ಕೊಣನೂರು : ಸಕಲೇಶಪುರ ಉಪವಿಭಾಗಾಧಿಕಾರಿಗಳಾದ ಗಿರೀಶ್ ನಂದನ್ ರವರ ಅಧ್ಯಕ್ಷತೆಯಲ್ಲಿ ರಾಮನಾಥಪುರದ ಶ್ರೀರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾವೇರಿ ನದಿ ಪ್ರವಾಹಕ್ಕೆ ಸಂಬಂದಿಸಿದಂತೆ ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕಾರ್ಯವೈಕರಿ ಬಗ್ಗೆ ಪೂರ್ವಾಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿಗಳಾದ ಗಿರೀಶ್ ನಂದನ್ ಮಾತನಾಡಿ ಪ್ರತಿಯೊಂದು ಇಲಾಖೆಗಳು ತಮಗೆ ವಹಿಸಿದ ಕೆಲಸಗಳನ್ನು ಚಾಚು ತಪ್ಪದೇ ನಿರ್ವಹಿಸಬೇಕು ಕಂದಾಯ ಇಲಾಖೆ ಹಾಗೂ ಗ್ರಾಮಪಂಚಾಯಿತಿಯೊಡನೆ ಸಧಾ ಜೊತೆಗೂಡಿ ಕಾರ್ಯನಿರ್ವಹಿಸಬೇಕು. ಸಾಂತ್ವಾನ ಕೇಂದ್ರದಲ್ಲಿ ಕೋವಿಡ್.ನಾನ್ ಕೋವಿಡ್ ಕೊಟಡಿಗಳನ್ನು ಪ್ರತ್ಯೇಕವಾಗಿ ತೆರೆಯಬೇಕೆಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ರವರಿಗೆ ಸೂಚಿಸಿದರು.
ವೈದ್ಯರಿಗೆ ಪ್ರತ್ಯೇಕ ಕೋವಿಡ್ ನಾನ್ ಕೋವಿಡ್ ಸೆಂಟರ್ ಗಳನ್ನು ತೆರೆಯುವಂತೆ ತಿಳಿಸಿದರು. ಹಾಗೂ ಅರಣ್ಯ ಇಲಾಖೆಗೆ ಸಂಬಂದಪಟ್ಟಂತೆ ಮುಂಜಾಗ್ರತೆಯಾಗಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವುಗೂಳಿಸುವಂತೆ ಸೂಚಿಸಿದರು. ವಿದ್ಯುತ್ ಸಮಸ್ಯೆ ಉಂಟಾಗದಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಹಾರಂಗಿ ಜಲಾಶಯ ಎ.ಇ.ಇ.ರವರಿಗೆ ಜಲಾಶಯದಿಂದ ಬಿಡುಗಡೆಯಾಗುವ ನೀರಿನ ಹೊರಹರಿವಿನ ಬಗ್ಗೆ ಮುಂಜಾಗ್ರತೆಯಾಗಿ ತಿಳಿಸಬೇಕೆಂದು ತಿಳಿಸಿದರು. ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳು ಹಾಗೂ ರಾಜಸ್ವನಿರೀಕ್ಷಕರು ಸ್ಥಳೀಯ ಜನರಿಗೆ ಮುಂಜಾಗ್ರತೆಯಾಗಿ ಪ್ರವಾಹ ಬರುವ ಬಗ್ಗೆ ವಿಚಾರ ತಿಳಿಸಿ ಅಲ್ಲಿಂದ ತೆರವುಗೂಳಿಸಲು ಸೂಚಿಸಿದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ ಉಪವಿಭಾಗಾಧಿಕಾರಿಗಳು ಸೂಚಿಸಿರುವಂತೆ ಎಲ್ಲಾ ಇಲಾಖೆಯವರು ಕೈಜೋಡಿಸಿ ಉತ್ತಮವಾಗಿ ಯಾವುದೇ ಲೋಪ ಉಂಟಾಗದಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳಾದ ರವಿಕುಮಾರ್, ಆರಕ್ಷಕ ವೃತ್ತ ನಿರೀಕ್ಷಕರಾದ ದೀಪಕ್, ಸಮಾಜ ಕಲ್ಯಾಣ ಅಧಿಕಾರಿಗಳಾದ ಭಾಗೀರಥಿ, ಹಾರಂಗಿನಾಲಾ ಎ.ಇ.ಇ.ಜಯರಾಂ, ಕೃಷಿ ಅಧಿಕಾರಿಗಳಾದ ರಮೇಶ್ ಕುಮಾರ್, ತೋಟಗಾರಿಕೆ ಅಧಿಕಾರಿಗಳಾದ ರಾಜೇಶ್, ಡಾ.ಅಭಿಶೇಕ್, ಅಗ್ನಿಶಾಮಕದಳ ಅಧಿಕಾರಿಗಳಾದ ಕೇಶವೇಗೌಡ, ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳಾದ ವಿಜಯಕುಮಾರ್, ಪರಮೇಶ್, ಕುಮಾರಸ್ವಾಮಿ, ಮಂಜುನಾಥ್, ಸುನೀಲ್ ಕುಮಾರ್, ರಾಜಸ್ವನಿರೀಕ್ಷಕರಾದ.ಸಿ.ಸ್ವಾಮಿ, ಕಿರಣ್‍ಕುಮಾರ್, ಶಿವಕುಮಾರ್, ವಿವಿಧ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು
Tags
ಅರಕಲಗೂಡು