ಶ್ರೀಗಂಧ ಕಳವು: ಇಬ್ಬರ ಬಂಧನ

ಸಕಲೇಶಪುರ: ತಾಲೂಕಿನ ಕಿರುಹುಣಸೆ ಗ್ರಾಮದಲ್ಲಿ  ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಕಲೇಶಪುರ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. 
ಆಲೂರು ತಾಲೂಕು ಕುದ್ರವಳ್ಳಿ ಗ್ರಾಮದ ಅಲೆಕ್ಸ್ ಹಾಗೂ ಸಕಲೇಪುರ ತಾಲೂಕು ದರ್ಬಾರಪೇಟೆಯ ಶಿವಕುಮಾರ್ ಬಂಧಿತರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆರೋಪಿಗಳಿಂದ  ಒಂದು ಟಿವಿಎಸ್ ಬೈಕ್ ಹಾಗು ಒಂದು ಕತ್ತಿ ಹಾಗೂ 18 ಕೆಜಿ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ. 
ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಆಲೂರು ಹಾಗೂ ಸಕಲೇಶಪುರ ವಲಯದಲ್ಲಿ ಸಾಕಷ್ಟು ಶ್ರೀಗಂಧ ಕಳ್ಳತನ ನಡೆಸಿದ್ದರು ಎನ್ನಲಾಗಿದೆ.

Post a Comment

Previous Post Next Post