ಆಲೂರು: ಪಟ್ಟಣದ ತ್ಯಾಜ್ಯ ವಿಲೇವಾರಿ ಕುರಿತಂತೆ ನಿದ್ರಾವಸ್ಥೆಯಲ್ಲಿದ್ದ ಆಲೂರು ಪಟ್ಟಣ ಪಂಚಾಯಿತಿ ಕೊನೆಗೂ ಎಚ್ಚೆತ್ತುಕೊಂಡಿದೆ.
ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡದೆ ಪಟ್ಟಣವು ಗಬ್ಬೆದ್ದು ಹೋಗಿರುವ ಬಗ್ಗೆ ಮೂರು ದಿನಗಳ ಹಿಂದೆ ಜನಮಿತ್ರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ವರದಿಗೆ ಇದರಿಂದ ಎಚ್ಚೆತ್ತುಕೊಂಡಿರುವ ಪಟ್ಟಣ ¥ಂಚಾಯಿತಿ ಆಡಳಿತ ಮಂಡಳಿ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಂಡಿದೆ.
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದು, ಚರಂಡಿಗಳು ತುಂಬಿಕೊಂಡು ಮಳೆ ನೀರು ಸುಸೂತ್ರವಾಗಿ ಹರಿದುಹೋಗಲೂ ಸಾಧ್ಯವಾಗದಂಥ ದುಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಾಗಿ ಸಾರ್ವಜನಿಕರ ಧ್ವನಿಯಾಗಿ ಪತ್ರಿಕೆ ವರದಿಗೆ ಫಲಶೃತಿ ಎಂಬಂತೆ ನಿದ್ರೆಯಿಂದ ಎಚ್ಚೆತ್ತ ನಗರಸಭೆಯ ಆಡಳಿತ ಮಂಡಳಿ ಕೊನೆಗೂ ಸ್ವಚ್ಛತೆಗೆ ಮುಂದಾಗಿರುವುದು ಸಮಾಧಾನ ತಂದಿದೆ. ಕಸದ ರಾಶಿಯಿಂದಾಗಿ ಮೂಗುಮುಚ್ಚಿಕೊಂಡು ನಡೆದಾಡುತ್ತಿದ್ದ ಸಾರ್ವಜನಿಕರ ಸಮಸ್ಯೆಯನ್ನು ಕಸ ವಿಲೇವಾರಿ ಮಾಡಿದ ಕೀರ್ತಿ ಪಟ್ಟಣ ¥ಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿ/ಸಿಬ್ಬಂದಿಗೆ ಸಲ್ಲುತ್ತದೆ. ಸೋಮುವಾರದಿಂದ ಮಂಗಳವಾರದ ವರೆಗೂ ನಿರಂತರವಾಗಿ ಪಟ್ಟಣ ¥ಂಚಾಯಿತಿಯ ಎಲ್ಲ ಸ್ಥಳಗಳಲ್ಲಿಯ ತ್ಯಾಜ್ಯವನ್ನು ತೆರವು ಮಾಡುವ ಮೂಲಕ ಸ್ವಚ್ಛತೆಗೆ ಕ್ರಮಕೈಗೊಂಡಿದ್ದಾರೆ.
ಪಟ್ಟಣ ¥ಂಚಾಯಿತಿ 11 ವಾರ್ಡುಗಳಲ್ಲಿ ನೈರ್ಮಲ್ಯ ಕಾಪಾಡಲು ಕೇವಲ 6 ಪೌರ ಕಾರ್ಮಿಕರನ್ನು ನೇಮಕಮಾಡಿಕೊಂಡಿತ್ತು ಆದರೆ ಅವರಲ್ಲಿ 2 ಹಲವು ತಿಂಗಳಿನಿಂದ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ ಬಳಲುತ್ತಿದ್ದಾರೆ. ಪಟ್ಟಣದಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅದ್ದರಿಂದ ಕಸ ವಿಂಗಡಣೆ ಸಂಸ್ಕøರಣೆ ಅಶಿಸ್ತಿಗೆ ದಂಡವನ್ನು ವಿಧಿಸಲು ತೀರ್ಮಾನಿಸಲಾಗಿದ್ದು ಪಟ್ಟಣದಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆದರೆ ಅಂತವರಿಗೆ 5 ಸಾವಿರ ರೂ ದಂಡ ವಿಧಿಸಲಾಗುವುದು. ಪಟ್ಟಣ ¥ಂಚಾಯಿತಿ ವತಿಯಿಂದ ಮನೆ ಬಾಗಿಲಿಗೆ ಬರುವ ಕಸದ ವಾಹನಕ್ಕೆ ಹಾಕಬೇಕು ಎಂದು ಮುಖ್ಯಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
Tags
ಆಲೂರು