ನಾಲ್ವರಿಗೆ ಕೊರೊನಾ ಸೋಂಕು

ಸಕಲೇಶಪುರ: ತಾಲೂಕಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದು,  ಮಂಗಳವಾರ ಪೊಲೀಸ್ ಜೀಪ್ ಚಾಲಕ ಸೇರಿದಂತೆ ನಾಲ್ವರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ.
ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಪರೀಕ್ಷೆ ಒಳಪಟ್ಟಿದ್ದ ಚಾಲಕನ ಪರೀಕ್ಷೆ ವರದಿ ಮಂಗಳವಾರ ಲಭ್ಯವಾಗಿದ್ದು, ಪಾಸಿಟಿವ್ ದೃಢಪಟ್ಟಿದೆ.  ಸೋಂಕಿತ ಚಾಲಕನನ್ನು ಚಿಕಿತ್ಸೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದ್ದು, ಪಿಎಸ್‍ಐ ಸೇರಿದಂತೆ ಠಾಣೆಯ 30 ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಠಾಣೆಯ ಸೀಲ್‍ಡೌನ್ ಹಿನ್ನೆಲೆಯಲ್ಲಿ ಠಾಣೆಯ 100 ಮೀಟರ್‍ನಲ್ಲಿ ಸಂಚಾರ ನಿಷೇಧಿಸಲಾಗಿದೆ. 
 ಆನೆಮಹಲ್, ಆಚಂಗಿ ಹಾಗೂ ವೆಂಕಟಿಹಳ್ಳಿ ಗ್ರಾಮದ ವ್ಯಕ್ತಿಗಳಲ್ಲೂ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಮುಂಜಾಗ್ರತ ಕ್ರಮವಾಗಿ ಸೋಂಕಿತರು ವಾಸಿಸುವ ಮನೆಯ ಸುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿಷೇಧಿಸಿದೆ.
ಕೊರೊನ ಮಹಿಳೆ ಸಾವು; ಪಟ್ಟಣದ ಮಕಾನ್ ರಸ್ತೆಯ ನಿವಾಸಿ ಮಹಿಳೆಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಗದೆ ಮೃತ ಪಟ್ಟಿದ್ದಾರೆ ಅವರಿಗೆ ವೈದಕೀಯ ಪರಿಕ್ಷೆಯಲ್ಲಿ ಕೊರನವಿತ್ತೆಂದು ತಿಳಿದು ಬಂದಿದ್ದು ಕುಟುಂಬದರು  ಅವರನ್ನು ಅಲ್ಲಿಯೆ ಅಂತ್ಯ ಕ್ರಿಯೆ ಮಾಡಲು ಕುಟುಂಬದವರು ನಿಶ್ಚಿಯಿಸಿದ್ದಾರೆ.

Post a Comment

Previous Post Next Post