ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಆಗ್ರಹ

ಬೇಲೂರು: ಅಂಗನವಾಡಿ ಕೇಂದ್ರಗಳು, ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸುರಕ್ಷತೆ ಒದಗಿಸಬೇಕು ಕೋವಿಡ್ -19 ವಾರಿಯರ್ಸ್ ಎಂದು ಪರಿಗಣಿಸಿ ಹೆಚ್ಚವರಿ ವೇತನ ಹಾಗೂ 50 ಲಕ್ಷ ರೂ.ವಿಮೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಹೊರ  ಆವರಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಸಿಐಟಿಯು ತಾಲೂಕು ಅಧ್ಯಕ್ಷೆ ಮಂಜುಳ ಕಾರ್ಯಕರ್ತೆಯರು, ಕೋವಿಡ್ - 19 ನಿಯಂತ್ರಣಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಅಪಾರವಾಗಿ ಶ್ರಮಿಸಿದ್ದಾರೆ. 
ಆಶಾ  ಕಾರ್ಯಕರ್ತರಂತೆ ಅಂಗನವಾಡಿ ಸಿಬ್ಬಂದಿಗಳು ಸೇರಿದಂತೆ ೬೫೦ ಕ್ಕೂ ಹೆಚ್ಚು ಜನರು ಕೊರಾನ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಸರ್ಕಾರ ನಮ್ಮನ್ನು ಕಡೆಗಣಿಸಿದ್ದು ಆಶಾ ಕಾರ್ಯಕರ್ತೆಯರಿಗೆ ೩ ಸಾವಿರ ಸಹಾಯ ಧನ ನೀಡುತ್ತಿದ್ದು,ನಮ್ಮನ್ನು ಏಕೆ ಪರಿಗಣಿಸುತ್ತಿಲ್ಲ.ನಮ್ಮ ಮೇಲೆ ಮಲತಾಯಿ ದೋರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅದಲ್ಲದೆ ಬಿಸಿಯೂಟದ ಕಾರ್ಯಕರ್ತೆಯರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಸರ್ಕಾರ ಅವರಿಗೆ ೪ ತಿಂಗಳಿಂದ ವೇತನವನ್ನೇ ನೀಡಿಲ್ಲ.ಎಂತಹ ತುರ್ತು ಸಂದರ್ಭದಲ್ಲಿ ಕೆಲಸ ಮಾಡುವ ನಮಗೆ 
 ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ಗಳನ್ನು, ಗ್ಲೌಸ್ಗಳನ್ನು ಕೊಡದ ಕಾರಣ ಕೆಲವು ತಾಲೂಕಿನ ಕಾರ್ಯಕರ್ತೆಯರು ಮತ್ತು ಅವರ ಮಗುವಿಗೆ ಸೋಂಕು ತಗುಲಿದೆ. ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ರೀತಿಯ ಸಂರಕ್ಷಣೆಯಿಲ್ಲದೇ ಆತಂಕದಲ್ಲಿ ಕೆಲಸ ಮಾಡುವಂತಾಗಿದೆ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿದರು.
ನಿವೃತ್ತಿಯಾಗಿರುವ ಅಂಗನವಾಡಿ ನೌಕರರಿಗೆ ನಿವೃತ್ತಿ ವೇತನ ಕೊಡಬೇಕು. ಮತ್ತು ಈಗಿರುವ ನಿವೃತ್ತಿ ವೇತನದ ಪದ್ಧತಿಯನ್ನು ಬದಲಾಯಿಸಬೇಕು. ಮೇಲ್ವಿಚಾರಕಿಯರ ಹುದ್ದೆಗೆ ಶೇ.75ರ ಮಿತಿಯನ್ನು ಶೇ.100ಕ್ಕೆ ವಿಸ್ತರಿಸಬೇಕು ಎಂದೂ ಮನವಿ ಮಾಡಿದರು.

ಸಿಐಟಿಯು ಕಾರ್ಯದರ್ಶಿ ಸಾವಿತ್ರಮ್ಮ, ಕಾಮಾಕ್ಷಿ, ಚಂದ್ರಮ್ಮ,ಜಯಮ್ಮ, ಯಶೋಧ   ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Post a Comment

Previous Post Next Post