ಬಕ್ರೀದ್ ಹಿನ್ನಲೆಯಲ್ಲಿ ಪ್ರಾಣಿಗಳ ಸಾಗಾಟ ಶ್ರವಣಬೆಳಗೊಳದ ಆರಕ್ಷಕ ಠಾಣೆಗೆ ದೂರು ಶ್ರವಣಬೆಳಗೊಳ ಕರ್ನಾಟಕ ಪ್ರಾಣಿ ಬಲಿ ನಿಷೇದ ಕಾಯ್ದೆ 1959 (ತಿದ್ದುಪಡಿ 1975)ನ್ನು ಜಿಲ್ಲೆಯಲ್ಲಿ ಕಟ್ಟು ನಿಟ್ಟಾಗಿ ಪಾಲಿಸಬೇಕು ಅಗ್ರಯಿಸಿ ಭಾರತೀಯ ಯುವ ಪಡೆ ರಾಜ್ಯ ಅಧ್ಯಕ್ಷರ ಸಲಹೆ ಅಂತೆ ಭಾರತೀಯ ಹಾಸನ ಜಿಲ್ಲಾಧ್ಯಕ್ಷರು ಪುನೀತ್ ಮತ್ತು ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರಾದ ಅಭಿಜಿತ್ ಹಾಗೂ ದಿಲೀಪ್. ಚೇತನ್. ಮತ್ತು ಪೂಜಾ ಕೆಲವು ಕಾರ್ಯಕರ್ತರ ಹೊಂದಿಗೆ ಆರಕ್ಷಕ ಠಾಣೆಗೆ ಮನವಿ ಸಲ್ಲಿಸಲಾಯಿತು.
ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ಕೊಡುವ ಮೊದಲು ಸಾರ್ವಜನಿಕ ಸ್ಥಳ. ರಸ್ತೆ. ಖಾಲಿ ಮೈದಾನ. ಮನೆ ಅಂಗಳ. ನದಿ ತಟ. ಮುಂತಾದ ಸ್ಥಳಗಳಲ್ಲಿ ಪ್ರಾಣಿ ಬಲಿ ಇರಿಸಿಕೊಳ್ಳುವುದು ಕಾನೂನು ಬಾಹಿರ. ಕೋವಿಡ್ 19 ಲಾಕ್ ಡೌನ್ ನಿಯಮ ಉಲ್ಲಘಿಸುವ ಸಾಧ್ಯತೆ ತಳ್ಳಿಹಾಕುವಂತೆ ಇಲ್ಲ ಹೀಗಾಗಿ ಇಂತಹ ಪ್ರಕರಣಗಳು ಕಂಡರೆ ಸರಕಾರ ಅಥವಾ ಜಿಲ್ಲಾಡಳಿತ ಪ್ರಾಣಿ ಮುಟ್ಟುಗೋಲು ಹಾಕಿ ತಪ್ತಿಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಭಾರತೀಯ ಯುವ ಪಡೆ ಮನವಿ ಸಲ್ಲಿಸಿದೆ... ಕೇಂದ್ರೀಯ ಮೋಟಾರು ವಾಹನ ನಿಯಮದಡಿ ಸಾರಿಗೆ ಪ್ರಾಧಿಕಾರದಿಂದ ವಿಶೇಷ ಅನುಮತಿ ಪಡೆದ ವಾಹನಗಳಲ್ಲಿ ಮಾತ್ರ ಪ್ರಾಣಿಗಳನ್ನು ಸಾಗಿಸಲು ಅವಕಾಶ ಇದೆ ಮಸ್ಯಾಂತದಲ್ಲಿ ಬಕ್ರೀದ್ ಇರುವ ಹಿನ್ನೆಲೆಯಲ್ಲಿ ಮುಂದಿನ ವಾರದಲ್ಲಿ ಬಹಳಷ್ಟು ಪ್ರಾಣಿಗಳನ್ನು ಅಕ್ರಮ ಸಾಗಾಣಿಕೆ ಆಗುವ ಸಾಧ್ಯತೆ ಇದೆ ಹೀಗಾಗಿ ಅದನ್ನು ತಡೆಗಟ್ಟಲು ಆರಕ್ಷಕ ಠಾಣೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿಮಾಡಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
Tags
ಚನ್ನರಾಯಪಟ್ಟಣ