ಕಳೆದ ಒಂದು ತಿಂಗಳಿಂದ ಆಶಾ ಕಾರ್ಯಕರ್ತರುಗಳು, ತಮ್ಮ ಬೇಡಿಕೆಗಳನ್ನು, ಮುಂದಿಟ್ಟುಕೊಂಡು ನಿರಂತರ ಧರಣಿ ಮಾಡುತ್ತಿದ್ದಾರೆ. ಕೋವಿಡ್ -19 ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳಿಗೆ ಸರಕಾರ ಏನೆಲ್ಲ ಮಾಹಿತಿ ಕೇಳಿದ್ದು, ಅದೆಲ್ಲವನ್ನೂ ಕೂಡ ಮನೆಮನೆಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿ. ಸರ್ಕಾರಕ್ಕೆ ಒದಗಿಸುವ ಮಹತ್ವಪೂರ್ಣ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅವರ ಜೀವರಕ್ಷಣೆಗೆ ಬೇಕಾದಂತಹ ಮಾಸ್ಕ್ ಸ್ಯಾನಿಟೈಸರ್. ಗ್ಲವ್ಸ್ ಇನ್ನಿತರ ಅಗತ್ಯ ಪೂರ್ಣ ಸಲಕರಣೆಗಳನ್ನು ನೀಡಲು ಇನ್ನೆಷ್ಟು ದಿನ ಬೇಕು ಎಂಬುದು ನಮ್ಮ ಪ್ರಶ್ನೆ.
ಅವರಿಗೆ ನೀಡುತ್ತಿರುವ ಮಾಸಿಕ ವೇತನವನ್ನು. 12 ಸಾವಿರ ರೂಗಳಿಗೆ ನಿಗದಿ ಮಾಡಬೇಕು ಎಂದು ಬೆಳಗೋಡು ಹೋಬಳಿ ಬಾಳ್ಳುಪೇಟೆ ಜಯಕರ್ನಾಟಕ ಸಂಘಟನೆ ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಜಯಕರ್ನಾಟಕ ಸಂಘಟನೆ ಆಶಾ ಕಾರ್ಯಕರ್ತರು ಒಟ್ಟಿಗೆ ಸೇರಿ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು. ದಯವಿಟ್ಟು ಅತಿ ಜರೂರಾಗಿ
ಅಗತ್ಯ ವಸ್ತುಗಳ ಪೂರೈಕೆ ಮತ್ತು ಮಾಸಿಕ ಸಂಬಳವನ್ನು12ಸಾವಿರ ನಿಗದಿ ಮಾಡಬೇಕಾಗಿ ನಿಮ್ಮ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಹೋಬಳಿ ಅಧ್ಯಕ್ಷರು ಉಬೈದ್ ಬಾಳ್ಳು, ಉಪಾಧ್ಯಕ್ಷರು ಸಂತೋಷ, ಸಂಚಾಲಕರು ಅಬ್ದುಲ್ ಮಜೀದ್, ಬಾಳ್ಳುಪೇಟೆ ಉಪಾಧ್ಯಕ್ಷರು ಹಮೀದ್ ಸಲ್ಮಾನ್ ಹಾಗೂ ಯೆಡ್ಡೆಹಳ್ಳಿ ಆರ್ ಮಂಜುನಾಥ್ ಇದ್ದರು.
Tags
ಸಕಲೇಶಪುರ