ಎಂದ ಬಿಜೆಪಿ ರಾಜ್ಯಾದ್ಯಕ್ಷ ಎಲ್ಲಿ ಹೇಳಿದ್ದಾರೆ, ಯಾರು ಹೇಳಿದ್ದಾರೆ, ಯಾರು ಹೇಳಿದ್ದಾರೆ ತೋರಿಸಿ
ಯಾರು ಸಿಎಂ ಆಗಬೇಕೆಂದು ಬರೆದುಕೊಟ್ಟಿದ್ದಾರೆ
ಶಾಸಕರು ಹೇಳಿದ್ದಾರಾ, ಯಾರಾದರು ಮಂತ್ರಿ ಹೇಳಿದ್ದಾರಾ?ರಾಜ್ಯಾಧ್ಯಕ್ಷನಾಗಿ ನಾನು ಹೇಳಿದ್ದೇನಾ?
ಇದು ಕಪೋಲ ಕಲ್ಪಿತ ಒಂದು ವಿಚಾರ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲವೇ ಇಲ್ಲ
ಇನ್ನೂ ಮೂರು ವರ್ಷ ರಾಜ್ಯದ ಸಿಎಂ ಯಡಿಯೂರಪ್ಪ ನವರೇ
ಈ ಅವಧಿಯನ್ನ ಬಿಜೆಪಿ ಪೂರೈಸುತ್ತೆ, ಸಿಎಂ ಬದಲಾವಣೆ ಯೂ ಇಲ್ಲ
ಯಾವುದೇ ಪಾರ್ಟಿಗೂ ಸಿಎಂ ಬದಲಾವಣೆ ಮಾಡೋ ಶಕ್ತಿ ಯೂ ಇಲ್ಲ
ಸಿದ್ದರಾಮಯ್ಯ, ಡಿಕೆಶಿ ಹೇಳಿದ್ರೆ ನಾವು ಸಿಎಂ ಚೇಂಚ್ ಮಾಡ್ತೀವಾ ಎಂದು ವ್ಯಂಗ್ಯ
ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲಾ ಎಂದ ನಳೀನ್ ಕುಮಾರ್ ಕಟೀಲ್
Tags
ಚನ್ನರಾಯಪಟ್ಟಣ