ಇಪಿಎಫ್ ಗೆ ಆದಾರ್ ಕಾರ್ಡ್ ಲಿಂಕ್ ಕಡ್ಡಾಯ

ಹಾಸನ ಜೂ.೦೨ :-  ಸಾಮಾಜಿಕ ಭದ್ರತೆ ಸಂಹಿತೆ ೨೦೨೦ರ ಗೆಜೆಟ್ ಅಧಿಸೂಚನೆ ನಿಬಂಧನೆಗಳಿಗೆ ಅನುಗುಣವಾಗಿ ಜೂ.೦೧ ರಿಂದ ಆಧಾರ್ ಲಿಂಕ್ ಮಾಡಿದ ಮತ್ತು ಪರಿಶೀಲಿಸಲಾದ ಸದಸ್ಯರ ಮಾಸಿಕ ಇಸಿಆರ್ ಮಾತ್ರ ಸಲ್ಲಿಸಲು ಅನುಮತಿಸಲಾವುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ. 

ಈ ನಿಟ್ಟಿನಲ್ಲಿ ಸದಸ್ಯರಿಗೆ ಇಪಿಎಫ್‌ ನ ನಿರಂತರ ಸೇವೆಗಳನ್ನು ಪಡೆಯಲು ಮತ್ತು ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಇಪಿಎಫ್‌ಒ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳು ಎಲ್ಲಾ ವಂತಿಗೆ ನೀಡುವ ಸದಸ್ಯರಿಗೆ ಸಂಬAಧಿಸಿದAತೆ ಆಧಾರ್ ಲಿಂಕ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

 ನೌಕರರು ಮೆಂಬರ್ ಪೋರ್ಟಲ್ (unified member portal  ) ಮತ್ತು ಉಮಂಗ್ ಅಪ್ಲಿಕೇಶನ್ ನಲ್ಲಿ ಲಭ್ಯವಿರುವ ಆನ್ ಲೈನ್ ಇ -ಕೆವೈಸಿ ಸೌಲಭ್ಯದ ಮೂಲಕ ತಮ್ಮ ಆಧಾರ್‌ನ್ನು ನೇರವಾಗಿ ಯು.ಎ.ಎನ್ ನ್ನೊಂದಿಗೆ ಲಿಂಕ್ ಮಾಡಬಹುದು.

ಉದ್ಯೋಗದಾತರ ಏಕೀಕೃತ ಪೋರ್ಟಲ್ ನಲ್ಲಿ (Employer unified portal) ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿದ್ದು ಸಹಿ ಮಾಡಿದ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್‌ನ  ಪಿಡಿಎಫ್ ಅನ್ನು ತಮ್ಮ ಲಾಗಿನ್ ಮೂಲಕ ಅಪ್‌ಲೋಡ್ ಮಾಡಲು ಉದ್ಯೋಗದಾತರಿಗೆ ಅನುವು ಮಾಡಿಕೊಡಲಾಗಿದೆ.

ಹೆಚ್ಚಿನ ವಿವರಗಳಿಗಾಗಿ www.epfindia.gov.in  ಗೆ ಭೇಟಿ ನೀಡಿ ಅಥವಾ ಇಮೇಲ್  ro.chikmagalur@epfindia.gov.in  ಮುಖಾಂತರ ಅಥವಾ ದೂರವಾಣಿ 08262-234106, 9482177426 ಗೆ ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ಕಚೇರಿ ಚಿಕ್ಕಮಗಳೂರು ವ್ಯಾಪ್ತಿಗೆ ಬರುವ ಚಂದಾದಾರರು ಮತ್ತು ಉದ್ಯೋಗದಾತರು ಇದರ ಸದುಪಯೋಗವನ್ನು ಪಡೆಯಬೇಕೆಂದು ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತರಾದ ಸಚಿನ್ ಟಿ. ಶೆಟ್ಟಿ ತಿಳಿಸಿದ್ದಾರೆ.



Post a Comment

Previous Post Next Post