ಹಾಸನ: ನಗರದ ಹೊಸ ಬಸ್ ನಿಲ್ದಾಣ ಎದುರು ಹೌಸಿಂಗ್ ಬೋರ್ಡ್ನಲ್ಲಿರುವ ಎಲ್ ಅಂಡ್ ಟಿ ಫೈನಾನ್ಸಿಯವರಾದ ಹೆಚ್.ಆರ್. ದೀಪಕ್ ಎಂಬುವರು ಟ್ರಾಕ್ಟರ್ ವಾಹನವನ್ನು ಸೀಜ್ ಮಾಡಿರುವುದರ ವಿರುದ್ಧ ಪ್ರತಿಭಟಿಸಿ ಕಂಪನಿಗೆ ಬೀಗ ಹಾಕಲು ಮುಂದಾದರು.
ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಅದ್ದಿಹಳ್ಳಿ ಗ್ರಾಮದ ನಿವಾಸಿ ಹೆಚ್.ಆರ್. ದೀಪಕ್ ರವರು
ಇತ್ತೀಚೆಗೆ ಹೊಸದಾದ ಒಂದು ಸ್ವರಾಜ್ ಕಂಪನಿಯು ರೂ. 7,50,000 ರೂಗಳ ಟ್ರ್ಯಾಕ್ಟರನ್ನು ಎಲ್ ಅಂಡ್ ಟಿ ಫೈನಾನ್ಸಿನಿಂದ ರೂ. 5,10,000/- ರೂಗಳನ್ನು ಸಾಲ ಮಾಡಿ ಖರೀದಿಸಿದ್ದು, ನಂತರ ಕೆಲ ದಿನಗಳಲ್ಲಿ ಕೊರೊನಾ ಕಾಯಿಲೆ ಬಂದು ಲಾಕ್ ಡೌನ್ ಆಗಿ ಈ ವಾಹನದಿಂದ ಬರುವ ಆದಾಯ ನಿಂತು ಹೋಗಿದೆ ಎಂದರು. ದೀಪಕ್ ರವರು ಒಂದು ಕಂತು ಹಣ ರೂ. 74,000 ರೂಗಳನ್ನು ಮರುಪಾವತಿ ಮಾಡಿದದು, ಆದರೆ ಎಲ್ ಅಂಡ್ ಟಿ ಫೈನಾನ್ಸ್ ನವರು ಸದರಿ ದೀಪಕ್ ಅವರಿಗೆ ಯಾವುದೇ ಮುನ್ಸೂಚನೆ ನೀಡದೇ ಟ್ಯಾಕ್ಟರ್ ರನ್ನು ಸೀಜ್ ಮಾಡಿದ್ದಾರೆ. ಇವರು ಊರಿನಲ್ಲಿ ಇಲ್ಲದ ಸಮಯದಲ್ಲಿ ಸದರಿ ಮನೆ ಮುಂದೆ ನಿಲ್ಲಿಸಿದ್ದ ವಾಹನವನ್ನು ಕದ್ದೊಯ್ದ ಇರುತ್ತಾರೆ. ಹಾಗೂ ಇವರ ವಾಹನವನ್ನು ಕಂದಲಿ ಸಮೀಪ ಇರುವ ಶೌಡ್ ಗೆ ಹಾಕಿದ್ದರು. ಅದಾದ ನಂತರ ನಾವುಗಳು ವಾಹನ ಹುಡುಕಿಕೊಂಡು ಹೋದಾಗ ಕಂದಲಿ ಹತ್ತಿರ ಶೆಡ್ ನಲ್ಲಿ ವಾಹನ ಇರಲಿಲ್ಲ. ಫೈನಾನ್ಸ್ ರವರನ್ನು ಹೋಗಿ ಕೇಳಲಾಗಿ ಕೊರೋನಾ ಕಾಯಿಲೆ ಇದ್ದ ಸಮಯದಲ್ಲೇ ಬೇರೆಯವರಿಗೆ ಮಾರಾಟ ಮಾಡುತ್ತಾರೆ ಎಂದು ತಿಳಿಸಿರುತ್ತಾರೆ. ದೀಪಕ್ ಅವರು ಬಾಕಿ ಇರುವ ಕಂತು ಕಟ್ಟಿದ ತಕ್ಷಣ ಸದರಿ ವಾಹನವನ್ನು ತರಿಸಿ ಕೊಡುವುದಾಗಿ ಸದರಿ ಎಲ್.ಟಿ. ಫೈನಾನ್ಸ್ ನವರು ತಿಳಿಸಿರುವುದಾಗಿ ಹೇಳಿದರು. ಇದುವರೆವಿಗೂ ದೀಪಕ್ ಅವರಿಗೆ ವಾಹನ ನೀಡುವುದಿಲ್ಲ, ಇವರಿಗೆ 4-5 ಬಾರಿ ಹೋಗಿ ಕೇಳಿದ್ದಾಗ್ಯೂ ಸಹ ಸತಾಯಿಸುವ ಉತ್ತರ ಕೊಡುತ್ತಿರುತ್ತಾರೆ. ಇದರ ಬಗ್ಗೆ ನಮಗೆ ನ್ಯಾಯ ಸಿಗಬೇಕು. ಹಾಗೂ ದೀಪಕ್ ಅವರಿಗೆ ವಾಹನವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ಎಲ್ ಅಂಡ್ ಟಿ ಫೈನಾನ್ಸಿಯರ್ ಕಛೇರಿ ಮುಂದೆ ಬಂದಾಗ ಬಾಗಿಲು ತೆಗೆಯದೇ ಬೀಗ ಹಾಕಿಕೊಂಡು ಅಲ್ಲಿಂದ ಪಲಾಯನ ಮಾಡಿದ್ದರು. ನಮಗೆ ನ್ಯಾಯ ಸಿಗುವವರೆಗೂ ಇದಕ್ಕೆ ಮತ್ತೊಂದು ಬೀಗ ಜಡಿಯುವುದಾಗಿ ರೈತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಮಹಬೂಬ್ ಪಾಷಾ, ಲತಾ, ಮೀಸೆ ಮಂಜಣ್ಣ, ಇತರರು ಪಾಲ್ಗೊಂಡಿದ್ದರು.
Tags
ಹಾಸನ