ಕಳಚಿಕೊಂಡ ಬಸ್ ಚಕ್ರ, ಪ್ರಾಣಪಾಯದಿಂದ ಪರಾದ ಪ್ರಯಾಣಿಕರು.

ಅರಕಲಗೂಡು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ  ಮುಂಭಾಗದ ಚಕ್ರಕಳಚಿ ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ದೊಡ್ಡಮಗ್ಗೆ  ಬಳಿ ಶನಿವಾರ ಸಂಜೆ 6 ಗಂಟೆ ಸಮಯದಲ್ಲಿ ಸಂಭವಿಸಿದೆ. 
 ಕೊಣನೂರಿನಿಂದ   ಹಾಸನಕ್ಕೆ ತೆರಳುತ್ತಿದ್ದ ವಾಹನದ ಮುಂಭಾಗದ  ಚಕ್ರ ದೀಡೀರ್ ಕಳಚಿಕೊಂಡಿತು. ಕೂಡಲೆ  ಪರಿಸ್ಥಿತಿಯನ್ನು ಅರಿತ ಚಾಲಕ ನವೀನ್  ವಾಹನವನ್ನು ನಿಯಂತ್ರಿಸಿ ನಿಲುಗಡೆಮಾಡುವಲ್ಲಿ ಯಶಸ್ವಿಯಾದರು. ಹೀಗಾಗಿ ಬಸ್ನೊಳಗೆ ಇದ್ದ 22 ಮಂದಿ ಪ್ರಯಾಣಿಕರು ಯಾವುದೇ  ತೊಂದರೆಯಿಲ್ಲದೆ ಪಾರಾದರು.

Post a Comment

Previous Post Next Post